ವಿಶ್ವ ಮಲೇರಿಯಾ ದಿನಾಚರಣೆ ಜನಜಾಗೃತಿ ಜಾಥಾಗೆ ಚಾಲನೆ

World Malaria Day awareness march launched

ಲೋಕದರ್ಶನ ವರದಿ 

ವಿಶ್ವ ಮಲೇರಿಯಾ ದಿನಾಚರಣೆ ಜನಜಾಗೃತಿ ಜಾಥಾಗೆ ಚಾಲನೆ 

ಬೆಳಗಾವಿ 25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭರತೇಶ ಏಜುಕೇಷನ್ ಟ್ರಸ್ಟ ಹಲಗಾ ಬೆಳಗಾವಿ. ಇವರ ಸಂಯುಕ್ತ ಆಶ್ರಯದಲ್ಲಿ ಏ.25 ರಂದು ವಿಶ್ವ ಮಲೇರಿಯಾ ದಿನಾಚರಣೆಯನ್ನು ಆಚರಿಸಲಾಯಿತು. 

ಭರತೇಶ ಏಜುಕೇಷನ್ ಸಂಸ್ಥೆಯ ಶೂಶ್ರಷಣಾ ಕಾಲೇಜಿನ ಪ್ರಾಚಾರ್ಯರಾದ ಡಾ ಸಂಗೀತಾ ಮುರಡೆಶ್ವರ ಅವರು ಹಲಗಾ ಗ್ರಾಮದಲ್ಲಿ ಜರುಗಿದ ಮಲೇರಿಯಾ ಜಾಗೃತಿ ಜಾಥಾಗೆ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ ವಿವೇಕ ಹೊನ್ನಳ್ಳಿ ಅವರು 2027 ನೇ ಸಾಲಿಗೆ ಮಲೇರಿಯಾ ಮುಕ್ತ ಮಾಡ ಬೇಕಾಗಿರುವದರಿಂದ ಈ ವರ್ಷದ ಘೋಷಣೆ “ ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ, ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸಲು ತಿಳಿಸಿದರು. 

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಶ್ವನಾಥ ಬೋವಿಯವರು ಮಾತನಾಡಿ ನಿಂತ ನೀರು ಸೊಳ್ಳೆಗಳ ಉತ್ಪನ್ನಗಳ ತಾಣವಾಗಿದ್ದು ನೀರು ನಿಲ್ಲದ ಹಾಗೆ ಗ್ರಾಮಗಳಲ್ಲಿ ಕ್ರಮವಹಿಸುವುದು, ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಜೀವ ವೈದ್ಯಕೀಯ ತ್ಯಾಜ್ಯಗಳನ್ನು ಮತ್ತು ಘನ ತ್ಯಾಜ್ಯಗಳನ್ನು ಸಮರ​‍್ಕವಾಗಿ ವಿಲೇವಾರಿ ಮಾಡಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಕ್ರಮವಹಿಸುವದರಿಂದ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ವಲಯ ಕೀಟ ಶಾಸ್ತ್ರಜ್ಞ ಗಣಪತಿ ಬಾರ್ಕಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ ವಿಶ್ವನಾಥ ಬೋವಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಳೆಗನ್ನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಯಲಿಗಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಧಿಕಾರಿ ಮತ್ತು ಸಿಬ್ಬಂದಿಗಳು, ಶೂಶ್ರಷಣಾ ಕಾಲೇಜಿನ ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳು, ವಿಧ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.