ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್?

ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್ 2023 ರಲ್ಲಿ ಭಾರತದ ನೆಲದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಳ್ಳುತ್ತಿದೆ, ರಾಹುಲ್ ದ್ರಾವಿಡ್ ನಿರ್ಗಮನಕ್ಕೂ ಮುನ್ನವೇ ಬಿಸಿಸಿಐ ಅನುಭವಿ ಆಟಗಾರರನ್ನು ಮುಖ್ಯ ಕೋಚ್ ಆಗಿ ನೇಮಿಸುವ ಮೂಲಕ ಭವಿಷ್ಯದ ತಯಾರಿ ಆರಂಭಿಸಿದೆ. 

ರವಿಶಾಸ್ತ್ರಿ ಕಾಲದಲ್ಲಿ ಬಿಸಿಸಿಐ ಯಾವ ರೀತಿ ಟೀಂ ಇಂಡಿಯಾಗೆ ಸಣ್ಣ ಕ್ರಿಕೆಟ್ ಸರಣಿಗಳಲ್ಲಿ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಪ್ರಯೋಗಿಸಿತೋ ಅದೇ ರೀತಿ ರಾಹುಲ್ ದ್ರಾವಿಡ್ ಇರುವಾಗಲೇ ವಿವಿಎಸ್ ಲಕ್ಷ್ಮಣ್ ಅವರಿಗೆ ಟೀಂ ಇಂಡಿಯಾ ಜವಾಬ್ದಾರಿ ನೀಡಲಾಗುತ್ತಿದೆ. ವಿವಿಎಸ್ ಲಕ್ಷ್ಮಣ್ ಅವರನ್ನು ಟೀಂ ಇಂಡಿಯಾ ಕೋಚ್ ಮಾಡುವ ಮೂಲಕ ಬಿಸಿಸಿಐ ಭವಿಷ್ಯದ ತಯಾರಿ ನಡೆಸುತ್ತಿದೆ. 

ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿ ಮುಗಿದ ತಕ್ಷಣ, ಭಾರತವು ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ಐಲರ್ೆಂಡ್ಗೆ ಪ್ರವಾಸ ಮಾಡಬೇಕಾಗಿದೆ. ಅಲ್ಲಿ ಮೂರು ಪಂದ್ಯಗಳ ಖಿ20 ಸರಣಿಯನ್ನು ಆಡಬೇಕಾಗಿದೆ. ಈ ಸರಣಿಗೆ ಬಿಸಿಸಿಐ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಿಸಿದೆ. ಡಬ್ಲಿನ್ನಲ್ಲಿ ಐಲರ್ೆಂಡ್ ವಿರುದ್ಧದ ಟಿ20 ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಭಾರತ ಆಡಬೇಕಿದೆ. ಕ್ರಿಕ್ಬಜ್ ವರದಿ ಪ್ರಕಾರ, ಐಲರ್ೆಂಡ್ ವಿರುದ್ಧದ ಟಿ20 ಸರಣಿಗೆ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಮುಖ್ಯ ಕೋಚ್ ಆಗಲಿದ್ದಾರೆ.