ಇಂದು ತುಂಗಭದ್ರಾ ಜಲಾ ಶಯ ದ ನೂತನ ಕ್ರಸ್ಟ್ ಗೇಟ್ ಉದ್ಘಾಟನೆ ಸ್ವಾಗತಾಹ9 : ಡಾ ಕ್ಯಾವಟರ್
Welcome inauguration of new crest gate of Tungabhadra reservoir today: Dr. Cawatar
ಕೊಪ್ಪಳ 24: ಕೊನೆಗೂ ತುಂಗಭದ್ರಾ ಟಿಜಲಾಶಯದ ನೂತನ ಕ್ರಸ್ಟಗೇಟ್ ಗಳನ್ನು ಉದ್ಘಾಟಿಸುತ್ತಿರುವುದು ಸ್ವಾಗತಾರ್ಹ ವಾಗಿದೆ ಎಂದು ಜಿಲ್ಲೆಯ ಬಿಜೆಪಿ ವರಿಷ್ಠ ಡಾ/ ಬಸವರಾಜ್ ಕ್ಯಾವಟರ್ ಹೇಳಿದ್ದಾರೆ, ಸರಕಾರ ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದರೇ ಈ ಕೆಲಸ ಎಂದೋ ಸಾಗಬೇಕಿತ್ತು.ಆದರೆ, ಕಾಂಗ್ರೆಸ್ ಸರಕಾರದ ಅಸಡ್ಡೆಯ ಪರಿಣಾಮ ಕಳೆದ ವರ್ಷ ರೈತರು ಎರಡನೇ ಬೆಳೆ ಕಳೆದುಕೊಳ್ಳಬೇಕಾಯಿತು.ಅಲ್ಲದೆ, ದುರಸ್ಥಿ ಕಾರ್ಯ ತ್ವರಿತವಾಗಿ ಮಾಡದ ಪರಿಣಾಮ ಸಮಸ್ಯೆ ಮತ್ತಷ್ಟು ಎದುರಾಯಿತು.ದುರದೃಷ್ಟಕ್ಕೆ ಈ ವರ್ಷ ಪ್ರಕೃತಿ ವಿಕೋಪದ ಪರಿಣಾಮ ಜಲಾನಯನ ಪ್ರದೇಶದಲ್ಲಿ ಸಮಪರ್ಕವಾಗಿ ಮಳೆಯಾಗುತ್ತಿಲ್ಲ. ತತ್ಪರಿಣಾಮ ಜಲಾಶಯಕ್ಕೆ ಒಳಹರಿವು ಈವರೆಗೂ ಆರಂಭವಾಗಿಲ್ಲ ಎಂದು ವಿವರಿಸಿದರು,
ತುಂಗಭದ್ರಾ ಡ್ಯಾಮ್ ನ ಸ್ಟೀಲ್ ವೇ ಗೇಟ್ ಗಳ ಉದ್ಘಾಟನೆಗೆ ಬರುತ್ತಿರುವ ಕೇಂದ್ರ 3 ಜಲಶಕ್ತಿ ಮಂತ್ರಿಗಳಾದ ಸಿ.ಆರ್. ಪಾಟೀಲ್ ಅವರಿಗೆ ಹಾಗೂ 3 ರಾಜ್ಯದ ಮುಖ್ಯಮಂತ್ರಿಗಳಿಗೆ ಸ್ವಾಗತ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಕೊಪ್ಪಳಕ್ಕೆ ಬರುತ್ತಿದ್ದಾರೆ. ಈ ಕಾರ್ಯಕ್ರಮ ಕೇವಲ ಮುರಿದ ಹೋದ ಕ್ರಸ್ಟ್ ಗೇಟ್ ಗಳ ಮರು ಉದ್ಘಾಟನೆ ಮಾಡುವ ಪಿಆರ್ ಸ್ಟಂಟ್ ಆಗಬಾರದು.ಇದು ನಮಗೆ ಮಾಡಿರುವ ಉಪಕಾರ ಅಲ್ಲವೇ ಅಲ್ಲ, ನಿಮ್ಮ ಆದ್ಯ ಕರ್ತವ್ಯ ಆದರೂ ವಿಳಂಬ ಮಾಡಿ ಜನರಿಗೆ ಅನ್ಯಾಯ ಮಾಡಿದ್ದೀರಿ.ಈಗ ನಮ್ಮೂರಿಗೆ ಬಂದಿರುವ ನೀವು ನಮ್ಮ ದಶಕಗಳ ಸಮಸ್ಯೆಗೆ 3 ಸಿಎಂ ಹಾಗೂ ಕೇಂದ್ರ ಮಂತ್ರಿಗಳ ಉಪಸ್ಥಿತಿಯಲ್ಲಿ ಪರಿಹಾರ ದೊರಕಿಸಿಕೊಡಬೇಕು.
ಜನವರಿ 27, 2024 ರಂದು ಪತ್ರಿಕಾ ಗೋಷ್ಠಿಯಲ್ಲಿ ನೀರಾವರಿ ಸಚಿವರು ಹಾಗೂ ಅಂದಿನ ಉಪ ಮುಖ್ಯಮಂತ್ರಿಗಳಾದ ಹಾಗೂ ಈಗಿನ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನವಲಿ ಜಲಾಶಯ ನಿರ್ಮಾಣ ಅಥವಾ ಅದಕ್ಕೆ ಬದಲಾಗಿ ಬೇರೆ ನೀರಾವರಿ ವ್ಯವಸ್ಥೆ ಮಾಡುವ ಬಗ್ಗೆ ಆಂಧ್ರ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳ ಸಮಯ ಕೇಳಿದ್ದೇನೆ, ಆದರೆ ಅವರು ಸಮಯ ನೀಡಿಲ್ಲ ಎಂದು ಹೇಳಿದರುಮಾರ್ಚ್ 13, 2025 ರಂದು ವಿಧಾನ ಪರಿಷತ್ನಲ್ಲಿ ನವಲಿ ಜಲಾಶಯದ ಬಗ್ಗೆ ಕೇಳಿದ ಪ್ರಶ್ನೆಗೆ ಕೂಡ ಡಿ.ಕೆ. ಶಿವಕುಮಾರ್ ಅವರು ಇದೇ ಉತ್ತರ ನೀಡಿದರು. ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಸಮಯ ಕೇಳಿದ್ದೇನೆ,
ಆದರೆ ಅವರು ಸಮಯ ನೀಡಿಲ್ಲ ಎಂದು ಹೇಳಿದ್ದರು.2026ರ ಬಜೆಟ್ನಲ್ಲಿ ಕೂಡ ನವಲಿ ಜಲಾಶಯ ನಿರ್ಮಾಣದ ಬಗ್ಗೆ ಪಕ್ಕದ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಮಾತ್ರ ಹೇಳಲಾಗಿದೆ. ಆದರೆ ಜಲಾಶಯ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಒಂದು ರೂಪಾಯಿ ಹಣವನ್ನೂ ಮೀಸಲಿಡಲಿಲ್ಲ. ಮೇ 4, 2026 ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೂಡ ತುಂಗಭದ್ರಾ ಹೂಳೆತ್ತುವ ಕೆಲಸ ಮತ್ತು ನವಲಿ ಜಲಾಶಯ ನಿರ್ಮಾಣದ ಬಗ್ಗೆ ಚರ್ಚೆಗೆ ನಮಗೆ ಸಮಯ ನೀಡುತ್ತಿಲ್ಲ ಎಂದು ಸಿಎಂ ಡಿಕೆಶಿ ಹೇಳಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 