ಮಹಲಿಂಗಪುರ

ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ: ಶ್ರೀಕಾಂತ ಮಾಳಿ

ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ: ಶ್ರೀಕಾಂತ ಮಾಳಿ

ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ: ಶ್ರೀಕಾಂತ ಮಾಳಿ 

ಮಹಾಲಿಂಗಪುರ 24: ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಈ ಸಂಸ್ಥೆ ತಲೆಯೆತ್ತಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಅಮೋಘ ಸೇವೆ ಸಲ್ಲಿಸಲಿ. ಕನ್ನಡ ನಾಡಿನಲ್ಲಿ ಇನ್ನಷ್ಟು ಅತ್ಯುತ್ತಮ ಹೆಸರು, ಕೀರ್ತಿ ಸಂಪಾದಿಸಲಿ. ಕರ್ನಾಟಕದ ಮಾಳಿ ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ಸತ್ಕಾರ್ಯ ಅಮೋಘವಾದದು. ಜೊತೆಗೆ ಈ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾದುದು ಎಂದು ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ಟ್ರಸ್ಟ್‌ನ ನೂತನ ಗೌರವಾಧ್ಯಕ್ಷ ಶ್ರೀಕಾಂತ ಎಸ್ ಮಾಳಿ ಹೇಳಿದರು. ಪಟ್ಟಣದ ಮಹಾತ್ಮ ಜ್ಯೋತಿಬಾ ಫುಲೆ ಸಮುದಾಯ ಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ನೂತನ ಗೌರವಾಧ್ಯಕ್ಷ ಸ್ಥಾನ ಪಡೆದು ಮಾತನಾಡಿದರು. ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹಾಲಿಂಗ ಮಾಳಿ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. ನೂತನ ಗೌರವಾಧ್ಯಕ್ಷರಾಗಿ ಶ್ರೀಕಾಂತ ಎಸ್‌.ಮಾಳಿ, ಅಧ್ಯಕ್ಷರಾಗಿ ಶಿವಲಿಂಗ ಮಾಳಿ, ಉಪಾಧ್ಯಕ್ಷರಾಗಿ ಚಿದಾನಂದ ಬಾಳಿಕಾಯಿ ಆಯ್ಕೆಯಾದರು. ಹಿರಿಯರಾದ ರುದ್ರ​‍್ಪ ರಾಮದುರ್ಗ, ಈರ​‍್ಪ ಮಾಳಿ, ಚನ್ನಪ್ಪ ಮಾಳಿ, ಶ್ರೀಕಾಂತ ಗು.ಮಾಳಿ, ಶಿವಪ್ಪ ಕವಣಿ, ಮಹಾಲಿಂಗ ಬಾಳಿಕಾಯಿ, ಬಸವರಾಜ ಬಾಳಿಕಾಯಿ, ಕಾಳಪ್ಪ ಮಾಳಿ, ಶ್ರೀಶೈಲ ಮಾಳಿ, ವಿಠ್ಠಲ ಮಾಳಿ, ಮಾರುತಿ ನಾಗನ್ನವರ, ಪರಶುರಾಮ ಮಾಳಿ ಉಪಸ್ಥಿತರಿದ್ದರು. 


ಸುದ್ದಿ ಓದಿ