ಮಹಿಳೆಯರು ಸ್ವಾವಲಂಬಿ ಜೀವನ ನೆಡೆಸಲು ಸರಕಾರದ ಸೌಲಭ್ಯ ಪಡೆಯಬೇಕು ; ಶಾಸಕ ದೊಡ್ಡನಗೌಡ ಎಚ್ ಪಾಟೀಲ್

ಕುಷ್ಟಗಿ,ಫೆ, 25; ಮಹಿಳೆಯರು ಸ್ವಾವಲಂಬಿ ಜೀವನ ನೆಡೆಸಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ ಅವುಗಳ ಸೌಲಭ್ಯಪಡೆದುಕೊಳ್ಳಬೇಕು ಎಂದು ಶಾಸಕ ಹಾಗೂ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್ ಪಾಟೀಲ್ ಸಲಹೆ ನೀಡಿದರು.

ಪಟ್ಟಣದ ಗಂಗಾ ಎಸ್.ಕೆ ಹೊಲಿಗೆ ತರಬೇತಿ ಕೇಂದ್ರ ಹಾಗೂ ಸಂಕಲ್ಪ ಗ್ರಾಮೀಣ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ವತಿಯಿಂದ ರವಿವಾರ ಮಧ್ಯಾಹ್ನ ಇಲ್ಲಿನ ತೆಗ್ಗಿನ ಓಣಿ ಹತ್ತಿರದ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ಗಂಗಾ ಎಸ್.ಕೆ ಹೊಲಿಗೆ ತರಬೇತಿ ಕೇಂದ್ರವು ಗ್ರಾಮೀಣ ಪ್ರದೇಶದ ಮಹಿಳೆಯರು ಮನೆ ಗೆಲಸದ ಜೊತೆಗೆ ಬಟ್ಟೆಗಳನ್ನು ಹೊಲಿದು ಆರ್ಥಿಕವಾಗಿ ಸಬಲೀಕರಣ ಹೊಂದುವು ಹಿತದೃಷ್ಟಿಯಿಂದ ಹೊಲಿಗೆ ತರಬೇತಿ ಕೇಂದ್ರ ತೆರೆದಿದ್ದಾರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದು ಸಮಾಜದಲ್ಲಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ಸಂಕಲ್ಪ ಗ್ರಾಮೀಣ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಹನುಮೇಶ ಕುಲಕರ್ಣಿ ಮಾತನಾಡಿ ಮುಂಬರುವ ದಿನಗಳಲ್ಲಿ ಗಂಗಾ ಎಸ್.ಕೆ ಹೊಲಿಗೆ ತರಬೇತಿ ಕೇಂದ್ರಕ್ಕೆ ಸರಕಾರದ ಅನೇಕ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ, ಬಿಜೆಪಿ ತಾಲೂಕು ಉಪಾಧ್ಯಕ್ಷ ಶಶಿಧರ ಕವಲಿ, ಚಂದ್ರಕಾಂತ ವಡಗೇರಿ, ಶರಣಪ್ಪ ಕುಂಬಾರ, ಹೊಲಿಗೆ ತರಬೇತಿ ಕೇಂದ್ರದ ಮುಖ್ಯಸ್ಥೆ ಗಂಗಾ ಎಸ್.ಕೆ, ರಸೂಲಸಾಬ, ದೇವರಾಜ ಹಜಾಳ, ಪವಾಡೆಪ್ಪ ಕುಂಬಾರ, ಶೃತಿ ಕುಂಬಾರ ಉಪಸ್ಥಿತರಿದ್ದರು.

ಹೊಲಿಗೆ ತರಬೇತಿ ಪಡೆದ 25 ಜನ ಗ್ರಾಮೀಣ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು.