ಯುವ ಪೀಳಿಗೆ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಬೇಕು: ಎಂ.ಬಿ.ಬಸವರಾಜ
ಹೂವಿನಹಡಗಲಿ 23: ರಂಗಭೂಮಿ ಕ್ಷೇತ್ರ ಉಳಿಸಿ ಬೆಳೆಸಲು ನಿರಂತರ ಚಟುವಟಿಕೆ ನಡೆಯಬೇಕು. ಯುವ ಪೀಳಿಗೆ ರಂಗಭೂಮಿ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳಸಬೇಕು ರೈತ ಮುಖಂಡರಾದ ಎಂ.ಬಿ.ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಸೋಗಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರೇಶ್ವರ ಸಾಂಸ್ಕೃತಿಕ ದೊಡ್ಡಾಟ ಸಂಘದ ಸಹಯೋಗದಿಂದ ನೋಂದಾಯಿತ ಸಂಘ ಸಂಸ್ಥೆಗಳ ಧನ ಸಹಾಯ ಯೋಜನೆಯಡಿ ಹಮ್ಮಿಕೊಂಡಿದ್ದ ಜಾನಪದ ರಂಗ ಸಂಭ್ರಮದಲ್ಲಿ ಮಾತನಾಡಿದರು.ಟಿವಿ ಧಾರವಾಯಿಗಳ ಭರಾಟೆಯಿಂದಾಗಿ ರಂಗಭೂಮಿಗೆ ಹಿನ್ನಡೆಯಾಗಿದೆ. ಪ್ರತಿಯೊಬ್ಬರೂ ರಂಗಭೂಮಿ, ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ ಬೆಳಸಬೇಕು ಎಂದರು.ಎ.ಎಂ. ಹಾಲಯ್ಯ ಶಾಸ್ತ್ರಿ ಮಾತನಾಡಿ, "ರಂಗಭೂಮಿಗೆ ಕಲಾವಿದರ ಕೊರತೆಯಾಗಿದ್ದು ಬಗ್ಗೆ ಆತಂಕ ವ್ಯಕ್ತಪಡಿಸಿದರು.ಅಧುನಿಕ ಸ್ಪರ್ಶ ಮೂಡಿದಾಗ ಕಲಾವಿದರು ವಿಮುಖರಾಗುತ್ತಿದ್ದಾರೆ. ಸರಕಾರ, ಸಂಘ ಸಂಸ್ಥೆಗಳಿಂದ ಕಲೆಗೆ ಪ್ರೋತ್ಸಾಹದ ಅಗತ್ಯವಿದೆ. ’"ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈ.ಮಲ್ಲಪ್ಪ ಗವಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಸಿದ್ದಲಿಂಗೇಶ, ರಂಗಣ್ಣ ಅವರನ್ನು ಸ್ಮರಿಸಿದರು.
ದೂಪದ ಕೊಟ್ರ್ಪ, ಎಸಿಎಂಸಿ ಅಧ್ಯಕ್ಷ ಹಗರನೂರು ಸಿದ್ಧಪ್ಪ ಡಾ.ಎಸ್.ಕರಿಬಸಪ್ಪ ಸಂಗಬ್ಬಾಲಾ ಬಯಲಾಟ ಭಾಗವತರಾದ ಗಚ್ಚಿನಮನಿ ಕೊಟ್ಟಪ್ಪ ಕೋಗಳಿ ಕುಬೇರ್ಪ, ಡಿ.ಹೊನ್ನೇಶ್, ಎಚ್.ಕಣ್ಣೀಶ್, ಸಿ.ನಾಗಭೂಷಣ, ಹಾರ್ಮೋನಿಯಂ ಕಸ್ತೂರ್ಪ, ಮದ್ದಳ ವಾದಕ ಕರಿಬಸಪ್ಪ ಕಾಂತೇಶ ಇತರರಿದ್ದರು.