ಆಮ್ ಆದ್ಮಿ ಪಕ್ಷದಿಂದ ಗ್ರಾಮ ಸಂಪರ್ಕ ಅಭಿಯಾನ

ಕನಕಗಿರಿ 30: ವಿಧಾನಸಭಾ ಕ್ಷೇತ್ರದ ಹಳ್ಳಿಗಳಾದ, ಹನುಮನಾಳ, ಕಲಿಕೇರಿ, ಸೂಳೆಕಲ್, ಬೇಣಕನಾಳ, ಹಿರಿಯೂರು ಮುಂತಾದ ಹಳ್ಳಿಗಳಿಗೆ ಎಎಪಿ ತಾಲೂಕು ಅಧ್ಯಕ್ಷ  ರಮೇಶ್ ಕೋಟಿ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶ  ಎಂ.ಕೆ ಸಾಹೇಬ್ ಭೇಟಿ ನೀಡಿದರು. 

ಈ ಗ್ರಾಮ ಸಂಪರ್ಕ ಅಭಿಯಾನದಲ್ಲಿ ಜನರ ಸಮಸ್ಯೆಗಳನ್ನು ಅಲಿಸಿಸುತ್ತಾ, ವರ್ತಮಾನದ ಎಂ.ಎಲ್.ಎ ಬಸವರಾಜ್ ದಡೆಸಗೂರು ಅವರ ಲಂಚದಾಟದ ಭ್ರಷ್ಟಾಚಾರ ಹೇಗೆ ಯುವಕರ ಭವಿಷ್ಯವನ್ನು ಮೂಲೆಗುಂಪು ಮಾಡುತ್ತಿದೆ ಎಂಬುದನ್ನು ಎಂ.ಕೆ ಸಾಹೇಬ್ರು ಜನರಿಗೆ ಬಿಡಿ ಬಿಡಿಯಾಗಿ ತಿಳಿಸಿದರು. ರಮೇಶ್ ಕೋಟಿ ಮಾತನಾಡಿ ದೆಹಲಿ ಮಾದರಿಯ ಸರಕಾರವನ್ನು ಕನಕಗಿರಿಯಲ್ಲಿ ತಂದು ನಮ್ಮ ಶಾಲೆಗಳನ್ನು,ಆಸ್ಪತ್ರೆಗಳನ್ನು ಗುಣಮಟ್ಟದ ರೀತಿಯಲ್ಲಿ ಕಟ್ಟೋಣ ಇದರಿಂದ ದೇಶದ ಭವಿಷ್ಯ ಚಿಗುರುತ್ತದೆ ಎಂದು ಹೇಳಿದರು. ಎಲ್ಲಿ ಹೋದರೂ ಅಲ್ಲಿ ಜನರು ಎರಡು ಪಕ್ಷಗಳಿಂದ ಬೇಸತ್ತಿದ್ದಾರೆ. ಅನುಕಂಪದ ಆಧಾರದ ಮೇಲೆ ಗೆದಿದ್ದ ಬಿಜೆಪಿಯ ಶೇ.40 ಕಮಿಷನ್ನಿಂದ ಜನ ಸಿಟ್ಟಿಗೆದ್ದಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಎಎಪಿಗೆ ಜನರು ಬೆಂಬಲಿಸಲು ನಿರ್ಧಾರ  ಮಾಡುತ್ತಿದ್ದಾರೆಂದು ಎಂ.ಕೆ. ಸಾಹೇಬ್ ತಿಳಿಸಿದರು