ಮಹಲಿಂಗಪುರ

ಗುರು ರಾಘವೇಂದ್ರರ ಆರಾಧನೆ ಸಂಪನ್ನ: ಅದ್ದೂರಿ ರಥೋತ್ಸವ

ಗುರು ರಾಘವೇಂದ್ರರ ಆರಾಧನೆ ಸಂಪನ್ನ: ಅದ್ದೂರಿ ರಥೋತ್ಸವ

ಮಹಾಲಿಂಗಪುರ 13: ಸ್ಥಳೀಯ ವಾಸವಿನಗರ ಮತ್ತು ಎಪಿಎಂಸಿ ರಸ್ತೆಯಲ್ಲಿರುವ ಶಾಖಾ ಮಠದ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಸಂಭ್ರಮ,ಸಡಗರದಿಂದ ಜರುಗಿದವು. 

ಪೂರ್ವಾರಾಧನೆ,ಮಧ್ಯಾರಾಧನೆ ಹಾಗೂ ಉತ್ತರಾಧನೆಯು ರವಿವಾರ,ಸೋಮವಾರ, ಮಂಗಳವಾರ ನಡೆದವು.ಸೋಮವಾರ ಎಪಿಎಂಸಿಯ ರಾಘವೇಂದ್ರರ ರಥೋತ್ಸವ,ಮಂಗಳವಾರ ವಾಸವಿನಗರದ ರಾಘವೇಂದ್ರರ ರಥೋತ್ಸವ ವೈಭವದಿಂದ ನಡೆಯಿತು. 

ಪಂಚಾಮೃತ ಅಭಿಷೇಕ, ಕನಕಾಭಿಷೇಕ, ನೈವೇದ್ಯ, ಅಲಂಕಾರ, ಹಸ್ತೋದಕ ಮಹಾಮಂಗಳಾರತಿ, ತೀರ್ಥ ಪ್ರಸಾದ, ಸೇವಾಕಾರ್ಯ ಮತ್ತು ಭಜನೆ ಈ ಉತ್ಸವದಲ್ಲಿ ಏರಿ​‍್ಡಸಲಾಗಿತ್ತು. ಬೆಳ್ಳಿರಥ ನಿರ್ಮಾಣ ಮತ್ತು ದೇವಸ್ಥಾನ ಕಾರ್ಯ ಪ್ರಗತಿಗೆ ಅನೇಕ ದಾನಿಗಳು ಧನ ಸಹಾಯ ಮಾಡಿದರು. ಭಕ್ತಾದಿಗಳು ಮೂರು ದಿನಗಳ ಕಾಲ ಗುರು ರಾಘವೇಂದ್ರರ ಆಶೀರ್ವಾದ ಮತ್ತು ಮಹಾಪ್ರಸಾದ ಪಡೆದು ಸಂಪನ್ನರಾದರು. 


ಸುದ್ದಿ ಓದಿ