ರೈತರ ಸ್ವಂತ ಖರ್ಚಿನಲ್ಲಿ ಅಗೇಣೀ ನದಿಗೆ ನೀರು: ಬಸದೇಶ್ವರ ಏತ ನೀರಾವರಿ ಕಾಲುವೆಗಳಿಗೆ ಮರುಜೀವ

ರೈತರ ಸ್ವಂತ ಖರ್ಚಿನಲ್ಲಿ ಅಗೇಣೀ ನದಿಗೆ ನೀರು: ಬಸದೇಶ್ವರ ಏತ ನೀರಾವರಿ ಕಾಲುವೆಗಳಿಗೆ ಮರುಜೀವ  Water brought to Ageni River at farmers' own expense: Basadeshwara lift irrigation canals revived


ಸಂಬರಗಿ 26 : ಗಡಿ ಪ್ರದೇಶದಲ್ಲಿ ಮಳೆ ಕೊರತೆಯಿಂದ ಅಗೇಣೀ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದ್ದರೂ, ರೈತರು ಸ್ವಂತ ಹಣ ಖರ್ಚು ಮಾಡಿ ಬಸದೇಶ್ವರ ಏತ ನೀರಾವರಿ ಯೋಜನೆಯ ಮುಖ್ಯ ಹಾಗೂ ಉಪಕಾಲುವೆಗಳಿಂದ ನೀರನ್ನು ಅಗೇಣೀ ನದಿಗೆ ಹರಿಸುವ ಮೂಲಕ ನದಿಯಲ್ಲಿನ ಬಾಂಧಾರಗಳನ್ನು ತುಂಬಿಸಿದ್ದಾರೆ. ಇದರಿಂದ ಪಾಂಡೆಗಾಂವ, ಖೋಟಾಡಿ, ಖೋತವಾಡಿ, ಶಿರೂರ, ಕಿಳೇಗಾಂವ, ಸಂಬರಗಿ, ನಾಗನೂರ, ಉಗಾರಣಿ, ಇಂಗಳಗಾಂವ, ಮಾಯನಟ್ಟಿ, ಅಭಯಾಳ ಸೇರಿದಂತೆ ಹಲವು ಗ್ರಾಮಗಳ ನೂರಾರು ಎಕರೆ ಕೃಷಿ ಜಮೀನುಗಳ ಬಾವಿಗಳಿಗೆ ನೀರು ಲಭ್ಯವಾಗಿದ್ದು, ರೈತರಿಗೆ ಅನುಕೂಲವಾಗಿದೆ. ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆಯದೆ ರೈತರು ಸ್ವಂತ ಖರ್ಚಿನಲ್ಲಿ ಕಾಲುವೆ ಮೂಲಕ ನೀರು ಹರಿಸಿರುವುದು ಗಮನಾರ್ಹವಾಗಿದೆ. ರೈತ ಸಂಘಟನೆಯ ಮುಖಂಡ ಕಿರಣ್ ಮಿಸಾಳ್ ಮಾತನಾಡಿ, ರೈತರೇ ಹಣ ಖರ್ಚು ಮಾಡಿ ಸಣ್ಣ ಹೊಳೆಯ ಮೂಲಕ ನೀರು ಹರಿಸಿದ್ದರಿಂದ ಅಗೇಣೀ ನದಿಯಲ್ಲಿ ನೀರು ಸಂಗ್ರಹವಾಗಿದೆ ಎಂದು ತಿಳಿಸಿದರು.