ಶ್ರದ್ಧಾಭಕ್ತಿಯಿಂದ ವೀರಭದ್ರೇಶ್ವರ ಜಯಂತಿ ಆಚರಣೆ
Veerabhadreshwara Jayanti celebrated with devotion and reverence
ಲಕ್ಷ್ಮೇಶ್ವರ " 15: ನಾಡಿನಾದ್ಯಂತ ಇಂದು ವೀರಭದ್ರೇಶ್ವರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ರೋಣ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಯಂತಿ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ವೀರಭದ್ರೇಶ್ವರ ಜಯಂತಿ ಅಂಗವಾಗಿ ಮಾತನಾಡಿದ ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪುರಸ್ಕೃತರಾದ ವೀರಣ್ಣ ಪವಾಡ ಅವರು, ದಕ್ಷಬ್ರಹ್ಮನು ಶಿವನಿಗೆ ಮಾಡಿದ ಅವಮಾನ ಹಾಗೂ ಸತಿ ದೇವಿಯ ಆತ್ಮಾರೆ್ಣಯಿಂದ ಕೋಪಗೊಂಡ ಶಿವನು ತನ್ನ ಜಟೆಯನ್ನು ನೆಲಕ್ಕೆ ಬಡಿದಾಗ ವೀರಭದ್ರ ಹಾಗೂ ಭದ್ರಕಾಳಿ ಜನಿಸಿದರು ಎಂಬ ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದರು.
ಧರ್ಮದ ಪುನರ್ಸ್ಥಾಪನೆ ಧ್ಯೇಯ
ಅಹಂಕಾರದಿಂದ ದಕ್ಷನು ನಡೆಸಿದ ಯಜ್ಞವನ್ನು ಧ್ವಂಸ ಮಾಡಿ ಧರ್ಮವನ್ನು ಪುನರ್ಸ್ಥಾಪಿಸುವುದು ವೀರಭದ್ರ ಸ್ವಾಮಿಯ ಪ್ರಮುಖ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದರು. ಕರ್ನಾಟಕ, ಆಂಧ್ರ್ರದೇಶ, ತಮಿಳುನಾಡಿನಲ್ಲಿ ಆರಾಧನೆ
ವೀರಭದ್ರೇಶ್ವರ ಸ್ವಾಮಿಯನ್ನು ಕರ್ನಾಟಕ, ಆಂಧ್ರ್ರದೇಶ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆರಾಧಿಸಲಾಗುತ್ತದೆ. ಅನೇಕ ಕುಟುಂಬಗಳಲ್ಲಿ ವೀರಭದ್ರೇಶ್ವರರು ಕುಲದೇವರಾಗಿದ್ದಾರೆ. ಜಯಂತಿ ದಿನದಂದು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹಾಗೂ ಕೆಲವೆಡೆ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ನಾಡಿನ ಮೇಲೆ ಆವರಿಸಿರುವ ಬರಗಾಲ ದೂರವಾಗಿ, ಎಲ್ಲರ ಬದುಕಿನಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ವೀರಭದ್ರೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ವೀರೇಶ ಮಠ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದು, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 