ಕಾಂಗ್ರೆಸ್ ಉಳಿಸಲು ಪುರುಷರಿಗಿಂತ ಮಹಿಳೆಯರ ಶಕ್ತಿ ಬೇಕು: ಜಿಲ್ಲಾ ಪಂಚಾಯತ ಅಧ್ಯಕ್ಷ ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 15: ಪ್ರಸ್ತುತ ಕಾಂಗ್ರೆಸ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ ಸಹ ಮಹಿಳೆಯರು ಮಾಡುವ ಪ್ರಾಮಾಣಿಕ ಪಕ್ಷ ಸಂಘಟನೆಯಿಂದ ಮತ್ತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ ಅಭಿಪ್ರಾಯಪಟ್ಟರು.

ಅವರು ನಗರದ ಸಿಂಧೂರ ಸಭಾ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಭಾರತೀಯ ಮಹಿಳಾ ಕಾಂಗ್ರೆಸ್ನ 36ನೇ ಸಂಸ್ಥಾಪನಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪಕ್ಷ ಸಂಘಟನೆಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಪ್ರಾಮಾಣಿಕರು ಮತ್ತು ನಿಷ್ಠೆಯುಳ್ಳವರು, ಹಂತ ಹಂತವಾಗಿ ಪಕ್ಷ ಕಟ್ಟುವ ಕಾರ್ಯದಲ್ಲಿ ಹೆಣ್ಣು ಮಕ್ಕಳು ಶಕ್ತಿ ಹಾಕಬೇಕು ಮತ್ತು ಮೀಸಲಾತಿಯಲ್ಲಿ ಆಯ್ಕೆಯಾಗಿ ಬರುವ ಅವರು ಹೆಚ್ಚು ಹೆಚ್ಚು ತಿಳಿದುಕೊಂಡು ಸ್ವಂತ ಶಕ್ತಿಯಿಂದ ಆಡಳಿತ ನಡೆಸಬೇಕು ಎಂದರು.

ಕೆಪಿಸಿಸಿ ಕಾರ್ಮಿಕ  ರಾಜ್ಯ ಕಾರ್ಯದರ್ಶಿ  ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಮಹಿಳಾ ಘಟಕ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ಸಂಘಟಿತರಾಗಬೇಕು. ಜಿಲ್ಲೆಯ ಎಲ್ಲಾ ಜಿಲ್ಲಾ, ತಾಲೂಕ ಮತ್ತು ನಗರ ಘಟಕಗಳ ಪದಾಧಿಕಾರಿಗಳನ್ನು ನೇಮಿಸಿ, ಎರಡು ದಿನಗಳ ಅಚ್ಚುಕಟ್ಟಾದ ತರಬೇತಿ ಅಗತ್ಯವಾಗಿ ನೀಡಬೇಕು. ವಿರೋಧ ಪಕ್ಷಗಳ ಪ್ರತಿ ಪ್ರಶ್ನೆಗೆ ಮತ್ತು ಮೋಸಕ್ಕೆ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಿ, 70 ವರ್ಷ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಹೇಗೆ 135 ಕೋಟಿ ಜನರನ್ನು ರಕ್ಷಿಸಿದೆ ಎಂಬುದನ್ನು ಹೇಳಿಕೊಡಬೇಕು. ಅಧಿಕಾರದಲ್ಲಿರುವ ಪಕ್ಷದ ಮುಖಂಡರು ತಮ್ಮ ಜೊತೆಗಿರುವ ಕಾರ್ಯಕರ್ತರನ್ನು ರಕಿಸಿಬೇಕು, ಅವರಿಗೂ ಒಂದು ಬದುಕಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕೆ ಮಾಲತಿ ನಾಯಕ್ ಅವರು ಮಾತನಾಡುತ್ತ, ಸಮಾಜದಲ್ಲಿ ಮಹಿಳೆಯ ಪಾತ್ರ ಅತ್ಯಂತ ಮುಖ್ಯವಾಗಿದೆ, ನಾವೂ ದೇಶದಲ್ಲಿ ಅರ್ಧದಷ್ಟಿದ್ದರೂ ಎಲ್ಲೂ ಸಮವಾದ ನ್ಯಾಯ ದೊರಕಿಲ್ಲವಾದರೂ ಇವತ್ತು ಮಹಿಳೆಯರು ಸಮಾಜದಲ್ಲಿ ಎದ್ದು ನಿಲ್ಲುವಂತೆ ಮಾಡಿದ್ದು ಮಾತ್ರ ರಾಜೀವ್ ಗಾಂಧಿ ಅವರ ಕನಸಿನ ಬದಲಾವಣೆಯಿಂದ, ಕಾಂಗ್ರೆಸ್ನ ಕೊಡುಗೆಯಿಂದ ಮತ್ತು ಸಂವಿಧಾನದ ಶಿಲ್ಪಿ ಅಂಬೇಡ್ಕರ್ಜಿ ಅವರಿಂದ ಅವರೆಲ್ಲರನ್ನು ಸ್ಮರಿಸುವದು, ಪ್ರತಿ ಮಹಿಳೆಯ ಕರ್ತವ್ಯ. ಇನ್ನು ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸ ಮಾಡೋಣ, ಪಕ್ಷ ಎಂದಿಗೂ ನಮ್ಮನ್ನು ಕೈಬಿಡುವದಿಲ್ಲ ಎಂದರು.

ಪ್ರಿಯದರ್ಶಿನಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮಾ ಮುದಗಲ್ ಮಾತನಾಡಿ, ಬಿಜೆಪಿ ಕೇವಲ ದೊಡ್ಡವರ, ಶ್ರೀಮಂತರ ಮತ್ತು ಶೋಕಿ ಜನರ ಆಶ್ರಯ ತಾಣ ಅಲ್ಲಿ ಸಮಾನತೆ ಮತ್ತು ಶೋಷಿತರಿಗೆ ಯಾವುದೇ ಅವಕಾಶಗಳಿಲ್ಲ ಎಂಬುದನ್ನು ಅಲ್ಲಿ 20 ವರ್ಷ ಆ ಪಕ್ಷಕ್ಕೆ ಮಣ್ಣು ಹೊತ್ತು ಶ್ರಮಿಸಿದ ತಮಗೆ ಗೊತ್ತಿದೆ. ಕಾಂಗ್ರೆಸ್ ಕಟ್ಟುವ ಕೆಲಸ ಮಾಡೋಣ ಎಂದರು.

ವೇದಿಕೆಯಲ್ಲಿ ಶಕುಂತಲಾ ಹಿರೇಮಠ ಕುಷ್ಟಗಿ, ಜಯಶ್ರೀ ಕಂದಕೂರ ಯಲಬುರ್ಗಾ, ಹುಲಿಗೆಮ್ಮ ತಟ್ಟಿ ಭಾಗ್ಯನಗರ, ಗೌರಮ್ಮ ನಾಗನೂರ ಕುಕನೂರ, ರತ್ನಪ್ರಭಾವತಿ ಗಂಗಾವತಿ, ಶರಣಮ್ಮ ಪೂಜಾರ ಯಲಬುರ್ಗಾ, ಸವಿತ ಗೋರಂಟ್ಲಿ, ಯಶೋಧ ಮರಡಿ, ಸರೋಜಾ ಮೂಲಿಮನಿ, ಜಯಶ್ರೀ ಅರಕೇರಿ, ಜಿಲ್ಲಾ ಪಂಚಾಯತಿ ಸದಸ್ಯೆ ಗಿರಿಜಾ ಸಂಗಟಿ, ಹಿರೇವಂಕಲಕುಂಟಿ ಜಿಲ್ಲಾ ಪಂಚಾಯತಿ ಸದಸ್ಯೆ ಹುಲಿಗೆಮ್ಮ ಎಸ್. ಪಿ., ರೇಷ್ಮಾ ಕೊಪ್ಪಳ, ಚನ್ನಮ್ಮ ಮುಳಗುಂದ, ಶಾಹಿದಾ ಬೇಗಂ ಇತರರು ಇದ್ದರು.

ಕಾರ್ಯಕ್ರಮದ ಪ್ರಾರ್ಥನೆ ಮತು ನಿರೂಪಣೆಯನ್ನು ನಾಗರತ್ನ ಹುಲಿಗಿ ನೆರವೇರಿಸಿದರು, ಮಹಿಳಾ ರಾಜ್ಯ ಕಾರ್ಯದಶರ್ಿ ಇಂದಿರಾ ಭಾವಿಕಟ್ಟಿ ಸ್ವಾಗತಿಸಿದರು, ಉಮಾ ಜನಾದ್ರಿ ವಂದಿಸಿದರು. ಕಾರ್ಯಕ್ರಮದಲ್ಲಿದ್ದ ಎಲ್ಲಾ ಪದಾಧಿಕಾರಿ ಕಾರ್ಯಕರ್ತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.