ತಾಲೂಕ ಪಂಚಾಯಿತಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ - ಡಾ. ಪುನೀತ್
World Environment Day celebrated at Taluk Panchayat premises: Environmental protection is everyone's
ರಾಣೇಬೆನ್ನೂರು 08: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರಸ್ತುತ ಅತಿಯಾದ ತಾಪಮಾನದಿಂದಾಗಿ ಮಾನವ ಜೀವಿ ಬಿಸಿಲಿನ ಧಗೆಗೆ ಬೆಂದು ಬರಡಾಗುತ್ತಿದ್ದಾನೆ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಮನೆಗೊಂದು ಗಿಡ ನಡುವ ಸಂಕಲ್ಪ ಮಾಡಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ಪುನೀತ್ ಬಿ. ಆರ್, ಕರೆ ನೀಡಿದರು. ಅವರು ವಾಣಿಜ್ಯ ನಗರದ ತಾಲೂಕ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಮುಂಜಾನೆ ಆಯೋಜಿಸಲಾಗಿದ್ದ, ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶಸಿ ನೆಟ್ಟು ಚಾಲನೆ ನೀಡಿ ಮಾತನಾಡಿದರು. ಮಾನವನ ಅತಿ ಆಸೆ ಮತ್ತು ದುರಾಸೆಯಂದಾಗಿ ನಮ್ಮ ಸುತ್ತಲ ಪರಿಸರ ನಿತ್ಯವೂ ವಿನಾಶವಾಗುತ್ತಿರುವ ಪರಿಣಾಮ ಇಂದು ಬಿಸಿಲಿನ ಧಗೆ ತಾಳಲಾರದೆ ಮಾನವ ಸೇರಿದಂತೆ ಪ್ರಾಣಿ, ಪಕ್ಷಿ ಜಲಚರಗಳು ಅನೇಕ ರೋಗ, ರುಜಿನಗಳಿಗೆ ಬಲಿಯಾಗುತ್ತಿದ್ದಾನೆ. ಎಂದರು. ವೇದ ಇತಿಹಾಸ ಕಾಲಗಳಿಂದಲೂ ನಮ್ಮೂರು ನಮ್ಮ ಪರಿಸರ ನಮ್ಮ ಸಂಪತ್ತು ಎನ್ನುವ ತಾತ್ವಿಕ ಅಡಿಯಲ್ಲಿ ನಮ್ಮ ಪೂರ್ವಜರು ಸಸ್ಯ ಸಂಪತ್ತು ಬೆಳೆಸಿದ್ದಾರೆ.
ಇಲ್ಲಿಯವರೆಗೂ ಅದನ್ನು ಉಳಿಸಿದ್ದಾರೆ ಉಳಿಸುತ್ತಲೇ ಬಂದಿದ್ದಾರೆ. ಭವಿಷ್ಯದ ಜನಾಂಗಕ್ಕಾಗಿ ಪ್ರತಿಯೊಬ್ಬ ನಾಗರಿಕರು ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ಮಾಡಬೇಕಾದ ಇಂದಿನ ಅಗತ್ಯವಿದೆ ಎಂದು ಡಾ. ಪುನೀತ್ ಅವರು ಕರೆ ನೀಡಿದರು. ಜಿಲ್ಲಾ ಪಂಚಾಯಿತಿ ಅರಣ್ಯ ವಿಭಾಗ ಮತ್ತು ತಾಲೂಕ ಪಂಚಾಯಿತಿ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಆವರಣದ ಸುತ್ತಲೂ 50ಕ್ಕೂ ಹೆಚ್ಚು ವಿವಿಧ ಪ್ರಭೇದಗಳ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಡಾ. ವೆಂಕಟೇಶ್ ಸಣ್ಣಬಿದರಿ ತಾಲೂಕ ತಹಶೀಲ್ದಾರ ಆರ್. ಹೆಚ್. ಭಗವಾನ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ, ತಾಲೂಕ ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕಕಿ ಸಾವಿತ್ರಮ್ಮ ಜಿ.ಎನ್, ನರೇಗಾ ಐ. ಈ.ಸಿ.ಸಂಯೋಜಕ ದಿಂಗಾಲೇಶ್ ಅಂಗೂರ, ಅರಣ್ಯ ತಾಂತ್ರಿಕ ಸಹಾಯಕ ಸುಪ್ರಿಯಾ ಕರಿಗೌಡರ, ಸೇರಿದಂತೆ ಮತ್ತೆ ಇತರ ಗಣ್ಯರು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 