ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮಹಿಳಾ ವಿವಿ ಖೋಖೋ ತಂಡ
Women's University Khokho team reaches pre-quarterfinals
ಲೋಕದರ್ಶನ ವರದಿ
ವಿಜಯಪುರ 05: ದಾವಣಗೆರೆ ವಿವಿಯಲ್ಲಿ ಏ.1ರಿಂದ 4ವರೆಗೆ ನಡೆದ ದಕ್ಷಿಣ ವಲಯ ಅಂತರ್ ಮಹಾವಿದ್ಯಾಲಯಗಳ ಖೋಖೋ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿವಿ ತಂಡ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ವಿವಿ ಕೀರ್ತಿ ಹೆಚ್ಚಿಸಿದೆ. ತಂಡದ ಸಾಧನೆಗೆ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆಂಧ್ರದ ತಿರುಪತಿ ವಿವಿ, ತಮಿಳುನಾಡಿನ ಭಾರತೀಯರ ವಿವಿ ಹಾಗೂ ಕೇರಳದ ಕಣ್ಣೂರು ವಿವಿ ವಿರುದ್ಧ ಪಂದ್ಯದಲ್ಲಿ ಮಹಿಳಾ ವಿವಿ ತಂಡ ಜಯಗಳಿಸುವ ಮೂಲಕ ರಾಜ್ಯ ಪ್ರತಿನಿಧಿಸಿ ಸಾಧನೆ ಮೆರೆದಿದೆ.
ತಂಡದ ನಾಯಕಿ, ಎಂಪಿಇಡಿ ವಿದ್ಯಾರ್ಥಿನಿ ದೀಪಾ ಸಂತಿವರ್, ತರಬೇತುದಾರ ಶಿವಪ್ರಕಾಶ್ ಎಲಿ, ವ್ಯವಸ್ಥಾಪಕ ಸಿಂದಗಿಯ ಪೂಜಾರ್, ಟೂರ್ನಾಮೆಂಟ್ ವೀಕ್ಷಕರಾಗಿ ಭಾಗವಹಿಸಿದ ಪ್ರೊ.ಶ್ರೀನಿವಾಸ ಮತ್ತು ಪ್ರೊ. ರಾಜಕುಮಾರ್ ಮಾಲಿ ಪಾಟೀಲ್ ಅವರಿಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣನವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರ, ಉಪನಿರ್ದೇಶಕ ಡಾ. ವಿಶ್ವನಾಥ್ ನಡಕಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 