ಲೋಕದರ್ಶನ ವರದಿ
ವಿಜಯಪುರ 25: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್.ಸಿದ್ಧರಾಮಪ್ಪ ಅವರು ಇಂದು ನಗರದ ಕನಕದಾಸ ಬಡಾವಣೆಯಲ್ಲಿರುವ ಪತ್ರಿಕಾ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ಭವನಕ್ಕೆ ಮೀಸಲಿಡಲಾದ ಜಾಗ ಸೇರಿದಂತೆ ಕಟ್ಟಡ ನಿಮರ್ಾಣ ಮತ್ತು ಇತರೆ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಅವರು, ಪತ್ರಿಕಾ ಭವನದಲ್ಲಿ ಅವಶ್ಯಕತೆ ಇರುವ ಸಾಧನ ಸಲಕರಣೆಗಳಿಗೆ ಸಂಬಂಧಪಟ್ಟಂತೆ ಖಚರ್ು ವೆಚ್ಚದ ವರದಿ ಸಲ್ಲಿಸುವಂತೆ ವಾತರ್ಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಾನ್ಯ ಆಯುಕ್ತರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭಧಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಸುಲೇಮಾನ ನದಾಫ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶರಣು ಮಸಳಿ, ಉಪಾಧ್ಯಕ್ಷ ಫೀರೋಜ ರೋಜಿಂದಾರ, ಮಾಜಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಕೊಂಡಗೂಳಿ, ಶಕೀಲ ಬಾಗಮಾರೆ, ಆಬಿದ ಹುಸೇನ್, ಹಿರಿಯ ವರದಿಗಾರರಾದ ಜಿ.ಎಸ್.ಕಮತರ, ಬಿಎಲ್ಡಿಇ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಮಹಾಂತೇಶ ಬಿರಾದಾರ, ಜಲಅಭಿಯಾನ ಪ್ರತಿನಿಧಿ ಪೋದ್ದಾರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗೆ ಭೇಟಿ ನೀಡಿದ ಮಾನ್ಯ ಆಯುಕ್ತರು ಸಿಬ್ಬಂದಿಗಳ ಕುಂದು-ಕೊರತೆ ವಿಚಾರಿಸುವ ಜೊತೆಗೆ ಕಚೇರಿ ಸಿಬ್ಬಂದಿಗಳ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.