ಮೂಡಲಗಿ ಪುರಸಭೆಯಿಂದ ಮತದಾನದ ಜಾಗೃತಿ ಜಾಥಾ

ಮೂಡಲಗಿ 28: ಮೇ.7 ರಂದು ಜರುಗುವ ಲೋಕಸಭಾ ಚುನಾವಣಾ ನಿಮಿತ್ಯ ಬುಧವಾರದಂದು ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಜಾಗೃತಿ ಜಾಥಾ ಮೂಲಕ ಮತದಾನ ಅರಿವು ಮೂಡಿಸಿದರು.  

ಜಾಗೃತಿ ಜಾಥಾವು ಪುರಸಭೆ ಕಾರ್ಯಾಲಯದ ಆವರಣದಿಂದ ಕಲ್ಮೇಶ್ವರ ವೃತ್ತ, ಚನ್ನಮ್ಮ, ಕರೇಮ್ಮಾದೇವಿ, ಬಸವೇಶ್ವರ ಹಾಗೂ ಸಂಗಪ್ಪಣ್ಣ ವೃತ್ತ ಮೂಲಕ ಜರುಗಿತು. ಜಾಥಾದಲ್ಲಿ ಪುರಸಭೆ ಸಿಬ್ಬಂದಿ, ಅಂಗನವಾಡಿ, ಆಶಾಕಾರ್ಯಕರ್ತೆಯರು, ತಾಲೂಕಾ ಪಂಚಾಯತಿ ಮತ್ತು ಪೊಲೀಸ್ ಇಲಾಖೆ, ಸಿಡಿಪಿ ಕಛೇರಿ  ಸಿಬ್ಬಂದಿ ವರ್ಗದವರು ಭಾಗವಹಿಸಿ ಪ್ರತಿಯೋಬ್ಬರು ಮತದಾನ ಮಾಡಬೇಕು, ಮತದಾನ ಮಾಡಿದವರು ಮಹಾಶೂರ, ಮತದಾನಕ್ಕಿಂತ ಮತ್ತೊಂದಿಲ್ಲ, ಪ್ರಜಾ ಪ್ರಭುತ್ವದ ಹಬ್ಬ ಮತದಾನ ಎಂಬ ಘೋಷಣೆಗಳು ಜಾಗೃತಿ ಜಾಥಾದಲ್ಲಿ ಮೊಳಗಿದವು.  

ಜಾಥಾದಲ್ಲಿ ಮೂಡಲಗಿ ತಾಪಂ ಇಒ ಹಾಗೂ ಅರಭಾವಿ ಕ್ಷೇತ್ರದ ಸ್ವೀಪ್ ಸಮಿತಿ ಅಧ್ಯಕ್ಷ  ನವೀನಪ್ರಸಾದ ಕಟ್ಟಿಮನಿ, ಸಿಪಿಐ ಅಲ್ದುಲ್ ವಾಜೀದ್ ಪಟೇಲ್, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಹಿರಿಯ ಆರೋಗ್ಯ ನೀರೀಕ್ಷ ಚಿದಾನಂದ ಮುಗಳಖೋಡ. ತಾ.ಪಂ ಎಒ ಸಂಗಮೇಶ ರೋಡನ್ನವರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮತ್ತು ರೋವರ್ಸ ಗೈಡ್ಸ್‌ ಘಟಕ ಅಧ್ಯಕ್ಷ ಪ್ರೊ.ಜಿ.ವಿ.ನಾಗರಾಜ, ಅಂಗನವಾಡಿ ಮೇಲ್ವಿಚಾರಕಿ ಕಸ್ತೂರಿ ಪಡೆನ್ನವರ, ಅಂಗನವಾಡಿ, ಆಶಾಕರ್ಯಕರ್ತೆಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.