ಮಹಿಳೆಗೆ ಬೆದರಿಸಿ 10 ಲಕ್ಷ ರೂ. ವಸೂಲಿ: ಪ್ರಕರಣ ದಾಖಲು
Woman threatened and extorted Rs. 10 lakh: Case registered
ಸಂಬರಗಿ 13: ಮದಭಾವಿ (ಜಾಧವವಾಡಿ) ಗ್ರಾಮದ ಮಾರುತಿ ರಾಮಚಂದ್ರ ಜಾಧವ, ವಯಸ್ಸು:35, ಇವರು ಮಹಾರಾಷ್ಟ್ರದ ಕವಟೇಮಹಾಂಕಾಳ ತಾಲೂಕಿನ ಒಬ್ಬ ಮಹಿಳೆಗೆ ಬೆದರಿಕೆಯ ಕರೆ ನೀಡಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ ಎಂದು ಆ ಮಹಿಳೆ ಕವಟೆಮಹಾಂಕಾಳ ಪೋಲಿಸ್ ಠಾಣೆಗೆ ದೂರು ದಾಖಲಿಸಿದ ನಂತರ ಅಲ್ಲಿನ ಪೋಲಿಸರು ಬಂದು ಮದಭಾವಿ ಗ್ರಾಮದಲ್ಲಿ ಜಾಲ ಬೀಸಿ ಅವನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ: ಮಹಿಳೆ ಕವಟೆಮಹಾಂಕಾಳ ತಾಲೂಕಿನಲ್ಲಿ ಇದ್ದು, ಅವಳು ರೇಲ್ವೆ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ತಮ್ಮ ಮನೆಯಲ್ಲಿ ಸ್ನಾನ ಮಾಡುವ ವೇಳೆ ಈ ವ್ಯಕ್ತಿ ಕಳ್ಳ ದಾರಿಯಿಂದ ಫೋಟೋ ಸಂಗ್ರಹಿಸಿದ್ದಾನೆ. ಆ ಫೋಟೋವನ್ನು ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆಂದು ಬೆದರಿಕೆ ನೀಡಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ.
ಆ ಮಹಿಳೆಗೆ ಮೀರಜದಲ್ಲಿ ಬಂದು ನನ್ನನ್ನು ಸಂಪರ್ಕಿಸಬೇಕು. ಇಲ್ಲವಾದರೆ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ. ಈ ಮಹಿಳೆ ಹೆದರಿ ಕವಟೆಮಹಾಂಕಾಳ ಪೋಲಿಸ್ ಠಾಣೆಯಲ್ಲಿ ಅವನ ವಿರುದ್ಧ ದೂರು ದಾಖಲಿಸಿದ್ದಾಳೆ. ಅವನನ್ನು ಕವಟೆಮಹಾಂಕಾಳ ಪೋಲಿಸರು ಮದಭಾವಿ ಗ್ರಾಮಕ್ಕೆ ಬಂದು ಸೆರೆಹಿಡಿದಿದ್ದಾರೆ. ಕವಟೆಮಹಾಂಕಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಪಿ.ಎಸ್.ಐ ದತ್ತಾತ್ರೇಯ ಕೋಳೆಕರ ಮುಂದಿನ ತನಿಖೆ ನಡೆಸಿದ್ದಾರೆ.
ಈ ಘಟನೆಯಿಂದ ಗಡಿಭಾಗದ ಗ್ರಾಮಗಳಲ್ಲಿ ಭಯವಯ ವಾತಾವರಣ ನಿರ್ಮಾಣವಾಗಿದೆ.
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ 