ಮುಸ್ಲಿಂ ಸಮುದಾಯ ನಿಂದಿಸಿರುವುದನ್ನು ಖಂಡಿಸುತ್ತೇವೆ: ಮಕಾಂದಾರ

ಮುಂಡರಗಿ 26:  ಭಾರತ ದೇಶದ ಸಂಪತ್ತನ್ನು ಕಿತ್ತುಕೊಂಡು ಮುಸ್ಲಿಂರಿಗೆ ಹಂಚುತ್ತಿದ್ದಾರೆ ಎಂದು ತಮ್ಮ ರಾಜೀಕೀಯ ಲಾಭಕ್ಕಾಗಿ ನೀಡಿದ ಹೇಳಿಕೆಯೊಂದಿಗೆ ಮುಸ್ಲಿಂರನ್ನೇ ಟಾರ್ಗೆಟ್ ಮಾಡಿಕೊಂಡು ಅಲ್ಪಸಂಖ್ಯಾತರ ಸಮುದಾಯವನ್ನು ಪದೇ ಪದೇ ನಿಂದಿಸುತ್ತಿರುವ ಬಿಜಾಪೂರ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಡಿ.ಮಕಾಂದಾರ ಹೇಳಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತಿಚೆಗೆ ಪ್ರಧಾನ ಮಂತ್ರಿಗಳು ಕೂಡಾ ಮುಸ್ಲಿಂ ಸಮುದಾಯದ ಮೇಲೆ ನಿಂದಿಸಿರುವುದನ್ನು ಖಂಡಿಸುತ್ತೇವೆ. ಮಾಜಿ ಪ್ರಧಾನಮಂತ್ರಿ ಮನಮೋಹನಸಿಂಗ ಹೇಳಿರುವುದು ದೇಶದ ಸಂಪತ್ತಿನಲ್ಲಿ ಎಲ್ಲಾ ಸಮುದಾಯದ ಮಕ್ಕಳಿಗೆ ಪಾಲುದಾರಿಕೆ ಆಗಬೇಕು ಎಂದು ಹೇಳಿಕೆಯನ್ನು ನೀಡಿದ್ದಾರೆ ಹೊರತು, ಯಾವುದೇ ಒಂದು ಜಾತಿಗೆ ಮಾತ್ರ ಪರಿಗಣಿಸಬೇಕೆಂದು ಹೇಳಿಲ್ಲ. ಆದರೆ ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಭಾರತ ದೇಶದ ಸಂಪತ್ತನ್ನು ಕಿತ್ತುಕೊಂಡು ಮುಸ್ಲೀಂರಿಗೆ ಹಂಚುತ್ತಿದ್ದಾರೆ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುವುದಲ್ಲದೇ ಒಂದು ಸಮುದಾಯವನ್ನು ಕೀಳಾಗಿ ಕಾಣುವದು ಸರಿಯಲ್ಲ. ಅದರಲ್ಲೇ ಮುಸ್ಲೀಂ ಸಮುದಾಯದ ಮೇಲೆ ಹೆಚ್ಚು ನಿಂದಿಸುತ್ತಿರುವದನ್ನು ನಿಲ್ಲಿಸಬೇಕು.  

ಆದರೆ ನಮ್ಮ ಕಾಂಗ್ರೇಸ್ ಪಕ್ಷವು ಮಹಿಳೆಯರ ಭದ್ರತೆಗಾಗಿ, ಬಡವರ ಆಳಿಗೆಗಾಗಿ ಹಾಗೂ ದೀನದಲಿತರ ಉದ್ಧಾರಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲರನ್ನು ಸಮಾನವಾಗಿ ಕಾಣುವಂತ ಪಕ್ಷವಾಗಿದೆ. ಬಿಜೆಪಿ ಯಂತೆ ಯಾವುದೇ ಸಮುದಾಯವನ್ನು ನಿಂದಿಸುವುದಿಲ್ಲ. ಹಾಗೂ ಎಲ್ಲಾ ಸಮುದಾಯದವರಿಗೆ ಕೂಡಾ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಇದನ್ನು ಸಹಿಸದೇ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ ಭಾರತ ದೇಶದ ಆಡಳಿತ ನಡೆಸುತ್ತಿರುವ ಪ್ರಧಾನ ಮಂತ್ರಿಗಳು ಇಂತಹ ಹೇಳಿಕೆಯನ್ನು ನೀಡುತ್ತಿರುವ ಸಮಂಜಸವಲ್ಲ. 

ಹೀಗಾಗಿ ಬಿಜೆಪಿ ಪಕ್ಷದ ನಾಯಕರು ಮುಸ್ಲೀಂ ಸಮುದಾಯವನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಇಲ್ಲವಾದರೆ ಮುಂದಿನ ದಿನಮಾನದಲ್ಲಿ ಅಲ್ಪಸಂಖ್ಯಾತರ ಸಮುದಾಯದವರು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು. ಹಾಗೂ ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ಕುರಿತು ಮಾತನಾಡುವುದಾದರೆ, ಕಾಲೇಜಿ ವಿದ್ಯಾರ್ಥಿನಿ ನೇಹಾ ಕೊಲೆ ಮಾಡಿರುವ ಅಫರಾದಿ ಫಯಾಜ್ ಇವರ ಮೇಲೆ ಸೂಕ್ತ ಕಾನೂರು ಕ್ರಮಕೈಕೊಂಡು ಕಠಿಣವಾದ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಮೋರನಾಳ, ನಾಯಕರಾದ ವಿ.ಎಲ್‌.ನಾಡಗೌಡ್ರ, ಹೇಮಂತಗೌಡ ಪಾಟೀಲ್, ರಾಮುಕಲಾಲ್, ರುದ್ರಗೌಡ ಪಾಟೀಲ್, ಎಂ.ಯು.ಮಕಾಂದಾರ, ಯಲ್ಲಪ್ಪ ಹೊಂಬಳಗಟ್ಟಿ, ವಿನೋದ ವಡ್ಡರ್ ಇತರರು ಇದ್ದರು.