ಮಕ್ಕಳಾಗಲಿಲ್ಲ ಎಂದು ಮಹಿಳೆಯರು ಧೃತಿಗೆಡಬೇಡಿ; ಐ.ವಿ.ಎಫ್ ಆಕ್ಸೆಸ್ ಆಸ್ಪತ್ರೆ ಡಾ.ರೇಖಾ ಕೆ.ವಿ ಸಲಹೆ

ಕುಷ್ಟಗಿ,ಫೆ,21; ಮಹಿಳೆಯರು ಮಕ್ಕಳಾಗಲಿಲ್ಲ ಎಂದು ದೃತಿಗೆಡಬೇಡಿ ಬಂಜೆತನ ಸಮಾಲೋಚನೆ ಮತ್ತು ಐ.ವಿ.ಎಫ್ ಆಕ್ಸೆಸ್ ಫಲವತ್ತತೆ ಚಿಕಿತ್ಸೆ ಪಡೆಯುವ ಮೂಲಕ ಮಕ್ಕಳ ಭಾಗ್ಯ ಹೊಂದಬೇಕು ಎಂದು ಬೆಂಗಳೂರಿನ ಐ.ವಿ.ಎಫ್ ಆಕ್ಸೆಸ್ ಆಸ್ಪತ್ರೆಯ ಡಾ.ರೇಖಾ ಕೆ.ವಿ ಸಲಹೆ ನೀಡಿದರು.
ಐ.ವಿ.ಎಫ್ ಆಕ್ಸೆಸ್ ಬೆಂಗಳೂರು, ಶ್ರೀ ಬನಶಂಕರಿ ಕ್ಲಿನಿಕ್, ಇನ್ನರ್ ವೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ರವಿವಾರ ದಿನ ಬೆಳಿಗ್ಗೆ ಪಟ್ಟಣದ ಶ್ರೀ ಬನಶಂಕರಿ ಕ್ಲಿನಿಕ್ ನಲ್ಲಿ ಏರ್ಪಡಿಸಿದ್ದ ಉಚಿತ ಬಂಜೆತನ ಸಮಾಲೋಚನೆ ಮತ್ತು ಐ.ವಿ.ಎಫ್ ಆಕ್ಸೆಸ್ ಹಾಗೂ ಉಚಿತ ಫಲವತ್ತತೆ ಪರಿಶೀಲನೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರ ಅನೇಕ ಬಗೆಯ ಚಿಕಿತ್ಸಾ ಪದ್ದತಿಗಳು ಇವೆ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಕ್ಕಳಾಗಿಲ್ಲ ಎಂದು ಕೆಲವು ಮಹಿಳೆಯರು ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾವನ್ನಪ್ಪಿದ್ದಾರೆ. ಇದು ತಪ್ಪು ನಿರ್ಣಯ ಸಾವೇ ಪರಿಹಾರ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನರ್ ವೀಲ್ ಕ್ಲಬ್  ಅಧ್ಯಕ್ಷೆ ಶಾರದಾ ಶೆಟ್ಟರ್ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬಂಜೆತನ ಸಮಾಲೋಚನೆ ಮತ್ತು ಐ.ವಿ.ಎಫ್ ಆಕ್ಸೆಸ್ ಹಾಗೂ ಉಚಿತ ಫಲವತ್ತತೆ ಪರಿಶೀಲನೆ ಶಿಬಿರದಲ್ಲಿ ಮಕ್ಕಳಾಗದ 120 ಜನ ದಂಪತಿಗಳ ಶಿಬಿರಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದಿದ್ದು ತುಂಬಾ ಸಂತೋಷವಾಗಿದೆ ಎಂದು ಖುಷ ಪಟ್ಟರು.
ಈ ಸಂದರ್ಭದಲ್ಲಿ ಡಾ.ಪಾರ್ವತಿ ಪಳೋಟಿ, ಡಾ. ಮಲ್ಲಪ್ಪ ಪಳೋಟಿ, ಬನಶಂಕರಿ ಆಸ್ಪತ್ರೆಯ ಸಿಬ್ಬಂದಿ ಹನುಮೇಶ ಸಿಳ್ಳಿ ಹಾಗೂ IVF ಅಸ್ಸೇಸ್ ಆಸ್ಪತ್ರೆ ಸಿಬ್ಬಂದಿ ಅವರು ಉಪಸ್ಥಿತರಿದ್ದರು. ಶರಣ ಬಸವ ನಿರೂಪಿಸಿದರು, ಡಾ.ಕುಮುದಾ ಪಲ್ಲೇದ ಸ್ವಾಗತಿಸಿದರು, ಪ್ರಭಾ ಬಂಗಾರ ಶೆಟ್ಟರ್ ವಂದಿಸಿದರು.