ವಿಶ್ವನಿಮೋನಿಯಾ ದಿನಾಚಾರಣೆ

ತಾಂಬಾ: ಪ್ರತಿ ವರ್ಷ ನಿಮೋನಿಯಾವನ್ನು ವಿಶ್ವ ದಿನಾಚಾರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಾಲೂಕ ಆರೋಗ್ಯ ಶಿಕ್ಷಣ ಅಧಿಕಾರಿಗಳು ಹೇಳಿದರು. 

ಗ್ರಾಮದ ಶ್ರೀ ಮಲ್ಲಿಕಾಜರ್ುನ ದೇವಾಲಯದಲ್ಲಿ ಹಮ್ಮಿಕೊಂಡ ವಿಶ್ವನಿಮೋನಿಯಾ ದಿನಾಚಾರಣೆಯನ್ನು ದೀಪ ಬೇಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಖಾಯಿಲೆ ಬರದಂತೆ ತಡೆಯುವುದು ಮತ್ತು ನಿಮೋನಿಯಾದ ಚಿಕಿತ್ಸೆ ನೀಡುವ ಬಗ್ಗೆ ಜನ ಜಾಗೃತಿ ಮೂಡಿಸುವುದಾಗಿದೆ. ಮಕ್ಕಳಲ್ಲಿ ಅತಿ ಹೆಚ್ಚು ಸಾವಿಗೆ ಕಾರಣವಾಗುವಂತಹ ಸೋಂಕು ಎಂದರೆ ಅದು ನಿಮೋನಿಯಾ ಆಗಿದೆ.

ತಾಂಬಾ ಗ್ರಾಮದಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವಂತಹ ಮಕ್ಕಳಿಗೆ ನಿಮೋನಿಯಾ ಹರಡುವುದು ಹೆಚ್ಚು ಜ್ವರ, ತಲೆನೋವು, ನಿಶಕ್ತಿ, ಉಸಿರಾಟದ ತೊಂದರೆ ಎದೆನೋವು, ದಮ್ಮು, ಕೆಮ್ಮು,  ಹಸಿವು ಇಲ್ಲದಿರುವುದು, ಇದರ ಲಕ್ಷಣಗಳು ನಿಮೋನಿಯಾ ಶ್ವಾಕೋಶವನ್ನು ಬಾದಿಸುವ ಸೋಂಕಾಗಿದೆ. ಇದು ಎಲ್ಲರ ಮೇಲೆ ಪರಿಣಾಮ ಬಿರುತ್ತದೆ ಎಂದು ಹೇಳಿದರು.

ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಎ.ಎಸ್. ಪಾಟೀಲ ಮಾತನಾಡಿ, ಅಧುನಿಕ ಜೀವನ ಶೈಲಿ ಇತ್ತಿಚಿನ ದಿನಗಳಲ್ಲಿ ಪ್ರತಿ ಮನೆ-ಮನೆಗೂ ಸಕ್ಕೆರೆ ಖಾಯಿಲೆ ಇರುವ ರೋಗಿಗಳು ಕಾಣಿಸಿಕೊಳ್ಳುತ್ತಿದ್ದಾರೆ ಅದಕ್ಕೆ ಕಾರಣ ಅಧುನಿಕ ಅಧುನಿಕ ಪದ್ಧತಿ  ಜೀವನ ಶೈಲಿ ಒತ್ತಡಪೂರ್ಣ ಬಿರುತ್ತದೆ. ದೈಹಿಕ ಚಟುವಟಿಕೆ ಇಲ್ಲದಿರುವುದೆ ಕಾರಣ.  5-6 ವರ್ಷಗಳಿಂದ ಮಕ್ಕಳಲ್ಲಿ ಕೂಡಾ ಸಕ್ಕರೆ ಖಾಯಲೆ ಪತ್ತೆಯಾಗುತ್ತದೆ. ಮದುಮೇಹ ಸದ್ದಿಲ್ಲದೆ ಕೊಲ್ಲುವಂತಹ ಖಾಯಲೆಯಾಗಿದೆ ಎಚಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂರಕ್ಷಣಾಧಿಕಾರಿಗಳು ಆರ್.ಎಸ್. ಬಿರಾದಾರ, ಆರ್.ಡಿ. ಸನ್ನದಿ, ಪಿ.ಎಚ್.ಸಿ.ಡಿ. ಆಶಾಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು. ಜಿ.ಎಚ್.ಪಿಂಜಾರ ಸ್ವಾಗತಿಸಿ ವಂದಿಸಿದರು.