ಜೀವ ವೈವಿದ್ಯತೆ ಸಂರಕ್ಷಣೆ ಕುರಿತು ಕಾರ್ಯಗಾರ ಯಶಸ್ವಿ

ಜೀವ ವೈವಿದ್ಯತೆ ಸಂರಕ್ಷಣೆ ಕುರಿತು ಕಾರ್ಯಗಾರ ಯಶಸ್ವಿ Workshop on biodiversity conservation successful

ಲೋಕದರ್ಶನ ವರದಿ 

  ಕಾರವಾರ  15:  ಕರ್ನಾಟಕ ಜೀವ ವೈವಿದ್ಯ ಮಂಡಳಿ ಹಾಗೂ ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಸಹೋಗದಲ್ಲಿ ಬುಧವಾರ ಸದಾಶಿವಗಡದ ಚಿತ್ತಾಕುಲ ಗ್ರಾಮ ಪಂಚಾಯತಯಲ್ಲಿ ಜೀವ ವೈವಿದ್ಯತೆ ಸಂರಕ್ಷಣೆ ಕುರಿತು ಒಂದು ದಿನದ ಕಾರ್ಯಗಾರವು ಯಶಸ್ವಿಯಾಗಿ ನಡೆಯಿತು.  

 ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಬಿ ನಾವಿ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ಕೆ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಗೌಡ ಭಾಗವಹಿಸಿದ್ದರು.  

 ಕರ್ನಾಟಕ ಜೀವ ವೈವಿದ್ಯ ಮಂಡಳಿಯ ತಾಂತ್ರಿಕ ಕಾರ್ಯನಿರ್ವಾಹಕ ಪ್ರಸನ್ನ ಕೆಂದಡಿ ಜೀವ ವೈವಿದ್ಯತೆ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ವಿಶೇಷ ಕಾರ್ಯಗಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ವಲಯ ಅರಣ್ಯಾಧಿಕಾರಿ ಪ್ರದೀಪ್ ನಾಯ್ಕ, ದಸ್ತು ಅರಣ್ಯ ಪಾಲಕ ಗೋಪಾಲ ನಾಯ್ಕ, ಪಿಡಿಓ ಮಂಜುನಾಥ, ಸ್ವ ಸಹಾಯ ಸಂಘದ ಸದಸ್ಯರು, ವಿದ್ಯಾರ್ಥಿಗಳು ಇದ್ದರು