ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ: ರಂಗೋಲಿ ಸ್ಪರ್ಧೆ

ಮೂಡಲಗಿ 27: ಪಟ್ಟಣದ ಪುರಸಭೆ ಆವರಣದಲ್ಲಿ ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮಿತಿಯಿಂದ ಲೋಕ ಲೋಕಸಭಾ ಚುನಾವಣೆಯಲ್ಲಿ ಮತದಾನದ ಅರಿವು ಮೂಡಿಸುವ ನಿಮಿತ್ಯ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಶುಕ್ರವಾರದಂದು ರಂಗೋಲಿ ಸ್ಪರ್ಧೆ ಏರಿ​‍್ಡಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.  

ಮತದಾನ ಅರಿವು ಮೂಡಿಸುವ ರಂಗೋಲಿ ಸ್ಫರ್ಧೆಯಲ್ಲಿ  ಒಟ್ಟು 18 ಸ್ತ್ರೀ ಶಕ್ತಿ ಸಂಘದವರು ಭಾಗವಹಿಸಿ ಮತದಾನ ಅರಿವಿನ ವಿವಿಧ ಬಗ್ಗೆಯ ರಂಗೋಲಿಯಲ್ಲಿ ಚಿತ್ರ ಬಿಡಿಸಿ ಗಮನಸೆಳೆದರು.  

ಮೂಡಲಗಿ ತಾಪಂ ಇಒ ಹಾಗೂ ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿ ಅಧ್ಯಕ್ಷ ನವೀನಪ್ರಸಾದ ಕಟ್ಟಿಮನಿ ವಿಜೇತರಿಗೆ ಪಾರೀತೋಷಕ ವಿತರಿಸಿ ಮಾತನಾಡಿದ ಅವರು ಮತದಾರರು ಪ್ರಾಮಾಣಿಕವಾಗಿ ತಮ್ಮ ಮತ ಹಕ್ಕನ್ನು ಚಲಾಯಿಸಿದರೆ ಮಾತ್ರ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಮತದಾರರು ತಪ್ಪದೆ ತಮ್ಮ ಮತ ಹಕ್ಕನ್ನು ಚಲಾಯಿಸಲು ಪ್ರೇರಿಪಿಸಬೇಕು. ಮಹಿಳಾ ಮತದಾರರು ಮತದಾನದಿಂದ ದೂರ ಉಳಿಯುವುದು ಸರಿಯಲ್ಲ. ಚುನಾವಣೆಗಳಲ್ಲಿ ಉತ್ತಮ ಆಯ್ಕೆಗೆ ನಿರ್ಲಕ್ಷ  ತೋರಬಾರದು. ಪ್ರತಿಯೊಬ್ಬ ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಬೆಳಗಾವಿ ಜಿಲ್ಲೆಯಲ್ಲಿ ಮೇ.7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಎಂದರು. 

ಸ್ಪರ್ಧೆಯಲ್ಲಿ ವಡೇರಹಟ್ಟಿ ಸ್ತ್ರೀ ಶಕ್ತಿ ಸಂಘ ಪ್ರಥಮ, ಮೂಡಲಗಿ ಗ್ರಾಮ ಕಾಯಕ ಮಿತ್ರರ ತಂಡ ದ್ವಿತೀಯ, ಯಾದವಾಡ ಸ್ತ್ರೀ ಶಕ್ತಿ ಸಂಘ ತೃತೀಯ ಸ್ಥಾನ ಪಡೆದುಕೊಂಡರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿಲ್ಲಾಯಿತು ಹಾಗೂ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಚಿತ್ರಕಲಾ ಶಿಕ್ಷಕರಾದ ಸುಭಾಸ ಕುರಣಿ, ಶೋಭಾ ಕಂಕಣವಾಡಿ, ಜಯಶ್ರೀ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.  

ಈ ಸಮಯದಲ್ಲಿ ತಾ.ಪಂ ಸಹಾಯಕ ನಿರ್ದೇಶಕರಾದ ಸಂಗಮೇಶ ರೊಡ್ಡನ್ನವರ, ಚಂದ್ರಶೇಖರ ಬಾರ್ಕಿ, ಪುರಸಭೆ ಆರೋಗ್ಯ ನೀರೀಕ್ಷಕರಾದ ಚಿದಾನಂದ ಮುಗಳಖೋಡ, ಪ್ರೀತಂ ಭೋವಿ ಹಾಗೂ ತಾ.ಪಂ ಸಿಬ್ಬಂದಿ ವರ್ಗದವರು ಇದ್ದರು.