ಕುಡಿಯುವ ಉದ್ದೇಶಕ್ಕೆ ಕೆರೆಗಳಿಗೆ ನೀರು

Water for lakes for drinking purposes

ನೀರು ಪೋಲಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ  

ವಿಜಯಪುರ ಏ. 13:  ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಜಲಾಶಯದಿಂದ ಕಾಲುವೆ ಜಾಲಗಳ ಮೂಲಕ ಏ.22ರವರೆಗೆ ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ನೀರು ಪೋಲಾಗದೇ, ನೀರು ಉದ್ದೇಶಿತ ಸ್ಥಳಕ್ಕೆ ತಲುಪುವಂತೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.  

ಕೆರೆಗಳನ್ನು ತುಂಬಿಸಲು ಹರಿ ಬಿಡಲಾಗುತ್ತಿರುವ ನೀರು ಅನ್ಯ ಉದ್ಧೇಶಕ್ಕೆ ಬಳಕೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ ಅವರು, ಈ  ಸಂದರ್ಭದಲ್ಲಿ ಯಾರೂ ಪಂಪಸೆಟ್‌ಗಳನ್ನು ಬಳಸಿ ಅಕ್ರಮವಾಗಿ ನೀರೆತ್ತುವುದನ್ನು ಮಾಡದೇ, ಕುಡಿಯುವ ನೀರಿನ ನಿವಾರಣೆಗೆ ಕೈಗೊಂಡಿರುವ ಕಾರ್ಯಕ್ಕೆ ಸಹಕರಿಸಬೇಕು. ಅಕ್ರಮವಾಗಿ ಪಂಪಸೆಟ್ ಬಳಕೆ ಮಾಡುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಕಾಯ್ದೆಯನ್ವಯ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.