ಬಿಂಕ ಬಿನ್ನಾಣರ ರಂಗತಂಡದಿಂದ ಮೂರು ದಿನಗಳ ನಾಟಕೋತ್ಸವ
Three-day theatre festival by the 'Binka Binnaanara' theatre troupe
ಬೆಂಗಳೂರು, 26: ಬಿಂಕ ಬಿನ್ನಾಣರ ರಂಗತಂಡವು 11ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ. ಆಗಸ್ಟ್ 27ರಿಂದ 29ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ನಾಟಕಗಳ ಪ್ರದರ್ಶನ ನಡೆಯಲಿದೆ.
ಆಗಸ್ಟ್ 27ರಂದು ರಾಷ್ಟ್ರಕವಿ ಕುವೆಂಪು ರಚಿಸಿರುವ ‘ಶೂದ್ರ ತಪಸ್ವಿ’, ಆಗಸ್ಟ್ 28ರಂದು ಗೀರೀಶ್ ಕಾರ್ನಾಡ್ ರಚಿಸಿರುವ ‘ತಲೆದಂಡ’ ಹಾಗೂ ಆಗಸ್ಟ್ 29ರಂದು ಕೃಷ್ಣಶರ್ಮ ರಚಿಸಿರುವ ‘ಸುಯೋಧನ’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಮೂರು ನಾಟಕಗಳನ್ನು ರಂಗಭೂಮಿಯ ಯುವ ನಿರ್ದೇಶಕ ಶಿವು ಹೊನ್ನಿಗನಹಳ್ಳಿ ಅವರು ನಿರ್ದೇಶಿಸಿದ್ದಾರೆ. ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಹಿರಿತೆರೆ ಹಾಗೂ ರಂಗಭೂಮಿ ನಟ ನವೀನ್ ಶಂಕರ್, ರಂಗಶ್ರೀ ರಂಗಸ್ವಾಮಿ, ನರೇಂದ್ರ ಬಾಬು ಮತ್ತು ಇರಗಪ್ಪ ಅವರು ನಡೆಸಿಕೊಡಲಿದ್ದಾರೆ.
ಸಾಮಾಜಿಕ ಪ್ರಶ್ನೆಗಳನ್ನು ಎತ್ತುವ ನಾಟಕಗಳು
ಮೊದಲ ದಿನ ಪ್ರದರ್ಶನಗೊಳ್ಳಲಿರುವ ‘ಶೂದ್ರ ತಪಸ್ವಿ’ ಕುವೆಂಪು ಅವರ ಪ್ರಸಿದ್ಧ ಸಾಮಾಜಿಕ-ತಾತ್ವಿಕ ನಾಟಕವಾಗಿದೆ. ಇದು ಕೇವಲ ಪೌರಾಣಿಕ ಕಥೆಯಲ್ಲದೆ, ಜಾತಿ, ಧರ್ಮ ಮತ್ತು ಮಾನವ ಸಮಾನತೆಯ ಕುರಿತ ಗಂಭೀರ ಪ್ರಶ್ನೆಗಳನ್ನು ಎತ್ತುವ ಕೃತಿಯಾಗಿದೆ.
ಎರಡನೇ ದಿನದ ‘ತಲೆದಂಡ’ ನಾಟಕವು 12ನೇ ಶತಮಾನದ ಕಲ್ಯಾಣದ ಶರಣರ ಚಳವಳಿ ಹಾಗೂ ಅದರ ವೈಫಲ್ಯವನ್ನು ಕೇಂದ್ರವಾಗಿಸಿಕೊಂಡಿದೆ. ಬಸವಣ್ಣನವರ ಸಾಮಾಜಿಕ ಸಮಾನತೆಯ ಚಳವಳಿ, ಬಿಜ್ಜಳನ ರಾಜಕೀಯ, ಜಾತಿ ವ್ಯವಸ್ಥೆಯ ಸಂಘರ್ಷ ಹಾಗೂ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ಉಂಟಾಗುವ ಹಿಂಸಾತ್ಮಕ ಬೆಳವಣಿಗೆಗಳು ನಾಟಕದ ಪ್ರಮುಖ ಕಥಾವಸ್ತುವಾಗಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 