ವೃತ್ತಿಯಿಂದ ನಿವೃತ್ತಿರಾದ ಆದರ್ಶ ಶಿಕ್ಷಕ ಲಕ್ಷ್ಮಣ್ಣ ಮಲ್ಲಸಮುದ್ರ ಅವರಿಗೆ ಅಭಿಮಾನೋತ್ಸವ
Tribute to the ideal teacher Lakshmana Mallasamudra who retired from the profession
ಲಕ್ಷ್ಮೇಶ್ವರ 21: ವೃತ್ತಿಯಲ್ಲಿಯೇ ಪವಿತ್ರ ವೃತ್ತಿಯಾದ ಶಿಕ್ಷಕರ ವೃತ್ತಿ ಅಂತ ಪವಿತ್ರವಾದ ಸರ್ಕಾರಿ ಶಿಕ್ಷಕರಾಗಿ ಮೂರು ದಶಕಗಳ ಕಾಲ ಸಮರ್ಥವಾಗಿ ಸೇವೆ ಸಲ್ಲಿಸಿ ಆದರ್ಶ ಶಿಕ್ಷಕರಾಗಿ ವೃತ್ತಿಯಿಂದ ನಿವೃತ್ತರಾದ ಲಕ್ಷ್ಮಣ್ಣರಾಮಣ್ಣ ಮಲಸಮುದ್ರ ಅವರಿಗೆ ಅಭಿನಂದನೆ ಅಭಿಮಾನೋತ್ಸವ ಕಾರ್ಯಕ್ರಮವು ಪಟ್ಟಣದ ಸ್ಟೇಟ್ ಬ್ಯಾಂಕ್ ಮೇಲ್ಗಡೆ ಇರುವ ಎಪಿಎಂಸಿ ವರ್ತಕರ ಸಭಾಭವನದಲ್ಲಿ ನಡೆಯಿತು ಶಿಕ್ಷಕ ವೃತ್ತಿಯಿಂದ ನಿವೃತ್ತಿರಾದ ಲಕ್ಷ್ಮಣ್ಣ ಮಲ್ಲಸಮುದ್ರ ದಂಪತಿಗಳಿಗೆ ಅವರ ಆತ್ಮೀಯ ಎಲ್ಲಾ ಶಿಕ್ಷಕರು ಅಭಿಮಾನಿಗಳು ಹಿತೈಷಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸುವದರೊಂದಿಗೆ ಅಭಿನಂದಿಸಿದರು.
ಆತ್ಮೀಯ ಎಲ್ಲ ಶಿಕ್ಷಕರ ಅಭಿಮಾನಿಗಳ ಅಭಿಮಾನದ ಸನ್ಮಾನವನ್ನು ಸ್ವೀಕರಿಸಿದ ವೃತ್ತಿಯಿಂದ ನಿವೃತ್ತಿರಾದ ಆದರ್ಶ ಶಿಕ್ಷಕ ಲಕ್ಷ್ಮಣ್ಣ ಮಲ್ಲಸಮುದ್ರ ಅವರು ಮಾತನಾಡಿ ತಮ್ಮ ಶಿಕ್ಷಕ ಸೇವಾ ಅವಧಿಯಲ್ಲಿ ತಾವು ಕಲಿಸಿದ ಶಿಕ್ಷಣ ನಡೆದು ಬಂದ ಹಾದಿ ತಾವು ಅನುಭವಿಸಿದ ಕಷ್ಟ ಸುಖ ನೆನಪುಗಳು ಮತ್ತು ತಾವು ಪಡೆದ ರಾಜ್ಯ ಉತ್ತಮ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಎಲ್ಲದರ ಬಗ್ಗೆ ವಿಸ್ತಾರವಾಗಿ ಹಂಚಿಕೊಂಡರು ಇದೇ ಸಮಯದಲ್ಲಿ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ ಆದರ್ಶ ಶಿಕ್ಷಕ ಲಕ್ಷ್ಮಣ್ಣ ಮಲಸಮುದ್ರ ಅವರು ತಮ್ಮ ಜೊತೆಗೆ ಶಿಕ್ಷಕ ಸೇವೆಯನ್ನು ಸಲ್ಲಿಸಿದ ಶಿಕ್ಷಕರನ್ನು ತಮಗೆ ಶಿಕ್ಷಣ ಕಲಿಸಿದ ಗುರುಗಳನ್ನು ಆತ್ಮೀಯ ಹಿರಿಯರನ್ನು ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕ ವೃಂದದವರು ಅಭಿಮಾನಿಗಳು ಪಾಲ್ಗೊಂಡಿದ್ದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 