ಸಾಹಿತಿ ಹೇಮಾ ಬಿರಾದಾರಗೆ ಗೌರವ ಸತ್ಕಾರ

ಸಾಹಿತಿ ಹೇಮಾ ಬಿರಾದಾರಗೆ ಗೌರವ ಸತ್ಕಾರ  Writer Hema Biradar Honoured


ತಾಳಿಕೋಟಿ 06: ತಾಲೂಕಿನ ಪಡೇಕನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಸಾಹಿತಿ ಹೇಮಾ ಬಿರಾದಾರ ಅವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ, ಯುವ ಘಟಕ ಹಾಗೂ ಕದಳಿ ವೇದಿಕೆ ವತಿಯಿಂದ ಗೌರವಿಸಲಾಯಿತು. ಪಟ್ಟಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಹೇಮಾ ಬಿರಾದಾರ ಅವರಿಗೆ ಗೌರವ ಸಮರ​‍್ಿಸಲಾಯಿತು. ಈ ಸಂದರ್ಭದಲ್ಲಿ ಕದಳಿ ವೇದಿಕೆ ಅಧ್ಯಕ್ಷೆ ಉಮಾ ಬಸವರಾಜ ಸಾಲಂಕಿ, ಪುರಸಭೆ ಮಾಜಿ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಸಹಕಾರಿ ಬ್ಯಾಂಕ್ ನಿರ್ದೇಶಕಿ ಗಿರಿಜಾ ಕೊಡಗಾನೂರ, ಶಾರದಾದೇವಿ ಕೋ-ಆಪ್ ಸೊಸೈಟಿ ನಿರ್ದೇಶಕಿ ಸುರೇಖಾ ಸಾಲಂಕಿ, ನಿವೃತ್ತ ಶಿಕ್ಷಕ ಜಿ.ಎಸ್‌. ಜಮ್ಮಲದಿನ್ನಿ, ಸಾಹಿತಿ ಶ್ರೀಕಾಂತ ಪತ್ತಾರ, ಶಿಕ್ಷಕ ಅಪ್ಪಾಸಾಹೇಬ ಮೂಲಿಮನಿ, ಯುವ ಘಟಕದ ಅಧ್ಯಕ್ಷ ಕಾಶಿನಾಥ ಸಜ್ಜನ, ಶಿಕ್ಷಕ ಆರ್‌.ಎಸ್‌. ವಾಲಿಕಾರ, ಖಾಜಾ ಹುಸೇನ್ ಮುಲ್ಲಾ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ಅಶೋಕ ಚಿನಗುಡಿ, ರಾಜು ಸಜ್ಜನ, ಶರಣೆ ವಿಶಾಲಾಕ್ಷಿ ಬಡಿಗೇರ, ನಿವೃತ್ತ ಶಿಕ್ಷಕಿ ಬಿ.ಟಿ. ಸಜ್ಜನ, ತೇಜಸ್ವಿನಿ ಡಿಸಲೆ, ಶಿಕ್ಷಕ ಸಿದ್ದು ಕರಡಿ, ಸುಜಾತಾ ಯಡ್ರಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.