ಜುಲೈ 17 ರಿಂದ ಗ್ರಾಮದೇವತೆ ಜಾತ್ರೆ ಆರಂಭ
Village deity fair begins on July 17
ತಾಳಿಕೋಟಿ 14 : ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ದ್ಯಾಮವ್ವ ತಾಯಿಯ ಜಾತ್ರಾ ಮಹೋತ್ಸವ ಜುಲೈ 17 ರಿಂದ ಆರಂಭವಾಗಲಿದೆ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಿ ಎಂದು ಬಾಪುಗೌಡ ಸಂಗನಗೌಡ ಪಾಟೀಲ ಹೇಳಿದರು. ಮಂಗಳವಾರ ಪಟ್ಟಣದ ಶಿವ ಭವಾನಿ ಮಂದಿರದ ಆವರಣದಲ್ಲಿ ಜಾತ್ರಾ ಮಹೋತ್ಸವ ಕಮಿಟಿ ವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ದ್ಯಾಮವ್ವ ತಾಯಿಯ ಜಾತ್ರಾ ಮಹೋತ್ಸವವನ್ನು ಅತ್ಯಂತ ವೈಭವ ಹಾಗೂ ವಿಶೇಷ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಐದು ದಿನದ ಕಾರ್ಯಕ್ರಮಗಳಲ್ಲಿ ಪ್ರತಿದಿನವೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಜುಲೈ 17ರಂದು ಮುಂಜಾನೆ ಎಂಟು ಗಂಟೆಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನದಿಂದ ಗ್ರಾಮ ದೇವತೆಯ ಭವ್ಯ ರಥೋತ್ಸವ ಸಕಲ ವಾದ್ಯ ಮೇಳಗಳೊಂದಿಗೆ ಜರುಗಲಿದ್ದು ತಾಳಿಕೋಟಿ ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಚಾಲನೆ ನೀಡಲಿದ್ದಾರೆ. ಜುಲೈ 18 19 20 ರಂದು ಮೂರು ದಿನಗಳವರೆಗೆ ಮುಂಜಾನೆಯಿಂದ ಸಾಯಂಕಾಲದವರೆಗೆ ವಿವಿಧ ಕಾರ್ಯಕ್ರಮಗಳು ಹಾಗೂ ಸಂಜೆ 6 ಗಂಟೆಯಿಂದ ರಾಜವಾಡೆ ಆವರಣದದಲ್ಲಿ ಹಾಕಿದ ವೇದಿಕೆಯಲ್ಲಿ ಧರ್ಮಸಭೆ ಕಾರ್ಯಕ್ರಮಗಳು ನಡೆಯಲಿದ್ದು ಜುಲೈ 19 ರಂದು ನಡೆಯಲಿರುವ ಧರ್ಮಸಭೆಯಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಪರಮಪೂಜ್ಯರು ಪ್ರವಚನ ನೀಡಲಿದ್ದಾರೆ.
ಪ್ರತಿದಿನದ ಕಾರ್ಯಕ್ರಮದಲ್ಲಿ ನಾಡಿನ ಹರಚರ ಗುರುಮೂರ್ತಿಗಳು, ಜನಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದು ಕಾರ್ಯಕ್ರಮದ ದಾನಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು.ಜುಲೈ 21ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗೀಗಿ ಪದಗಳು ಜರುಗುವವು. ಮಧ್ಯಾಹ್ನ 3:00 ಗಂಟೆಗೆ ರಾಜವಾಡೆ ಗ್ರಾಮ ದೇವಿಯ ಪಾದಗಟ್ಟೆಯಿಂದ ಗ್ರಾಮ ದೇವಿಯ ಭವ್ಯಮೆರವಣಿಯು ವಿವಿಧ ವಾದ್ಯ ವೈಭವಗಳೊಂದಿಗೆ ಗ್ರಾಮ ದೇವತೆಯ ಗುಡಿ ಪ್ರವೇಶಿಸುವಳು.
ಅಂದೆ ರಾತ್ರಿ 10.30 ಗಂಟೆಗೆ ಜೈ ಮಾತೃಭೂಮಿ ಕಲಾತಂಡ ಲಕ್ಷ್ಮೇಶ್ವರ ಇವರಿಂದ ಮಗ ಹೋದರು ಮಾಂಗಲ್ಯ ಬೇಕು ಎಂಬ ಸಾಮಾಜಿಕ ನಾಟಕ ಜರುಗುವುದು. ಇದೇ ಸಂದರ್ಭದಲ್ಲಿ ಜಾತ್ರಾ ಸಮಿತಿ ಹೊರತಂದ ಐದು ದಿನದ ಕಾರ್ಯಕ್ರಮಗಳ ವಿಶೇಷ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಡಿ.ವಿ. ಪಾಟೀಲ, ಶಿಶಿಧರ ಡಿಸಲೆ, ಸಿದ್ದನಗೌಡ ಪಾಟೀಲ, ಮಲಕಾಜಪ್ಪಗೌಡ ಪಾಟೀಲ, ಬಸವರಾಜ ಕಶೆಟ್ಟಿ, ಬಸನಗೌಡ ಪಾಟೀಲ, ಅಣ್ಣಪ್ಪ ಜಗತಾಪ, ಗುರಸಂಗಪ್ಪ ಕಶೆಟ್ಟಿ, ಶರಣಗೌಡ ಬಿರಾದಾರ, ಶಂಕರಗೌಡ ಪಾಟೀಲ, ಬಸವರಾಜ ಸಜ್ಜನ, ಪ್ರಕಾಶ. ಸಾಸಾಬಾಳ, ಮುತ್ತು ಕಶೆಟ್ಟಿ, ಭೀಮನಗೌಡ ಪಾಟೀಲ, ಜಗತಾಪ ರಾಮು,ರಮೇಶ ಮೂಕಿಹಾಳ, ಬಸನಗೌಡ ಚೌಧರಿ, ಕೆ ಬಿ ಪಾಟೀಲ, ಸಿದ್ದನಗೌಡ ಬೆಳಗುಂಪಿ, ಮೊಹಮ್ಮದ್ ಪಟೇಲ, ರಾಜು ಪಾಟೀಲ ಮತ್ತಿತರರು ಇದ್ದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 