ಅಭಿವೃದ್ಧಿಯ ಕನಸು ಹೊತ್ತ ರಮೇಶ ಜಿಗಜಿಣಗಿಯವರನ್ನು ಗೆಲ್ಲಿಸಿ: ಯಡಿಯೂರಪ್ಪ

ಮುದ್ದೇಬಿಹಾಳ 27: ಹಿಂದೆ ಹಣ ಬಲ ಜಾತಿ ಬಲ ತೋಳ್ ಬಲದಿಂದ ಚುನಾವಣೆ ಗೆಲ್ಲುತ್ತೇವೆಂದು ಕಾಂಗ್ರೆಸ್‌ನವರು ನಂಬಿದ್ದರು ಆದರೇ ಪ್ರಧಾನಿ ನರೇಂದ್ರ ಮೋದಿಯವರ ದೇಶದ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂಬುದು ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಪ್ರಧಾನಿಯಾಗಿ 10 ವರ್ಷವಾದರೂ ಒಂದೇ ಒಂದು ದಿನ ವಿಶ್ರಾಂತಿ ಪಡೆದಿಲ್ಲಾ ಅವರು ದೇಶ ಹಾಗೂ ಪಕ್ಷವನ್ನು ಕಟ್ಟೋ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮತದಾರರು ಇದೊಂದು ಬಾರಿ ವಿಜಯಪುರ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿಯವರ ಕೈಬಲಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹೇಳಿದರು. 

ಪಟ್ಟಣದ ಡಾ. ಬಿ ಆರ್ ಅಂಬೇಡ್ಕರವರ ವೃತ್ತಕ್ಕೆ ಮಾಲಾರೆ​‍್ಣ ನೆರವೇರಿಸಿ ತೆರೆದ ವಾಹನದ ಮೂಲಕ ಶೋಭಾ ಯಾತ್ರೆ ನಡೆಸಿ ಬಸವೇಶ್ವರ ವೃತ್ತದ ಮಾರ್ಗವಾಗಿ ಮುಖ್ಯ ಬಜಾರದಿಂದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ತಾಲೂಕಾ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲಾ ಮೀಸಲು ಕ್ಷೇತ್ರದ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ರಮೇಶ  ಜಿಗಜಿಣಗಿಯವರ ಪ್ರರ ಪ್ರಚಾರ ನಡೆಸಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ. ವ್ಯಾಪಕ ಬ್ರಷ್ಟಾಚಾರ ತಾಂಡವವಾಡುತ್ತಿದೆ. ಜನರ ಆಶಯಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನ ವಿರೋಧಿ ಅಲೇ ಹೆಚ್ಚಾಗಿದೆ. ಈ ಹಿನ್ನೆಲೆ ಈ ಬಾರಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋ ವಾತಾವರಣ ಇದೆ. ನಿನ್ನೆ ನಡೆದ ಮತದಾನವಾದ ಕ್ಷೇತ್ರಗಳಲ್ಲಿ ಬಿಜೆಪಿ ಗಾಳಿ ಬೀಸುತ್ತಿರುವುದು ಕಂಡು ಬಂದಿದ್ದು 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಾನು ಸಿಎಂ ಆಗಿದ್ದಾಗ 4500 ಕೋಟಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಅನುದಾನ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾವುದಾದರೂ ಅನುದಾನ ಕಾರ್ಯಕ್ರಮ ಕೊಟ್ಟಿದ್ದಾರಾ.? ಎಂದು ವಾಗದಾಳಿ ನಡೆಸಿದರು.  

ಈ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಏನಾಯಿತು. ವಿದ್ಯುತ್ ದರ ಏರಿಕೆಯಾಗಿದೆ,  ಕಿಸಾನ್ ಸಮ್ಮಾನ ಯೋಜನೆ ಹಣ ನೀಡುತ್ತಿಲ್ಲಾ, ಭಾಗ್ಯಲಕ್ಷ್ಮೀ ಬಾಂಡ್ ಯಾಕೆ ನೀಡುತ್ತಿಲ್ಲಾ, ಎಲ್ಲಾ ಯೋಜನೆ ನಿಂತು ಹೋಗಿವೆ ಆದರೇ ಕೇವಲ ಪ್ರಚಾರಕ್ಕೆ ಇಳಿದಿದ್ದಾರೆ. ರಾಜ್ಯದ ಜನರು ಅರ್ಥೈಸಿಕೊಳ್ಳಬೇಕಿದೆ. ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಬೇಕು ಎಂದರು. ಅದರಲ್ಲೂ ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರನ್ನು ಈ ಬಾರಿ 3 ಲಕ್ಷಕ್ಕೂ ಆಧಿಕ ಮತಗಳಿಂದ ಗೆಲ್ಲುವಂತೆ ಆಶಿರ್ವಾದಿಸಬೇಕು ಎಂದರು.  ಪ್ರದಾನಿ ನರೇಂದ್ರರ ಮೋದಿಯವರು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಟಾಪನೆಗೆ ಕಾಂಗ್ರೆಸ್‌ನವರನ್ನೂ ಆಹ್ವಾನಿಸಿದ್ದರೂ ಯಾವೊಬ್ಬ ಕಾಂಗ್ರೆಸ್‌ನವರು ಬರಲಿಲ್ಲ. ಅವರಿಗೆಲ್ಲ ರಾಮನ ಬಗ್ಗೆ ಭಕ್ತಿಯಿಲ್ಲ ಅದು ಅವರಿಗೆ ಇಷ್ಟವೂ ಇರಲಿಲ್ಲ. ಹಾಗಾಗಿ ಈ ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ದೇಶ ವಿದೇಶಗಳಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಸಿಗುತ್ತಿದೆ. ಈದಿಶೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಇಂತಹ ಉರಿ ಬಿಸಿಲಿನಲ್ಲೂ ಸಹ ಸಾವಿರಾರು ಜನ ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದನ್ನೂ ನೋಡಿದರೇ ಜನರಿಗೆ ಏನೂ ಕೊಟ್ಟರೂ ಏನು ಮಾಡಿದರೂ ಕಡಿಮೆ. ಕಾರಣ ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದರು. 

ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಮಾತನಾಡಿ 2018ಕ್ಕೂ ಪೂರ್ವದಲ್ಲಿ ಮುದ್ದೇಬಿಹಾಳದಲ್ಲಿ ಗಬ್ಬು ನಾರುತಿತ್ತು ಆದರೇ ಆಗ ಯಡಿಯೂರ​‍್ಪ ನನ್ನ ಕರೆದು ಬಿಜೆಪಿ ಟಿಕೆಟ್ ಕೊಟ್ಟರು. 2018ರಲ್ಲಿ ಗೆಲ್ಲಿಸಿ ಮತಕ್ಷೇತ್ರದ ಮುದ್ದೇಬಿಹಾಳ ನಾಲತವಾಡ, ತಾಳಿಕೋಟಿ ಪಟ್ಟಣಗಳು ಸೇರಿದಂತೆ ಪ್ರತಿ ಗ್ರಾಮಗಳ ರಸ್ತೆ, ಕೆರೆ ತುಂಬುವುದು, ಹಲವಾರು ಯೋಜನೆಗಳಿಗೆ ಆಗ ಸಿಎಂ 4500 ಕೋಟಿ ಅನುದಾನ ಕೊಟ್ಟರು. ಕೇವಲ ಮೂರುವರೆ ವರ್ಷದಲ್ಲಿಯೇ ಇಡೀ ಕ್ಷೇತ್ರದಲ್ಲಿ ಸಕಲ ಅಭಿವೃದ್ಧಿ ಮಾಡಿದೆ. 42 ಕೆರೆಗಳನ್ನು ತುಂಬಿಸಲಾಗಿದೆ. ಸಿಸಿ ರಸ್ತೆಗಳನ್ನು ಮಾಡಿದ್ದೇನೆ. ಕಾಂಗ್ರೆಸ್ ನಲ್ಲಿದ್ದಾಗ ಬಂಡಿ ಯಾತ್ರೆ ಮಾಡಿದ್ದೇನೆ. ಆಗ ಚಿಮ್ಮಲಗಿ ಏತ ನೀರಾವರಿಗೆ ಹಣ ಕೊಟ್ಟ ಯಡಿಯೂರ​‍್ಪ ನಮಗೆ ನೀರು ಕೊಟ್ಟ ಪುಣ್ಯಾತ್ಮರು ಯಡಿಯೂರ​‍್ಪನವರು. ಮುದ್ದೇಬಿಹಾಳ ತಾಳಿಕೋಟಿ ನಾಲತವಾಡ ಬಜಾರ ವ್ಯಾಪಾರಸ್ಥ ಬಂಧುಗಳು ಅರ್ಥೈಸಿಕೊಳ್ಳಬೇಕು. ನಿಮ್ಮ ಬಜಾರದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇತ್ತು.  ಕಳೆದ 25 ವರ್ಷಗಳ ಕಾಂಗ್ರೆಸ್ ಅಧಿಕಾರದಲ್ಲಿ ಒಂದೇ ಒಂದು ಇಂಚು ಸಿಸಿ ರಸ್ತೆಗಳನ್ನು ಮಾಡಲು ಸಾಧ್ಯವಾಗಿಲಿಲ್ಲ, ಬಹುತೇಕ ಎಲ್ಲ ಕೆರೆಗಳಿಗೆ ಒಂದು ಹನಿ ನೀರು ಹರಿಸಲು ಸಾಧ್ಯವಾಗಿಲಿಲ್ಲ, ಅವರ ಅಧಿಕಾರದಲ್ಲಿ ಮಾಡಲಾಗದ ಕೆಲಸವನ್ನು ನಾನು ಕೇವಲ ಮೂರುವರೆ ವರ್ಷದಲ್ಲಿಯೇ ಸಾಕಷ್ಟು ಅಭಿವೃದ್ಧಿ ಪಡಿಸುವ ಮೂಲಕ ಮಾದರಿಯ ಮತಕ್ಷೇತ್ರ ಮಾಡಿ ತೊರಿಸಿದ್ದೇನೆ. ಆದರೇ ಕಳೆದ ಚುನಾವಣೆಯಲ್ಲಿ ನಾನು ಸೋತಿದ್ದೇನೆ ಆ ಸೋಲಿನ ಸೇಡು ತೀರಿಸಿಕೊಳ್ಳುವ ಕಾಲಬಂದೇ ಬರುತ್ತದೆ. ಸಧ್ಯ ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಎರಡು ಭಾಗಗಳಾಗಿ ವಿಂಗಡಣೆಗೊಂಡು ಸರಕಾರ ಪತನವಾಗಲಿದೆ. ಈ ವೇಳೆ ಮರು ಚುನಾವಣೆ ನಡೆದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ಸುಸಂಸ್ಕೃತ ಸರಳ ಸಜ್ಜನ ರಾಜಕಾರಿಣಿಯಾಗಿದ್ದಾರೆ ಕಳೆದ ಬಾರಿ ನೀಡಿದ ಮತಗಳಿಗಿಂತ ಹೆಚ್ಚು ಮತಗಳನ್ನು ನೀಡುವ ಮೂಲಕ ಅತ್ಯಧಿಕ ಮತಗಳಿಂದ ಗೆಲ್ಲುವಂತೆ ಆಶೀರ್ವದಿಸಬೇಕು ಎಂದರು. 

ವಿಜಯಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ(ಕುಚಬಾಳ), ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಅಪ್ಪು ಪಟ್ಟಣಶೇಟ್ಟಿ, ಮಾಜಿ ಎಂಎಲ್ ಸಿ ಅರುಣ ಶಾಹಾಪೂರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಜುಗೌಡ ಪಾಟೀಲ, ಮಂಗಳಾದೇವಿ ಬಿರಾದಾರ, ಮಲಕೇಂದ್ರಾಯಗೌಡ ಪಾಟೀಲ, ಎಂ ಎಸ್ ಪಾಟೀಲ, ಸಿದ್ದರಾಜ ಹೊಳಿ, ಡಾ, ವಿರೇಶ ಪಾಟೀಲ ಸೇರಿದಂತೆ ಅನೇಕರು ಇದ್ದರು.