ಲೋಕದರ್ಶನ ವರದಿ
ಸಂಬರಗಿ: ಕಾಗವಾಡ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಮಾದಿಗ ಮೀಸಲಾತಿ ಹೋರಾಟ ಸಮೀತಿ ಘಟಕವನ್ನು ಸ್ಥಾಪನೆ ಮಾಡಿ ಸಮಾಜವನ್ನು ಬಲಪಡಿಸಲಾಗುವುದೆಂದು ಕಾಗವಾಡ ತಾಲೂಕಾ ಮಾದಿಗ ಮೀಸಲಾತಿ ಹೋರಾಟ ಸಮೀತಿ ಉಪಾಧ್ಯಕ್ಷ ಪರಶುರಾಮ ಅವಳೆ ಹೇಳಿದರು.
ಕವಲಗುಡ್ಡ ಗ್ರಾಮಕ್ಕೆ ಭೇಟಿ ನೀಡಿ ಸಮಾಜದ ಕುಂದುಕೊರತೆಗಳನ್ನು ಚಚರ್ೆ ಮಾಡಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಕಾಗವಾಡ ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮೀತಿಯನ್ನು ರಚಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಸಮಾಜದ ಕೆಲಸ ಮಾಡಿರುವ ಪಕ್ಷಕ್ಕೆ ನಾವು ಬೆನ್ನೆಲುಬಾಗಿರುತ್ತೇವೆ.
ಇತ್ತೀಚೆಗೆ ಕೃಷ್ಣಾ ನದಿಗೆ ಪ್ರವಾಹ ಬಂದ ನಂತರ ನಮ್ಮ ದಲಿತರರಿಗೆ ಬಾರಿ ಹಾನಿಯಾಗಿದ್ದು ಕೆಲವರಿಗೆ ಇನ್ನೂ ಸಕರ್ಾರದಿಂದ ಸಹಾಯಧನ ಸಿಕ್ಕಿಲ್ಲ. ರಾಜ್ಯ ಸಕರ್ಾರ ಪರಿಶೀಲನೆ ಮಾಡಿ ಅವರಿಗೆ ಸಹಾಯಧನ ನೀಡಿ ಅವರಿಗೆ ಶಾಶ್ವತ ಪರಿಹಾರ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಹೇಳಿದರು.