ಮನೆಯ ಬೀಗ ಮುರಿದು ಕಳ್ಳತನ
Theft by breaking the lock of the house
ಲೋಕದರ್ಶನ ವರದಿ
ಜಮಖಂಡಿ 31: ನಗರದ ರುದ್ರಸ್ವಾಮಿ ಪೇಠದಲ್ಲಿ ತಡರಾತ್ರಿಯಲ್ಲಿ ಕಳ್ಳರ ಗ್ಯಾಂಗ್ ಮನೆಯ ಬೀಗವನ್ನು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ರುದ್ರಸ್ವಾಮಿ ಪೇಠ ಗಲ್ಲಿಯಲ್ಲಿ ಕಳ್ಳರ ಗ್ಯಾಂಗ್ ಒಟ್ಟಿಗೆ ಬಂದು. ಅಲ್ಲಿಂದ ಬೇರೆ-ಬೇರೆ ಕಡೆಗಳಲ್ಲಿ ತಿರುಗಾಡಿದ್ದು. ನಂತರ ಒಟ್ಟಿಗೆ ಸೇರಿಕೊಂಡು ಮನೆ ಬೀಗವನ್ನು ಮುರಿದ್ದು ಕಳ್ಳತನವನ್ನು ಮಾಡಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಕಳ್ಳರಲ್ಲಿ ಒಬ್ಬನು ಕೆಂಪು ಬಣ್ಣದ ಟೀರ್ಶಟ್. ತಲೆಗೆ ಕಪ್ಪು ಬಣ್ಣದ ಕ್ಯಾಫ್ ಧರಿಸಿದ್ದು. ಮೊತ್ತೊಬ್ಬನು ಬಿಳಿ ಬಣ್ಣದ ಶರ್ಟ ಧರಿಕೊಂಡು ತಲೆಗೆ ಮಂಕಿ ಕ್ಯಾಫ್ ಹಾಕಿಕೊಂಡು. ಮೈಮೇಲೆ ಶಾಲು ಹೊದಿಕೆಯನ್ನು ಹಾಕಿಕೊಂಡಿದ್ದು. ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ಹೋಗುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿರುತ್ತವೆ.
ಮನೆ ಕಳ್ಳತನವಾದ ಕುಟುಂಬಸ್ಥರು ಶಹರ ಪೋಲಿಸ್ ಠಾಣೆಗೆ ದೂರನ್ನು ಸಲಿಸಿದಾರೆಂದು ಮಾಹಿತಿ ತಿಳಿದು ಬಂದಿರುತ್ತದೆ. ರುದ್ರಸ್ವಾಮಿ ಪೇಠದ ಗಲ್ಲಿಯ ಜನರು ಭಯಬೀತಗೊಂಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 