ವಂದೇ ಭಾರತ್ ‘ಸ್ಲೀಪರ್’ ರೈಲು ಸಂಚಾರಕ್ಕೆ ಜ. 17ರ ಮುಹೂರ್ತ
Vande Bharat 'Sleeper' train for traffic. 17th Muhurat
ನವದೆಹಲಿ: ದೇಶದ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ಭಾರತದ ಮೊದಲ ‘ವಂದೇ ಭಾರತ್ ಸ್ಲೀಪರ್’ ರೈಲು ಈ ತಿಂಗಳ ಅಂತ್ಯದಲ್ಲಿ ಹಳಿ ಏರಲಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಅಸ್ಸಾಂನ ಗುವಾಹಟಿ ನಡುವೆ ಈ ಐಷಾರಾಮಿ ರೈಲು ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜ. 17 ರಂದು ಈ ರೈಲಿಗೆ ಚಾಲನೆ ನೀಡುವ ಸಾಧ್ಯತೆಯಿದೆ.
ಈ ರೈಲಿನ ವಿಶೇಷವೆಂದರೆ ಇದರಲ್ಲಿ ಯಾವುದೇ ವಿಐಪಿ (VIP)
ಅಥವಾ ತುರ್ತು ಕೋಟಾ ಇರುವುದಿಲ್ಲ. ಸಾಮಾನ್ಯ ಸಾರ್ವಜನಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಉನ್ನತ ರೈಲ್ವೆ ಅಧಿಕಾರಿಗಳಿಗೂ ಸಹ ಪಾಸ್ಗಳ ಮೂಲಕ ಪ್ರಯಾಣಿಸಲು ಅವಕಾಶವಿರುವುದಿಲ್ಲ.
ಅಲ್ಲದೆ, ರೈಲ್ವೆಯಲ್ಲಿ ಸಾಮಾನ್ಯವಾದ ಆರ್.ಎ.ಸಿ (RAC - Reservation Against Cancellation) ವ್ಯವಸ್ಥೆ ಈ ರೈಲಿನಲ್ಲಿ ಇರುವುದಿಲ್ಲ. ಕೇವಲ ಕನ್ಫರ್ಮ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಪ್ರವೇಶವಿರಲಿದ್ದು, ಇದರಿಂದ ವೇಯ್ಟಿಂಗ್ ಲಿಸ್ಟ್ ಕಿರಿಕಿರಿ ತಪ್ಪಲಿದೆ.
ಪ್ರಯಾಣಿಕರಿಗೆ ಆಯಾ ಭಾಗದ ಸಂಸ್ಕೃತಿಯನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ರೈಲಿನಲ್ಲಿ ಸ್ಥಳೀಯ ಭಕ್ಷ್ಯಗಳನ್ನು (Local Cuisine) ಒದಗಿಸಲಾಗುತ್ತದೆ. ಬೆಂಗಾಲಿ ಮತ್ತು ಅಸ್ಸಾಮಿ ಶೈಲಿಯ ಸ್ವಾದಿಷ್ಟ ಆಹಾರ ಪ್ರಯಾಣಿಕರ ಹಸಿವು ನೀಗಿಸಲಿದೆ. ಜೊತೆಗೆ ಸಿಬ್ಬಂದಿಗಳು ವಿಶೇಷ ಸಮವಸ್ತ್ರ ಧರಿಸಿ ಅಚ್ಚುಕಟ್ಟಾದ ಸೇವೆ ನೀಡಲಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ:
-ಬೋಗಿಗಳ ವಿವರ: ಒಟ್ಟು 16 ಎಸಿ ಬೋಗಿಗಳು. ಇದರಲ್ಲಿ 11 ‘3-AC’, 4 ‘2-AC’ ಮತ್ತು 1 ‘1-AC’ ಬೋಗಿಗಳಿವೆ. ಒಟ್ಟು 823 ಆಸನಗಳು ಲಭ್ಯ.
-ಸಾಮಾನ್ಯ ರೈಲುಗಳಿಗಿಂತ ಉತ್ತಮ ಗುಣಮಟ್ಟದ ಬ್ಲಾಂಕೆಟ್ ಮತ್ತು ಬೆಡ್ಶೀಟ್ಗಳನ್ನು ಒಳಗೊಂಡ ಸುಧಾರಿತ ಬೆಡ್ರೋಲ್ ಕಿಟ್ ನೀಡಲಾಗುತ್ತದೆ.
-ರೈಲುಗಳ ಡಿಕ್ಕಿ ತಪ್ಪಿಸುವ ‘ಕವಚ್’ (Kavach)
ತಂತ್ರಜ್ಞಾನ, ಸಿಸಿಟಿವಿ ಕ್ಯಾಮೆರಾ ಮತ್ತು ತುರ್ತು ಸಂದರ್ಭದಲ್ಲಿ ಚಾಲಕರೊಂದಿಗೆ ಮಾತನಾಡಲು ‘ಟಾಕ್-ಬ್ಯಾಕ್’ ವ್ಯವಸ್ಥೆ ಇದೆ.
-
ಅತ್ಯಾಧುನಿಕ ಬಯೋ-ವ್ಯಾಕ್ಯೂಮ್ ಶೌಚಾಲಯಗಳಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 