ರಾಜ್‌ಘಾಟ್ ಸುತ್ತಮುತ್ತ ಇಂದು ಸಂಚಾರ ನಿರ್ಬಂಧ; ಪ್ರಮುಖ ರಸ್ತೆಗಳನ್ನು ತಪ್ಪಿಸಲು ಸಂಚಾರ ಪೊಲೀಸರ ಸೂಚನೆ
Traffic Restrictions Near Rajghat Today; Delhi Police Advises Commuters to Avoid Key Stretches
ನವದೆಹಲಿ, ಸೆಪ್ಟೆಂಬರ್ 3: ರಾಜ್‌ಘಾಟ್‌ನ ಮಹಾತ್ಮ ಗಾಂಧಿ ಸ್ಮೃತಿ ಸ್ಥಳದಲ್ಲಿ ಗುರುವಾರ ನಡೆಯಲಿರುವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿ ಸಂಚಾರ ಪೊಲೀಸರು ಸಂಚಾರ ನಿರ್ಬಂಧ ಹಾಗೂ ಮಾರ್ಗ ಬದಲಾವಣೆ ಕುರಿತು ಸಲಹೆ (ಅಡ್ವೈಸರಿ) ಹೊರಡಿಸಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಐಟಿಒ ಚೌಕ್, ದೆಹಲಿ ಗೇಟ್, ಗುರುನಾನಕ್ ಚೌಕ್, ಶಾಂತಿವನ್ ಚೌಕ್, ರಾಜ್‌ಘಾಟ್ ಡಿಟಿಸಿ ಡಿಪೋ ಹಾಗೂ ಐಪಿ ಫ್ಲೈಓವರ್ ಪ್ರದೇಶಗಳಲ್ಲಿ ಸಂಚಾರವನ್ನು ನಿಯಂತ್ರಿಸುವ ಅಥವಾ ಪರ್ಯಾಯ ಮಾರ್ಗಕ್ಕೆ ತಿರುಗಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಹಾದೂರ್ ಶಾ ಜಫರ್ ಮಾರ್ಗದಲ್ಲಿನ ಐಟಿಒ ಚೌಕ್‌ನಿಂದ ದೆಹಲಿ ಗೇಟ್‌ವರೆಗೆ, ಶಾಂತಿವನ್ ಚೌಕ್‌ನಿಂದ ಐಪಿ ಫ್ಲೈಓವರ್‌ವರೆಗೆ, ದೆಹಲಿ ಗೇಟ್‌ನಿಂದ ಅಸಫ್ ಅಲಿ ರಸ್ತೆ ಮೂಲಕ ಎನ್.ಎಸ್. ಮಾರ್ಗ್‌ವರೆಗೆ, ಶಾಂತಿವನ್ ಚೌಕ್‌ನಿಂದ ನಿಷಾದ್ ರಾಜ್ ಮಾರ್ಗ್‌ವರೆಗೆ, ಗುರುನಾನಕ್ ಚೌಕ್‌ನಿಂದ ರಂಜಿತ್ ಸಿಂಗ್ ಫ್ಲೈಓವರ್‌ವರೆಗೆ ಹಾಗೂ ರಾಜ್‌ಘಾಟ್ ಡಿಟಿಸಿ ಡಿಪೋದಿಂದ ರಿಂಗ್ ರೋಡ್ ಬೈಪಾಸ್‌ವರೆಗೆ ಸಂಚಾರ ನಿರ್ಬಂಧದ ಸಾಧ್ಯತೆ ಇದೆ.
ಸಾಧ್ಯವಾದಷ್ಟು ಈ ಮಾರ್ಗಗಳನ್ನು ತಪ್ಪಿಸುವಂತೆ ಸಂಚಾರ ಪೊಲೀಸರು ವಾಹನ ಸವಾರರಿಗೆ ಸಲಹೆ ನೀಡಿದ್ದಾರೆ. ವಿಳಂಬವನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆ ಬಳಸುವಂತೆ ಹಾಗೂ ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 