ರೈತ ಸಂಘಕ್ಕೆ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ವಿಜಯ್ ಭರತ್
Vijay Bharath appointed as Yadgir district president of the Farmers' Association
ಬಳ್ಳಾರಿ 16: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲೆಗೆ ಅಧ್ಯಕ್ಷರಾಗಿ ವಿಜಯ್ ಭರತ್ ಅವರನ್ನು ನೇಮಕ ಮಾಡಲಾಗಿದೆ.ವಿಜಯ್ ಭರತ್ ಕಳೆದ ಹಲವಾರು ವರ್ಷಗಳಿಂದ ರೈತ ಪರವಾಗಿ ಧ್ವನಿ ಎತ್ತುತ್ತಿದ್ದು ರೈತರ ಸಮಸ್ಯೆಗಳಿಗೆ ಮಿಡಿಯುವ ಹೃದಯವಂತರಾಗಿದ್ದಾರೆ.
ಕಳಪೆ ಬೀಜ, ಗೊಬ್ಬರದಿಂದ ರೈತರು ಅನುಭವಿಸುತ್ತಿರುವ ನಷ್ಟ, ಅತಿ ವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಪದೇ ಪದೇ ಸಂಕಷ್ಟಕ್ಕೆ ಒಳಗಾಗುವ ರೈತರ ನೆರವಿಗೆ ಸರ್ಕಾರದ ಗಮನ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ತೊಗರಿ ಬೆಳೆ, ಕಬ್ಬು, ಸೇಂಗಾ ಇತ್ಯಾದಿ ಬೆಳೆಗಳ ಬೆಲೆಯನ್ನು ಸರ್ಕಾರ ಸೂಕ್ತ ರೀತಿಯಲ್ಲಿ ನಿಗದಿಗೊಳಿಸಬೇಕು. ರೈತರು ಬೆಳೆದ ಆಹಾರ ಮತ್ತು ವಾಣಿಜ್ಯ ಫಸಲಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವುದೂ ಸೇರಿದಂತೆ ಹಲವಾರು ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲು ಉದ್ದೇಶಸಿಸಿದ್ದಾರೆ. ಇವರ ರೈತ ಪರ ಕಾಳಜಿಯನ್ನು ಗಮನಿಸಿ ವಿಜಯ್ ಭರತ್ ಅವರಿಗೆ ಯಾದಗಿರಿ ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ ಎಂದು ಸೇನೆಯ ಅಧ್ವರ್ಯುಗಳು ತಿಳಿಸಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ವಿಶ್ವ ರೈತ ಚೇತನ ರೈತ ಸೇನಾನಿ, ಹಸಿರು ಶಾಲಿನ ಹರಿಕಾರ ಪ್ರೊ. ಎಂ ಡಿ ನಂಜುಂಡಸ್ವಾಮಿಯವರ 90 ನೇ ವರ್ಷದ ಜನುಮ ದಿನ ಅಂಗವಾಗಿ ವರುಣ ಮತ ಕ್ಷೇತ್ರದ ತಾಂಡವಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಭರತ್ ಅವರಿಗೆ ಈ ಜವಾಬ್ದಾರಿ ನೀಡಲಾಯಿತು.
ಈ ಸಂದರ್ಭದಲ್ಲಿ ರೈತ ಧುರೀಣರಾದ ಚೂನಪ್ಪ ಪೂಜೇರಿ ರಾಜ್ಯಾಧ್ಯಕ್ಷರು, ಮಹೇಶಗೌಡ ಎಂ ಸುಬೇದಾರ ಸಗರ ರಾಜ್ಯ ಕಾರ್ಯಾಧ್ಯಕ್ಷರು, ಶಿವಾನಂದ ಮುಗಳಿಹಾಳ ರಾಜ್ಯ ಉಪಾಧ್ಯಕ್ಷರು, ವಿದ್ಯಾಸಾಗರ ರಾಮೇಗೌಡ ಇಮ್ಮಾವು ರಾಜ್ಯ ಉಪಾಧ್ಯಕ್ಷರು, ಶರಣಪ್ಪ ಮರಳಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಇನ್ನಿತರ ರಾಜ್ಯ, ವಿವಿಧ ಜಿಲ್ಲೆ ಹಾಗೂ ವಿವಿಧ ತಾಲೂಕಿನ ಪದಾಧಿಕಾರಿಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 