ೆಬ್ಯಾಡಗಿ 14: ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಲ್ಲಿ, ಸಹಕಾರಿ ಸಂಘಗಳು ಯಶಸ್ಸು ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ ಹೇಳಿದರು.
ಅವರು ಬ್ಯಾಡಗಿ ಪಟ್ಟಣದ ಬನಶಂಕರಿ ದೇವಸ್ಥಾನ ಹತ್ತಿರ ಗಡಾದವರ ಬಿಲ್ಡಿಂಗ್ನಲ್ಲಿ ನೂತನವಾಗಿ ಪ್ರಾರಂಭಗೊಂಡ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಸಹಕಾರಿ ಸಂಘಗಳಿಗೆ ಗ್ರಾಹಕರು ದೇವರಿದ್ದಂತೆ ಅವರ ಪ್ರಾಮಾಣಿಕ ಸೇವೆಯೇ ಸಹಕಾರ ಸಂಘದ ಏಳ್ಗೆಗೆ ಅಡಿಪಾಯ ಎಂದರು.ಸಾನಿಧ್ಯ ವಹಿಸಿದ್ದ ಮುಪ್ಪಿನೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿ ಬ್ಯಾಂಕ್ ನಡೆಸುವುದೊಂದೇ ಉದ್ಯೋಗ ಆಗಬಾರದು ಬ್ಯಾಂಕಿನಿಂದ ಉದ್ಯೋಗಗಳು ಸೃಷ್ಟಿಯಾಗಬೇಕು ಅಂದಾಗ ಮಾತ್ರ ಅಂದಾಗ ಗ್ರಾಹಕರ ಜತೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಉಪಾಧ್ಯಕ್ಷ ಎಸ್ ಆರ್ ಪಾಟೀಲ.ಚಂದ್ರಶೇಖರ ಗಡಾದ.ಬಸವರಾಜ ಗಡಾದ.ಶಿವಯೋಗಿ ಗಡಾದ.ಎ.ಆರ್ ಭದ್ರಗೌಡರ.ವಕೀಲರಾದ ವಿಜಯಲಕ್ಷ್ಮಿ ಯರಗಲ್. ಬ್ಯಾಂಕಿನ ವ್ಯವಸ್ಥಾಪಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.