ಮೇ.7ರಂದು ಎಲ್ಲರೂ ತಪ್ಪದೇ ಮತದಾನ ಮಾಡಿ: ಎಲ್‌.ವಿರೇಂದ್ರ ಕುಮಾರ್

ಕನಕಗಿರಿಯಲ್ಲಿ ನೆರವೇರಿದ ಚುನಾವಣಾ ಧ್ವಜಾರೋಹಣ 

ಕೊಪ್ಪಳ ಏಪ್ರಿಲ್ 28: ಕನಕಗಿರಿಯ  ಪಟ್ಟಣ ಪಂಚಾಯತಿಯಲ್ಲಿರುವ 75 ್ಘ 76ನೇ ಮತಗಟ್ಟೆ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಚುನಾವಣಾ ಪರ್ವ ದೇಶದ ಗರ್ವ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಚಾಲನೆ ನೀಡಿದರು.  

ಈ ವೇಳೆ ಕನಕಗಿರಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾದ ಎಲ್‌.ವಿರೇಂದ್ರಕುಮಾರ್ ಅವರು ಮಾತನಾಡಿ, ಭಾರತ ಸಂವಿಧಾನ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಮಾಡುವ ಹಕ್ಕನ್ನು ಕೊಟ್ಟಿದೆ. ಆ ಹಕ್ಕನ್ನು ಚಲಾಯಿಸಲು ಎಲ್ಲರೂ ಮತಗಟ್ಟೆ ಬಂದು ಮತದಾನ ಮಾಡಿ ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.  

ಜೊತೆಗೆ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ತಾಲೂಕಿನ ಎಲ್ಲಾ 94 ಮತಗಟ್ಟೆಗಳ ಆವರಣದಲ್ಲಿ ಇಂದು ಏಕಕಾಲಕ್ಕೆ ಧ್ವಜಾರೋಹಣ ನೆರವೇರಿದ್ದು, ಮತದಾನದ ದಿನವರೆಗೆ ಈ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಎಲ್ಲರೂ ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಮೇ.7 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. 

ಈ ವೇಳೆ ಸಿಡಿಪಿಓ ವಿರುಪಾಕ್ಷಿ, ಸಿಪಿಐ, ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಕಂದಕೂರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.