ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಂಸ್ಥೆಯ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ! ಸ್ವಯಂ ಪ್ರೇರಿತ ಸ್ವಚ್ಛತಾ ಕಾರ್ಯ!
ಮಹಾಲಿಂಗಪುರ 06 : ಪಟ್ಟಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆ ವತಿಯಿಂದ ಗುರುವಾರ 12ನೇ ವಾರ್ಡಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆಯಿಂದ ಸಾರ್ವಜನಿಕ ಶೌಚಾಲಯದ ವರೆಗೆ ಮತ್ತು ರಸ್ತೆ ಬದಿ ಗಿಡ-ಗಂಟಿಗಳಿಂದ ಕೂಡಿ ಜನಸಾಮಾನ್ಯರಿಗೆ ಸಂಚರಿಸಲು ಅಸಾಧ್ಯವಾಗಿತ್ತು ಇದನ್ನು ಕಂಡ ಸಂಸ್ಥೆಯ ಪದಾಧಿಕಾರಿಗಳು ತಮ್ಮ ಎಲ್ಲಾ ಸದಸ್ಯರೊಂದಿಗೆ ರಸ್ತೆಯ ಅಕ್ಕ-ಪಕ್ಕದಲ್ಲಿರುವ ಕಲ್ಲು,ಮುಳ್ಳುಗಳನ್ನು ಸ್ವಚ್ಛತೆ ಮಾಡಿ ಜನಸಾಮಾನ್ಯರಿಗೆ ಸಂಚರಿಸಲು ಯೋಗ್ಯ ವಾಗುವಂತೆ ಸ್ವಚ್ಛತೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಅಜಹರ ಕೋಲಾರ,ಮುನ್ನಾ ಕರಡಿ,ಯುನುಸ ಬೀಳಗಿ,ಭಾಷಾ ಭಿಸ್ತಿ, ಜಬಿವುಲ್ಲಾ ಮುಲ್ಲಾ,ಸೈಯದ ನದಾಫ ,ರಿಯಾಜ್ ಯಾದಗುಡ,ಹ್ಯಾರಿಸ್ ಶಿರೋಳ, ಶಾರುಕ ರೋಣ,ರಫಿಕ ಅಂಬಿ, ಸಮೀರ್ ಅಂಬಿ,ಜಾಕಿರ ಶೇಕ, ಮೈಬೂಬ ಗಡ್ಡಿ, ಶಾಹಿದ್ ಕರಡಿ,ಫಕ್ರುದ್ದೀನ ಅನ್ಸಾರಿ, ಇಸ್ಮಾಯಿಲ ಮುಲ್ಲಾ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.