ವೀರಶೈವ ಒಂದು ಉಪ ಜಾತಿಯೇ ಹೊರತು, ಧರ್ಮವಲ್ಲ : ವಿಜಯಾನಂದ ಕಾಶಪ್ಪನವರ


ಹುನಗುಂದ 10: ವೀರಶೈವ ಎನ್ನುವುದು ಕೇವಲ ಒಂದು ಉಪ ಜಾತಿಯೇ ಹೊರೆತು ಅದೊಂದು ಧರ್ಮವಲ್ಲ.ಲಿಂಗಾಯತ ಧರ್ಮವೇ ನಮ್ಮ ಮೂಲ ಧರ್ಮವಾಗಿದೆ.ಪಂಚಮಸಾಲಿ ಸಮಾಜ ಸಂಘಟನೆಯನ್ನು ಗ್ರಾಮೀಣ ಮಟ್ಟದಿಂದ ಗಟ್ಟಿಗೊಳಿಸಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.                                                                                  ತಾಲೂಕಿನ ಸುಕ್ಷೇತ್ರ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ವತಿಯಿಂದ 2ಎ ಮೀಸಲಾತಿಯ ಸಲುವಾಗಿ ಪ್ರತಿಜ್ಞಾ ಪಂಚಾಯತ ಅಭಿಯಾನದ ಬಾಗಲಕೋಟ ಮತ್ತು ವಿಜಯಪುರ ಅವಳಿ ಜಿಲ್ಲೆಗಳ ಪದಾಧಿಕಾರಿಗಳ ಸಭೆ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. 

 ಅಖಂಡ ಕರ್ನಾಟಕದಲ್ಲಿ 1.50 ಕೋಟಿ ಲಿಂಗಾಯತ ಪಂಚಮಸಾಲಿ ಜನರಿದ್ದಾರೆ. ಈಗಾಗಲೇ ನಮ್ಮ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ನೀಡುವಂತೆ ಪಾದಯಾತ್ರೆ ಮತ್ತು ಧರಣಿ ಸತ್ಯಗ್ರಹ ಮಾಡಿದಾಗ ರಾಜ್ಯ ಸರ್ಕಾರ ಮೀಸಲಾತಿಯನ್ನು ನೀಡಲು 6 ತಿಂಗಳ ಕಾಲಾವಕಾಶ ಕೇಳಿತ್ತು.ಆ ಅವಧಿ ಮುಗಿಯುವ ಮುಂಚೆ ಸರ್ಕಾರ ಕೊಟ್ಟ ಭರವಸೆಯನ್ನು ನೆನಪಿಸುವ ಸಲುವಾಗಿ ದಕ್ಷಿಣ ಕರ್ನಾಟಕದ ಮಲೈ ಮಹಾದೇಶ್ವರ ಬೆಟ್ಟದಿಂದ ಪ್ರತಿಜ್ಞಾ ಪಂಚಾಯತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ದಕ್ಷಿಣ ಕರ್ನಾಟಕದ ಮೈಸೂರ, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ ಅಭಿಯಾನ ಕೈಕೊಂಡು ಆ ಭಾಗದ 45 ಲಕ್ಷ ಗೌಡ ಲಿಂಗಾಯತ ಜನರು ನಾವು ಪಂಚಮಸಾಲಿಗಳು ನಮ್ಮಗೂ 2ಎ ಮೀಸಲಾತಿಬೇಕೆಂದು ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಮೀಸಲಾತಿ ಹೋರಾಟಕ್ಕೆ ವ್ಯಾಪಕ ಬೆಂಬಲವನ್ನು ವ್ಯಕ್ತಪಡಿಸಿದರು.ಇನ್ನು ಮಧ್ಯ ಕರ್ನಾಟಕದ ಸೊಬರ, ಶಿವಮೊಗ್ಗ ಜಿಲ್ಲೆಗಳ 5 ರಿಂದ 6 ಲಕ್ಷ ಜನರು ಬೆಂಬಲ ಸೂಚಿಸುವ ಮೂಲಕ ಪ್ರತಿಜ್ಞಾ ಪಂಚಾಯತ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಇದನ್ನು ಕಂಡ ಸಿಎಂ ಬಸವರಾಜ ಬೊಮ್ಮಯ ಅವರು ಶ್ರೀಗಳಿಗೆ ಮತ್ತೇ 3 ತಿಂಗಳ ಕಾಲಾವಕಾಶವನ್ನು ಕೇಳಿ ಪಡೆದಿದ್ದಾರೆ ಆ ಅವಧಿಯ ಮುಂಚೆನೇ ನಮ್ಮ ಸಮಾಜಕ್ಕೆ ಮೀಸಲಾತಿ ನಿಡುತ್ತಾರೆ ಎನ್ನುವ ಭರವಸೆ ನಮ್ಮಗಿದೆ ಎಂದರು.                                                            ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲ ಬುನಾದಿಯಾದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಮಸಾಲಿ ಸಮಾಜವನ್ನು ಸಂಘಟನೆ ಮಾಡುವುದು ಅವಶ್ಯವಾಗಿದೆ.ಅದರ ಜೊತೆಗೆ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಹಂತದಲ್ಲೂ ಸಂಘಟನೆ ಗಬೇಕಾಗಿದೆ.ಆ ಹಂತದಲ್ಲಿ ಸಮಾಜ ಸಂಘಟನೆಯ ಜಾಗೃತಿ ಮೂಡಿಸುವುದು ಕೂಡಾ ಅಷ್ಟೆ ಅವಶ್ಯವಿದೆ.ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಅನೇಕರು ಅನೇಕ ತರ ಮಾತನಾಡಿ ಗೊಂದಲವನ್ನು ಸೃಷ್ಠಿಸುತ್ತಿದ್ದು ಅದರ ಬಗ್ಗೆ ಸಮಾಜದವರು ಯಾರು ತೆಲೆ ಕೆಡಿಸಿಕೊಳ್ಳಬೇಡಿ. ಸಮಾಜ ಸಧ್ಯ ಗಟ್ಟಿಯಾಗಿದೆ ಅದನ್ನು ಯಾರಿಂದಲೂ ಹೊಡೆಯಲು ಸಾಧ್ಯವಿಲ್ಲ. ಹಣವಂತ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಸಮಾಜವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಅಂತವರನ್ನು ಮನಪರಿವರ್ತನೆ ಮಾಡುವ ಕಾರ್ಯವನ್ನು ಸಹ ಮಾಡಲಾಗುವುದು ಎಂದರು.             

                ಕನ್ನಡ ಸಂಸ್ಕೃತಿ ಇಲಾಖೆ ನಿವೃತ್ತ ಅಧಿಕಾರಿ ಶ್ರೀಶೈಲ ಕರಿಶಂಕರಿ, ಶಿವಾನಂದ ಕಡಪಟ್ಟಿ, ಎಸ್‌.ಎಂ.ಬಿರಾದರ, ಎಸ.ಬಿ.ನಾರಾಯಣಪೂರ, ಗಂಗಣ್ಣ ಬಾಗೇವಾಡಿ, ಸಿದ್ದುಗೌಡ ಗೌಡರ, ಶಂಕ್ರ​‍್ಪ ನೇಗಲಿ, ಮಹಾಂತೇಶ ಪಾಟೀಲ, ಎಂ.ಎಂ.ಕುಂದರಗಿ, ಮಹಾಂತೇಶ ಮದರಿ, ಶೇಖರಗೌಡ ಗೌಡರ ಸೇರಿದಂತೆ ಅನೇಕರು ಇದ್ದರು.                                                                           ಬಾಕ್ಸ್‌; ಸತ್ಕಾರ ಮತ್ತು ಪ್ರತಿಜ್ಞಾ ಪಂಚಾಯತ ಜಾಗೃತಿ; ಲಿಂಗಾಯತ ಪಂಚಮಸಾಲಿ ಸಮಾಜದಿಂದ ಆಯ್ಕೆಯಾದ ಗ್ರಾಮ ಪಂಚಾಯತಿ,ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆಗಳ  ಸದಸ್ಯರುಗಳಿಗೆ ನ-28 ರಂದು ಕೂಡಲಸಂಗಮದ ಬಸವ ಮಂಟಪದಲ್ಲಿ ಸತ್ಕಾರ ಸಮಾರಂಭ ಮತ್ತು 2ಎ ಮೀಸಲಾತಿಯ ಪ್ರತಿಜ್ಞಾ ಪಂಚಾಯತಿ ಅಭಿಯಾನದ ಜಾಗೃತಿ ಸಮಾರಂಭವನ್ನು ಹಮ್ಮಿಕೊಳ್ಳುಲಾಗುವುದು.                               

10;ಎಚ್‌ಎನ್‌ಡಿ;1; ಹುನಗುಂದದ ತಾಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ 2ಎ ಮೀಸಲಾತಿಯ ಸಲುವಾಗಿ ಪ್ರತಿಜ್ಞಾ ಪಂಚಾಯತ ಅಭಿಯಾನ ನಡೆಸುವ ಹಿನ್ನೆಲೆ ಬಾಗಲಕೋಟ ಮತ್ತು ವಿಜಯಪುರ ಅವಳಿ ಜಿಲ್ಲೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಶಾಸಕ ವ್ಹಿ.ಎಸ್‌. ಕಾಶಪ್ಪನವರ ಮಾತನಾಡಿದರು.