ನ್ಯಾಯ ಸಿಕ್ಕಿಲ್ಲ ಮತ ಹಾಕಲ್ಲ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕು

ಶಿರಹಟ್ಟಿ 23:  ಶನಿವಾರ ತಾಲೂಕಿನ ಕೊಗನೂರು ಗ್ರಾಮದಲ್ಲಿ ಎಲ್ಲ ಹಿರಿಯರು, ಯುವಕರು, ಈ ಹಿಂದೆ ಗ್ರಾಮಸ್ಥರೆಲ್ಲರೂ ಸೇರಿ ಲೋಕಸಭಾ ಚುನಾವಣಾ ಬಹಿಷ್ಕಾರ ಮಾಡಿದ್ದು, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಶಿರಹಟ್ಟಿ ದಂಡಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದ್ದರು. 

ಈ ನಮ್ಮ ಮನವಿಗೆ ಜಿಲ್ಲಾಧಿಕಾರಿಗಳಾಗಲೀ, ತಾಲೂಕ ದಂಡಾಧಿಕಾರಿಗಳಾಗಲೀ ಈವರೆಗೂ ನಮ್ಮ ಮನವಿಗೆ ಸ್ಪಂದಿಸಿಲ್ಲ, ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ತಕ್ಷಣವೇ ಜಿಲ್ಲಾಧಿಕಾರಿಗಳು ಇದನ್ನು ಗಮನದಲ್ಲಿಟ್ಟುಕೊಂಡು ನಮಗೆ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಕೋಗನೂರು ಗ್ರಾಮದಲ್ಲಿ ಧರಣಿ ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ನಾವು ಈ ಹೋರಾಟವನ್ನು ಬಿಡುವುದಿಲ್ಲ, ನಾವು ಮುಂಬರುವ ಲೋಕಸಭಾ ಚುನಾವಣೆಯನ್ನು ಸಂಪೂರ್ಣ ಬಹಿಷ್ಕಾರ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲ್ಲ, ನಮಗೆ ಮೂಲಭೂತ ಸೌಕರ್ಯಗಳು ಇಲ್ಲ, ಸರಿಯಾದ ರಸ್ತೆ ಇಲ್ಲ, ಸರಿಯಾದ ಸಮಯಕ್ಕೆ ಸಾರಿಗೆ ಸಂಪರ್ಕ ಇಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

ಸ್ವತಂತ್ರ ಯೋಧರನಾಡು ಕೋಗನೂರು ಎಂದೇ ಪ್ರಸಿದ್ದಿಯಾದ ಗ್ರಾಮ ನಮ್ಮದು, ಇಲ್ಲಿ ಸರಿಯಾದ ಮೂಲಭೂತ ಸೌಕರ್ಯ ಇಲ್ಲ ಹಾಗೆ ಗ್ರಾಮಸ್ಥರಿಗೆ ಇಸ್ವತ್ತು ನಮೂನೆ 9 ಹಾಗೂ 11ಎ ಗ್ರಾಮ ಠಾಣಾ ಪರಿವರ್ತಿಸಿ ಹೊಸ ಗ್ರಾಮ ಠಾಣಾ ಸಮಸ್ಯೆಯನ್ನು ಬಗೆಹರಿಸಲು ತುಂಬಾ ದಿನಗಳಿಂದ ಮನವಿಯನ್ನ ಸಲ್ಲಿಸಲಾಗಿತ್ತು, ನಮ್ಮ ಮನವಿಗೆ ಅಧಿಕಾರಿಗಳು ಇನ್ನೂ ಸ್ಪಂದಿಸಿಲ್ಲ ಇನ್ನೂ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಗ್ರಾಮಸ್ತರು ತೀರಾ ಬೇಸರದಿಂದ ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಮತದಾನವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬ್ಯಾನರ್ ಹಿಡಿದು ನ್ಯಾಯ ಸಿಕ್ಕಿಲ್ಲ ಮತ ಹಾಕಲ್ಲ ಎಂದು ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಊರಿನ ಯುವ ಮುಖಂಡರಾದ ರಾಖೇಶ ಬೂದಿಹಾಳ. ರಮೇಶ್ ಕೂರಗುಂದ. ಮುತ್ತು ತಳವಾರ್, ಕೊಟ್ರೇಶ್ ಪಾನಿಗಟ್ಟಿ, ಪುಟ್ಟರಾಜ ಬಸಾಪುರ ಪರತ್‌ಗೌಡ ಬಸಾಪುರ್ ಹಾಗೂ ಗ್ರಾಮದ ಎಲ್ಲ ಹಿರಿಯರು ಗ್ರಾಮಸ್ತರು ಪ್ರತಿಭಟನೆಯಲ್ಲಿ ಭಾಗಹಿಸಿದ್ದರು.