ಮತದಾನ ಜಾಗೃತಿ: ನಾಟಕ ಪ್ರದರ್ಶನ

ಹಂಪಿ(ವಿಜಯನಗರ) 23: ಜನಪ್ರತಿನಿಧಿಗಳನ್ನು ನಿಯಂತ್ರಿಸಲು ಹಾಗೂ ತಮ್ಮದೇ ಸರ್ಕಾರವನ್ನು ಆಯ್ಕೆಗೊಳಿಸಲು ಮತದಾನದ ಪ್ರಾಮುಖ್ಯತೆ ಕುರಿತು ಜನರಲ್ಲಿ ಮತದಾನದ ಅರಿವು ಮೂಡಿಸಲು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರದರ್ಶನ ಕಲೆ ವಿಭಾಗವು ಮಂಗಳವಾರ ‘ಮತದಾನ ನಮ್ಮ ಹಕ್ಕು’ ಕಿರು ಬೀದಿ ನಾಟಕ ಪ್ರದರ್ಶಿಸಿದರು. 

ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ತಿ​‍​‍್ೇರುದ್ರ​‍್ಪ ಜೆ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

ಕಿರು ನಾಟಕದಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಮರುಳಾಗದೇ ಮತದಾನ ಮಾಡುವಂತೆ ಸಂದೇಶ ನೀಡಲಾಯಿತು. ‘ನಮ್ಮ ಮತ ದೇಶಕ್ಕೆ ಹಿತ’, ‘ಮತದಾನ ನಮ್ಮ ಹಕ್ಕು’, ‘ನಮ್ಮ ಮತ ಮಾರಾಟಕ್ಕಿಲ್ಲ’ ಎಂಬ ನಾಟಕದಾದ್ಯಂತ ಘೋಷಣೆಗಳು ಮೊಳಗಿದವು. 

ವಿಶ್ವವಿದ್ಯಾಲಯದ ಕುಲಸಚಿವ ಎಸ್‌. ಎನ್ ರುದ್ರೇಶ, ನಾಟಕ ವಿಭಾಗದ ಅತಿಥಿ ಉಪನ್ಯಾಸಕರುಗಳಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಸಹನಾ ಪಿಂಜಾರ, ಹೇಮೇಶ್ವರ ಕೆ ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.