ಮತದಾನ ಪವಿತ್ರವಾದದ್ದು ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕು

ರಾಣೇಬೆನ್ನೂರು 23: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ‘ಮತದಾನ’ ಶ್ರೇಷ್ಠವಾದ ಕಾಯಕ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವಾಗಿ ಇರುವ ಸರಕಾರವೇ ಪ್ರಜಾಪ್ರಭುತ್ವ ಸರಕಾರ. ಇಂಥ ರಾಷ್ಟ್ರದಲ್ಲಿಯರುವ ನಾವೆ ಪುಣ್ಣರು, ಭಾರತ ರಾಷ್ಟ್ರದಲ್ಲಿ ಶ್ರೇಷ್ಠವಾದ ಸಂವಿಧಾನ ರಚಸಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಕೊಟ್ಟಿರುವ ಸಂವಿಧಾನ ಶಿಲ್ಪಿ ಡಾಽಽ ಬಿ.ಆರ್‌. ಅಂಬೇಡ್ಕರ ರವರು ಜನಿಸಿದ ನಾಡಿನಲ್ಲಿ ನಾವು ಜನಿಸಿ, ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಪ್ರಜಾಪ್ರಭುತ್ವದ ಮೂಲ ಆಶೆಯವೆ ಮತದಾನ, ಈ ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದೆಂದು ರೈತ ಮುಖಂಡ ಪ್ರಗತಿಪರ ಚಿಂತಕ, ತಾ.ಪಂ.  ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು.  

ಅವರು ನಿನ್ನೆ ದಿವಸ ತಾಲೂಕಿನ ಸುಣಕಲಬಿದರಿ ಗ್ರಾಮದಲ್ಲಿ ತಾಲೂಕಾ ರೈತ ಮಹಿಳಾ ಸಂಘಟನೆಯಿಂದ ನಡೆದ ಮತದಾನ ಜಾಗೃತಿ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕಲ್ಲದೆ ಮತಾದನದ ಅರಿವು ಇಲ್ಲದವರಿಗೆ ಜಾಗೃತಿ ಮೂಡಿಸಿ ‘18’ ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ಸಿಗುವಂತೆ ಕೆಲಸ ಮಾಡಬೇಕು ಎಂದು ಭಾರತ ದೇಶದಲ್ಲಿ ನೂರಕ್ಕೆ ನೂರರಷ್ಟು ‘ಮತದಾನ‘ ವಾಗುತ್ತೊ ಅಂದು ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬಂದಂತಾಗುತ್ತದೆ ಎಂದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಒಕ್ಕೂಟಗಳ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ ಮಾತನಾಡಿ ಹೆಣ್ಣು ಜಗದ ಕಣ್ಣು, ಜನನಿತಾಯಿ ಮೊದಲು ಗುರುವು, ಹೆಣ್ಣಿಲ್ಲದ ಸಮಾಜವನ್ನು ಕಲ್ಪನೆ ಮಾಡಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಮಹಿಳೆಯನ್ನು ಭೂಮಿ ತಾಯಿಗೆ, ಹೋಲಿಸುವ ಈ ರಾಷ್ಟ್ರದಲ್ಲಿ ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮುಂದಿನ ವರ್ಷದಿಂದ ಈ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಭಾರತ ಸರಕಾರ ಕಡ್ಡಯ ರಜೆ ಘೋಶಿಸಬೇಕೆಂದು ಭಾರತ ಸರಕಾರಕ್ಕೆ ಒತ್ತಾಯಿಸಿದರು.  

ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸರಕಾರ ಕಡ್ಡಾಯ ರಜೆ ಘೋಶಿಸುವ ಬಗ್ಗೆ ಶೀಘ್ರದಲ್ಲಿ ಹೋರಾಟ ಮಾಡಲಾಗುವುದೆಂದರು. ಕೇವಲ ರೈತ ಕುಲದ ಪರ ನ್ಯಾಯಕ್ಕಾಗಿ ಹೋರಾಡುವುದಕ್ಕೆ ಮಾತ್ರ ಸೀಮಿತವಾಗಿದ್ದ ರೈತ ಸಂಘಟನೆಗಳನ್ನು ಒಗ್ಗೂಡಿಸಿ ‘ಮತಾದಾನ ಜಾಗೃತ’ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒತ್ತು ಕೊಟ್ಟಿರುವ ರೈತ ಸಂಘಟೆನಗಳ ನಿಲುವನ್ನು ಮೆಚ್ಚಲೇಬೇಕಾದಂತಹ ವಾತಾವರಣ ನಿರ್ಮಾಣವಾಗಿದ್ದು ಹೋರಾಟದ ಹೊಸ ಬದಲಾವಣೆಗೆ ನಾಂದಿ ಹಾಡದಂತಾಗಿದ್ದು ವಿಶೇಷವಾಗಿತ್ತು.  

ವೇದಿಕೆಯ ಮೇಲೆ ಯುವ ಮುಖಂಡ ಚಂದ್ರಣ್ಣ ಎಚ್‌. ಬೇಡರ, ಪರ್ವತಗೌಡ ಕುಸಗೂರು, ಹರಿಹರಗೌಡ ಪಾಟೀಲ, ಕವಿತಾ ಎನ್‌. ಕೂಸಗೂರು, ಶಿವಾನಂದ ಲಿಂಗದಹಳ್ಳಿ, ಹಾಲೇಶ ಕೆಂಚನಾಯ್ಕರ್, ಆಶಾ ಮುದಿಗೌಡ್ರ, ಸುಮಾ ಶಿ. ಅಂಗಡಿ, ಶೈಲಾ ಎಂ. ಹೊನ್ನಳ್ಳಿ, ಮಂಜಕ್ಕ ಎಂ. ಮಟ್ಟಿಮನಿ,  ಶೈಲಾ ಅಸುಂಡಿ, ಪುಪ್ಪಾ ಬೇವಿನಹಳ್ಳಿ, ನಾಗಮ್ಮ ಸರವಂದ, ಗೌರಮ್ಮ ಅರಳಿ, ರತ್ನಮ್ಮ ನ ಬಡಿಗೇರ, ವಿಶಾಲಾ ಅರ್ಕಾಚಾರಿ, ಅಶೀನಾ ಕಮ್ಮಾರ, ಮಂಗಳಾ ಗುಬ್ಬಿ, ಮಮತಾ ಗುಬ್ಬಿ, ಹನುಮವ್ವ ಸರವಂದ ಮುಂತಾದ ಐದನೂರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.