ಮಹಲಿಂಗಪುರ

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : ಪಿಎಸ್‌ಐ ಕಿರಣ ಸತ್ತಿಗೇರಿ

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : ಪಿಎಸ್‌ಐ ಕಿರಣ ಸತ್ತಿಗೇರಿ

ಮಹಾಲಿಂಗಪುರ 18:  ನಗರದಲ್ಲಿ ಕಾನೂನು ಅರಿವು ಕಾರ್ಯಕ್ರಮದ ಅಡಿಯಲ್ಲಿ ತಮ್ಮ ಇಲಾಖೆಯ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ದ್ವಿಚಕ್ರ ವಾಹನದಲ್ಲಿ ಹೆಲ್ಮಟ್ ಧರಿಸಿ ವಾಹನ ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. 

ಪಿಎಸ್‌ಐ ಕಿರಣ ಸತ್ತಿಗೇರಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಅವರ ಕುಟುಂಬದ ಆಧಾರ ಸ್ತಂಭವಾಗಿರುತ್ತಾರೆ ಪ್ರತಿ ಜೀವಕ್ಕೂ ಬೆಲೆಯಿದೆ ಆದ್ದರಿಂದ ವಾಹನ ಸವಾರರು ತಮ್ಮ ಮನೆಯಿಂದ ಹೊರಡುವಾಗಲೇ ಹೆಲ್ಕೆಟ್ ಧರಿಸಿಕೊಂಡು ಸಂಚಾರ ಮಾಡುವುದು ಕಡ್ಡಾಯವಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುವುದು ನಮ್ಮ ಕೆಲಸವಲ್ಲ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮಟ್ ಧರಿಸದೆ ಜೀವ ಕಳೆದುಕೊಂಡಿದ್ದಾರೆ.ಅವರ ಕುಟುಂಬಗಳು ಇಂದು ಪಡಬಾರದ ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಜೀವದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ,ಆದ್ದರಿಂದ ದಯವಿಟ್ಟು ಎಲ್ಲಾ ಸಾರ್ವಜನಿರಿಗೆ ಹೆಲ್ಮಟ್ ಧರಿಸಿ ವಾಹನ ಚಲಾಯಿಸಿ ಎಂದು ತಿಳಿಸಲು ಹೇಳಿದ್ದರು. 

ಕ್ರೈಂ ಪಿಎಸ್‌ಐ ಮಧು ಎಲ್ ಮಾತನಾಡಿ ದ್ವಿಚಕ್ರ ವಾಹನ ಸವಾರರು ಹೆಲ್ಮಟ್ ಧರಿಸದೆ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ನಾವು ಕಂಡಂತಹ ಅನೇಕ ಅಪಘಾತಗಳಲ್ಲಿ ಹೆಲ್ಮಟ್ ಧರಿಸಿದೇ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ ಆದ್ದರಿಂದ ಪ್ರತಿಯೊಬ್ಬರು ಹೆಲ್ಮಟ್ ಧರಿಸಿ ವಾಹನ ಚಲಾಯಿಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದರು. 

ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಬೈಕ್ ವೀಲಿಂಗ್ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಳ್ಳುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ದಯಮಾಡಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ತಮ್ಮ ಮನೆಯಿಂದ ಹೊರಡುವಾಗ ಹೆಲ್ಮಟ್ ಕಡ್ಡಾಯವಾಗಿ ಧರಿಸಿಕೊಂಡು ದ್ವಿಚಕ್ರ ವಾಹನ ಚಾಲನೆ ಮಾಡಬೇಕು ಯಾವುದೇ ತುರ್ತು ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಕರೆ ಮಾಡಬೇಕಾದಲ್ಲಿ 112 ಗೆ ಕರೆ ಮಾಡಿ ಮಾಹಿತಿ ನೀಡಿ ದಿನದ 24 ಗಂಟೆಯಲ್ಲಿ ಯಾವುದೇ ಸಮಯದಲ್ಲಾದರೂ ಅಪಘಾತವಾದ ಸ್ಥಳದಲ್ಲಿ ಯಾರಾದರೂ ಸಾರ್ವಜನಿಕರಿದ್ದರೆ ಮೊದಲು ಅಪಘಾತವಾದ ವ್ಯಕ್ತಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕೆಲಸ ಮಾಡಿ. ನಿಮ್ಮ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು. 

ಭಯಪಡದೆ ಸಹಾಯ ಮಾಡಿ ಹೆಲ್ಕೆಟ್ ಕಡ್ಡಾಯ ಜಾಥಾ ಕಾರ್ಯಕ್ರಮದಲ್ಲಿ ಮಹಾಲಿಂಗಪುರ ನಗರದ ಎಲ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ