ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ: ಪೂರ್ವ ಭಾವಿ ಸಭೆ
Vishvesvarayya's Birth Anniversary: Pre-Fall Meeting
ಬ್ಯಾಡಗಿ 26 : ಸೆಪ್ಟೆಂಬರ್ 15 ರಂದು ನಡೆವ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ತಾಲೂಕಾ ಗುತ್ತಿಗೆದಾರರ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ತಾಲೂಕಾ ಸಂಘದ ಅಧ್ಯಕ್ಷ ವೈ.ಎನ್. ಕರೆಗೌಡ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂದು ನಡೆವ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಬರುವಂತೆ ಆವ್ಹಾನಿಸಲು ಸಭೆಯಲ್ಲಿ ಚರ್ಚಿಸಿತಲ್ಲದೇ ಸಂಘದ ಹತ್ತು ಹಲವಾರು ಸಮಸ್ಯೆಗಳು ಹಾಗೂ ಸಂಘದ ಸಂಘಟನೆ ಬಗ್ಗೆ ದೀರ್ಘವಾದ ಚರ್ಚೆಗಳು ನಡೆದವು.
ಸಭೆಯಲ್ಲಿ ತಾಲೂಕಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಶಿವಪುತ್ರ್ಪ ಅಗಡಿ, ಹಿರಿಯ ಗುತ್ತಿಗೆದಾರರಾದ ರಮೇಶ ಸುತ್ತಕೋಟಿ, ತಿಮ್ಮಣ್ಣ ವಡ್ಡರ, ಶ್ರೀಕಾಂತ ಉಜನಿ, ಸುರೇಶ ಪೂಜಾರ, ಶಂಭನಗೌಡಪಾಟೀಲ, ರಮೇಶ ಓಲೇಕಾರ, ಬಸಿರ್ ಅಹ್ಮದ್ ತಳಗೇರಿ, ಆನಂದ ಬಂಡಿವಡ್ಡರ, ಕೃಷ್ಣಪ್ಪ ವಡ್ಡರ, ಮಾಲತೇಶ ಪಾತ್ರೋಟಿ, ಮಾಲತೇಶ ಮಳವಳ್ಳಿ,ಗೌತಮ್ ಮಾಳಗಿ, ವಿಜಯ್ ಸಂಕಣ್ಣವರ್ರಜ್ವಲ್ ಸೇರಿದಂತೆ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 