ವಿನೋದ ನಡೋಣಿ ನಿಧನ

ರಾಯಬಾಗ 19: ಪಟ್ಟಣದ ವಿವೇಕ ನಗರದ ವಿನೋದ ವಿಠೋಬಾ ನಡೋಣಿ (76) ಅವರು ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಖ್ಯಾತ ಚಿತ್ರ ಕಲಾವಿದ ಸಹೋದರ ಬಾಬುರಾವ ನಡೋಣಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.