ಕಾರ್ಲಕಟ್ಟಿ ತಾಂಡಾದಲ್ಲಿ ಅತಿ ಹೆಚ್ಚು ಮತದಾನ ಮಾಡಿ: ಕಂದಕೂರ

ಬೈಲಹೊಂಗಲ 21: ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ ಲಕ್ಕುಂಡಿ ಅಡಿಯಲ್ಲಿ ಬರುವ ಕಾರ್ಲಕಟ್ಟಿ ತಾಂಡಾದಲ್ಲಿ ಕಳೆದ ಲೋಕಸಭಾ ಚುನಾವಣೆ 2019 ರಲ್ಲಿ ಮತದಾನದ ಪ್ರಮಾಣ ಪ್ರತಿಶತ 10ಅ ರಷ್ಟು ಆಗಿರುವುದು ಕಳೆದ ವಿಧಾನ ಸಭಾ ಚುನಾವಣೆಯ ಒಟ್ಟಾರೆ ಪ್ರತಿಶತದಲ್ಲಿ ಕಾರ್ಲಕಟ್ಟಿ ತಾಂಡಾ ಮತದಾನವು ಅತೀ ಕಡಿಮೆ ಮತಗಟ್ಟೆ ಎಂದು ಸಾಬೀತಾಗಿದ್ದು, ಪ್ರಸ್ತುತ ನಡೆಯುವ ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಎಲ್ಲ ಮತಬಾಂಧವರು ಈ ಬಾರೀ ಅತೀ ಹೆಚ್ಚು ಮತದಾನ ಮಾಡಬೇಕೆಂದು ತಾಲೂಕಾ ಸ್ವೀಪ್ ಸಮೀತಿ ಅಧ್ಯಕ್ಷ ಗಂಗಾಧರ ಕಂದಕೂರ ಕರೆ ನೀಡಿದರು. 

ಅವರು ಮತಕ್ಷೇತ್ರದ ಕಾರ್ಲಕಟ್ಟಿ ತಾಂಡಾದಲ್ಲಿ ಮತದಾನ ಜಾಗೃತಿ ನಡೆಸಿ ಮಾತನಾಡಿ, ಗ್ರಾಮ ದೇವಿ ಜಾತ್ರೆಗೆ ಎಲ್ಲರೂ ಬಂದು ವಿಜೃಂಭಣೆಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಸಂತೋಷದಿಂದ ಮಾಡುತ್ತಿರಿ ಅದೇ ರೀತಿಯಲ್ಲಿಯೂ ಸಹ ಬರುವ ಲೋಕಸಭಾ ಚುನಾವಣೆಯಲ್ಲಿ ಜಾತ್ರೆಯ ರೂಪದಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮೇ-07 ರಂದು ಮತದಾನದಲ್ಲಿ ನಿಮ್ಮ ಅಮೂಲ್ಯವಾದ ಮತವನ್ನು ನೀಡುವುದರ ಮೂಲಕ ದೇಶ ಗರ್ವ ಪಡುವಂತಾಗಬೇಕು ಎಂದರು. 

ಭಾರತೀಯ ಪ್ರಜೆಗಳಾದ ನಾವುಗಳು ಸುಭದ್ರವಾದ ದೇಶಕ್ಕಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರು ಕೊಟ್ಟಿರುವ  ಸಂವಿಧಾನದ ಭಾಗವಾಗಿರುವ ಮತದಾನದ ಹಕ್ಕು ಮತ್ತು ಕರ್ತವ್ಯಗಳನ್ನು ನಿಭಾಯಿಸುವುದು ನಮ್ಮೆಲ್ಲರ ಹೋಣೆಯಾಗಿದ್ದು ಆದ್ದರಿಂದ ಚುನಾವಣೆಯನ್ನು ಗ್ರಾಮದ ಜಾತ್ರೆಯಂತೆ ವಿಜೃಂಭಣೆಯಿಂದ ಆಚರಿಸಿ ಎಂದರು. 

ಗ್ರಾಮದಲ್ಲಿರುವ ಪ್ರತಿ ಕುಟುಂಬವು ಹೊರ ರಾಜ್ಯಗಳಿಗೆ ದುಡಿಯಲ್ಲಿಕ್ಕೆ ಹೋಗಿರುವುದು ಮೇಲ್ನೊಟಕ್ಕೆ ತಿಳಿದು ಬಂದಿದ್ದು ಆದ್ದರಿಂದ ಮನೆಯಲ್ಲಿರುವ ಹಿರಿಯರು ನಿಮ್ಮ ಮಕ್ಕಳಿಗೆ ಕರೆ ಮಾಡಿ ಮೇ-07 ಕ್ಕೆ ಮತದಾನ ಮಾಡಲಿಕ್ಕೆ ಬರುವಂತೆ ಮತದಾನದ ಮಮತೆಯ ಕರೆಯೊಲೆ ಯನ್ನು ತಿಳಿಸಿ ಎಂದರು . 

ಪ್ರತಿಜ್ಞಾ ವಿಧಿ ಭೋದನೆ ಮಾಡುವುದು ಮತ್ತು ಚುನಾವಣಾ ಘೋಷವಾಕ್ಯಗಳನ್ನು ಹೇಳುತ್ತಾ ಗ್ರಾಮದ ಓಣಿಗಳಲ್ಲಿ ಜಾಥಾಗಳನ್ನು ಮಾಡುವ ಮೂಲಕ ಚುನಾವಣಾ ಜಾಗೃತಿ ಮೂಡಿಸಲಾಯಿತು. ವಿಶೇಷವಾಗಿ ಲಂಬಾಣಿ ವೇಷಭೂಷನಗಳನ್ನು ಧರಿಸಿರುವ ಹಿರಿಯ ಮಹಿಳೆಯ ಮುಂದಾಳತ್ವ ಹಾಗೂ ಹಿರಿಯ ಮುಖಂಡರ ಮುಂದಾಳತ್ವದಲ್ಲಿ ಬೀದಿ-ಬೀದಿಗಳಲ್ಲಿ ಮತದಾನ ಜಾಗೃತಿ ಮಾಡಲಾಯಿತು. 

ಗ್ರಾಮದ ಪ್ರತಿ ಮಹಿಳೆಯರಿಗೆ ಅರಿಸಿನ-ಕುಂಕುಮ ಕೊಡುವ ಮೂಲಕ ಮತದಾನವನ್ನು ಕಡ್ಡಾಯವಾಗಿ ಮಾಡುವಂತೆ ಕರೆ ನೀಡಿದರು 

ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಪಿ. ಭೋಳಶೆಟ್ಟಿ, ಎಸ್‌.ಬಿ. ಸಂಗನಗೌಡರ, ಎಸ್‌.ವಿ.್ಹ ಹಿರೇಮಠ, ಎಸ್‌.ಎಸ್‌. ಶಿವನಾಯ್ಕರ,  ಮುದಕಪ್ಪ ಖಾನಪೇಠ, ಶಂಕರ ಕಾರಬಾರಿ, ಲಕ್ಷ್ಮಣ್ಣ ದೊಡಮನಿ, ವಿ ಎಲ್ ನಾಯ್ಕ, ಪಿ ಎಸ್ ಲಮಾಣಿ, ಎಸ್ ಎಮ್ ಗೌಡರ, ರಾಮಣ್ಣ ಗೌಡರ,ಎ ಆರ್ ಗೌಡರ, ಲಕ್ಷ್ಮಣ್ಣ ಪೆಂಡಾಲ ಶಂಕರ ಪೂಜೇರಿ, ಜಿ.ವ್ಹಿ. ರಾಠೋಡ ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇತರರು ಹಾಜರಿದ್ದರು.