ಗ್ರಾಮಗಳು ವ್ಯಸನ ಮುಕ್ತವಾಗಬೇಕು: ದೇಶದ ಆಸ್ತಿ ಆರೋಗ್ಯವಂತ ಯುವಶಕ್ತಿ: ದಿಂಗಾಲೇಶ್ವರ ಶ್ರೀ

ಹಾವೇರಿ: ಭಾರತದ ದೇಶದ ಆಸ್ತಿ ಇನ್ನಾವುದು ಆಗಿರದೇ ಯುವಜನತೆಯೇ ಆಗಿರುತ್ತದೆ. ಆದರೆ ಈ ಸಂಪತ್ತನ್ನು ಸದ್ಬಳಕೆಮಾಡಿಕೊಳ್ಳುವ ಎಚ್ಚರ ಸಾರ್ವತ್ರಿಕವಾಗಬೇಕಿದೆ ಎಂದು  ಬಾಳೇಹೊಸೂರು ದಿಂಗಾಲೇಶ್ವರಮಠದ ದಿಂಗಾಲೇಶ್ವರ ಸ್ವಾಮೀಜಿಗಳು ಹೇಳಿದರು.

ಬೆಳವಿಗಿಯ ಸಕರ್ಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ನಡೆದ "ಯುವ ಜನತೆಯ ಬೆಳಕಿನಲ್ಲಿ ವ್ಯಸನಮುಕ್ತ ಸಮಾಜ" ಕುರಿತಾದ ಒಂದು ದಿನದ ಕಾಯರ್ಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನರ್ಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಹಾಗೂ ಬಾಳೇಹೊಸೂರಿನ ದಿಂಗಾಲೇಶ್ವರಮಠದ ಜಂಟಿ ಸಹಯೋಗದಲ್ಲಿ ಕಾಯರ್ಾಗಾರವನ್ನು ಏರ್ಪಡಿಸಲಾಗಿತ್ತು.

ದೇಶದಲ್ಲಿರುವ ಜನತೆ ಆರೋಗ್ಯವಂತರಾಗಿರಬೇಕು. ಕುಡಿತ, ತಂಬಾಕು, ಸಿಗರೇಟು, ಇನ್ನಿತರ ವ್ಯಸನಗಳು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಇದರಿಂದ ವಯಕ್ತಿಕ, ಸಾಮಾಜ ಮತ್ತು ದೇಶಕ್ಕೆ ಆಥರ್ಿಕ ಕಷ್ಟ ನಷ್ಟ ಎಂದು ಎಚ್ಚರಿಸಿದ ಶ್ರೀಗಳು ಸಮಾಜದ ಸ್ವಾಸ್ಥ್ಯಕ್ಕೆ ಪ್ರತಿಯೊಬ್ಬರು ಕಾರಣರಾಗಬೇಕು. ಬೆಳವಿಗಿ ಮತ್ತು ಸುತ್ತಮುತ್ತಲಿನ ಹಳ್ಳಿಗಳು ಮುಂದಿನ ದಿನಗಳಲ್ಲಿ ವ್ಯಸನಮುಕ್ತ ಹಳ್ಳಿಗಳಾಗಿ ದೇಶದ ಗಮನ ಸೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾಯರ್ಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಂಯಮ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಮಾತನಾಡಿ, ರಾಷ್ಟ್ರವನ್ನು  ಮೂರು ಕಿಂಗ್ಗಳು ಆಳುತ್ತಿದ್ದಾರೆ. ಅವರು  ಪಾನ್ಕಿಂಗ್, ಸ್ಮೋಕಿಂಗ್, ಡ್ರಿಂಕಿಂಗ್ ಎಂದು ವಿವರಿಸಿದರಲ್ಲದೇ ಕುಡಿತ ಯಾವುದೇ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದು ವೈದ್ಯಕೀಯ ಸಂಶೋಧನೆಯಿಂದ ರುಜುವಾತಾಗಿದೆ ಎಂದರು.

     ವ್ಯಕ್ತಿಯ ಮಾಸಿಕ , ದೈಹಿಕ ಆರೋಗ್ಯದ ಮೇಲೆ ಪ್ರತಿಕೂಲ ಬೀರುತ್ತ ಸಾಮಥ್ರ್ಯವನ್ನು ಕುಗ್ಗಿಸುವುದಲ್ಲದೆ ಗೌರವಕ್ಕೆ ಕುಂದುಂಟು ಮಾಡುತ್ತದೆ ಎಂದು ಡಾ.ಪಿ.ವಿ.ಭಂಡಾರಿ ಅಭಿಪ್ರಾಯ ಪಟ್ಟರು. 

ಇದೇ ಸಂದರ್ಭದಲ್ಲಿ ಕರಿಯಪ್ಪ ಹಂಚಿನಮನಿ ತಂಡದ ಚಿತ್ರಕಲಾ ಪ್ರದರ್ಶನವನ್ನು ಬೆಳವಿಗಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಲಲಿತಾ ಪಾಟೀಲ ಉದ್ಘಾಟಿಸಿದರು. 

.ಕಾರ್ಯಕ್ರಮದಲ್ಲಿ ಸಾಗರದ ಪುಷ್ಪಲತಾ ಮಹಿಳಾ ತಂಡದಿಂದ ಡೊಳ್ಳು ಕುಣಿತ, ಹಾವೇರಿಯ ಜೀವನ ಜ್ಯೋತಿ ಕಲಾತಂಡದಿಂದ ಬೀದಿ ನಾಟಕ ಹಾಗೂ ಕನಕಾಪುರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಜಯಲಕ್ಷ್ಮೀ ವಿದ್ಯಾಥರ್ಿನಿಯಿಂದ ಯೋಗ ಪ್ರದರ್ಶನ ಜರುಗಿತು. 

ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷರಾದ ಅಶೋಕ ಮರಚರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಳವಿಗಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಲಲಿತಾ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕನರ್ಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದಶರ್ಿಯರಾದ ಕೆ.ರೋಹಿಣಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾತರ್ಾಧಿಕಾರಿಗಳಾದ ಡಾ. ಬಿ.ಆರ್.ರಂಗನಾಥ್ ಅವರು ಸ್ವಾಗತಿಸಿದರು. ತಾಲೂಕು ಪಂಚಾಯಿತಿಯ ದ್ಯಾಮನಗೌಡ ಹೊನ್ನಗೌಡರ, ಹಾವನೂರು ಕ್ಷೇತ್ರದ ಜಿಲ್ಲಾ ಪಂಚಾಯತಿಯ ಸದಸ್ಯರಾದ ಮಾರುತಿ ಗೊರವರ, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಈರುಗೌಡ ಸಂಕನಗೌಡ, ವಿ.ಎಸ್.ಎಸ್. ಬ್ಯಾಂಕನ ಅದ್ಯಕ್ಷರಾದ ಎಸ್.ಆರ್.ಮಾಡಳ್ಳಿ, ಸಿ.ಬಿ.ತೋಟದುರ, ನಿವೃತ್ತ ಶಿಕ್ಷಕರಾದ ಪುಂಡಲಿಕರೆಡ್ಡಿ, ಫಕ್ಕಿರಯ್ಯ, ಶಂಕರ್, ಎಸ್.ಎಫ್, ಸೊಪ್ಪಿನ್, ಮಂಜುನಾಥ್, ಜಿಲ್ಲಾ ಬಂಜಾರಾ ಸಂಘದ ಅಧ್ಯಕ್ಷ ಈರಪ್ಪ ಲಮಾಣಿ, ಶಿಕ್ಷಣ ಇಲಾಖೆಯ ಮಂಜುನಾಥ ಹಾಗೂ ಮತ್ತಿತರರು ಉಪಸ್ಥಿತರಿದ್ದರು.  ಗಮಸೆಳೆದ ಮದ್ಯ ವಿರೋಧಿ ಜಾಥಾ:  'ಯುವ ಜನತೆ ಬೆಳಕಿನಲ್ಲಿ ವ್ಯಸನಮುಕ್ತ ಸಮಾಜ' ಕುರಿತಾದ ಏಕದಿನ ಕಾರ್ಯಗಾರದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಬಾಳೇಹೊಸೂರು ದಿಂಗಾಲೇಶ್ವರ ಮಠದ ಶ್ರೀದಿಂಗಾಲೇಶ್ವರ ಸ್ವಾಮೀಜಿು ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.

ಮದ್ಯಪಾನ ವಿರೋಧಿ ಜಾಗೃತಿ ಕುರಿತಂತೆ ಏರ್ಪಡಿಸಿದ್ದ  ಪ್ರಬಂಧ ಸ್ಪಧರ್ೆ ಭಾಗವಹಿಸಿ ವಿದ್ಯಾಥರ್ಿಗಳಿಗೆ ಪ್ರಮಾಣಪತ್ರ ವಿತರಿಸಿಲಾಯಿತು.