ಉಪಚುನಾವಣೆ ಎದುರಿಸಲು ಆಡಳಿತ ಸಕಲ ಸಿದ್ಧತೆ: ಎ.ದೇವರಾಜ

ಲೋಕದರ್ಶನವರದಿ

ರಾಣೇಬೆನ್ನೂರು-ನ.15: ಸ್ಥಳಿಯ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನ.11 ರಿಂದ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಆರಂಭಗೊಂಡಿದ್ದು, ನಾಮಪತ್ರ ಸ್ವೀಕರಿಸಲು ಕೊನೆಯ ದಿನಾಂಕ ನ.18, ನಾಮಪತ್ರ ಪರಿಶೀಲನೆ ನ.19, ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನ ನ.21 ಆಗಿದೆ.  ಡಿ.5 ರಂದು ಮತದಾನ ಡಿ.9 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಎ.ದೇವರಾಜು ಹಾಗೂ ತಹಶೀಲ್ದಾರ ಬಸವರಾಜ ಕೋಟೂರ ಹೇಳಿದರು. 

ನಗರದ ತಹಶೀಲ್ದಾರ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಒಟ್ಟು ಮತದಾರರು 2,32, 485 ಇದ್ದು, ಗಂಡು 1,18,396 ಹಾಗೂ ಹೆಣ್ಣು 1,14,076 ಹಾಗೂ ಇತರೆ 13 ಮತದಾರರು ಇದ್ದಾರೆ. ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪಾಲನೆ ಮಾಡಲಾಗುವುದು. ಒಂದು ವೇಳೆ ಭಾರತ ಚುನಾವಣಾ ಆಯೋಗದ ಪ್ರಕಾರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 

ನಗರದ  ಜಾನುವಾರು ಮಾರುಕಟ್ಟೆ, ಹಲಗೇರಿ ಕ್ರಾಸ್, ಮಾಕನೂರು ಕ್ರಾಸ್ ಮತ್ತು ಹರನಗಿರಿ ಸೇರಿದಂತೆ ನಾಲ್ಕು ಚೆಕ್ಪೋಷ್ಟ್ ತೆರೆಯಲಾಗಿದೆ. 12 ಸ್ಟ್ಯಾಟಿಕ್ ಕಣ್ಗಾವಲು ತಂಡ ರಚನೆ ಮಾಡಲಾಗಿದೆ. 18 ಪ್ಲಾಯಿಂಗ್ ಸ್ಕ್ವಾಡ್, 3 ವಿಡಿಯೋ ಕಣ್ಗಾವಲು, 1 ವಿಡಿಯೋ ವೀಕ್ಷಣಾ ತಂಡ, ಇಬ್ಬರು ಚುನಾವಣಾ ವೆಚ್ಚ ಪರಿಶೀಲನಾ ತಂಡ ಹಾಗೂ 243 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ವಿಧಾನಸಭಾ ಮತಕ್ಷೇತ್ರಕ್ಕೆ 266 ಮತಗಟ್ಟೆಗಳನ್ನು ಹೊಂದಿದ್ದು, ಪ್ರತಿ ಮತಗಟ್ಟೆಗಳಲ್ಲಿ ಮತದಾನ ಜರುಗಿಸಲು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿ ವ ಸಿಬ್ಬಂದಿಗಳ ಮಾಹಿತಿಯನ್ನು ಪಡೆದು ಸಿಬ್ಬಂದಿಯನ್ನು ನಿಯೋಜಿಸಲು ನಿದರ್ೇಶಿಸಲಾಗಿದೆ. ಪ್ರತಿ ಮತಗಟ್ಟೆಗೆ ತಲಾ 4 ಸಿಬ್ಬಂದಿಗಳಂತೆ ಶೇ.10 ಸಿಬ್ಬಂದಿಗಳನ್ನು ಕಾಯ್ದಿರಿಸಿ ಚುನಾವಣೆ ಜರುಗಿಸಲು ನೇಮಕ ಮಾಡಲಾಗಿದೆ ಎಂದರು.

ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿಸಲು ಸಿಆರ್ಪಿಎಫ್ ಎಸ್/ಸಿಎಪಿಎಸ್ ಪಡೆಗಳ ಜೊತೆಗೆ ತಾಲೂಕಿನ ಪೊಲೀಸ್ ಇಲಾಖೆಯಲ್ಲಿ ಲಭ್ಯವಿರುವ ಎಲ್ಲ ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸಲು ಯೋಜನೆಯನ್ನು ರೂಪಿಸಲಾಗಿದೆ. ಒಟ್ಟು 266 ಮತಗಟ್ಟೆಗಳ ಪೈಕಿ 54 ಸೂಕ್ಮ, 5 ಅತೀ ಸೂಕ್ಷ್ಮ, ಮತ್ತು 212 ಸಾಮಾನ್ಯ  ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದರು. 

ತಾಲೂಕು ಕಂಟ್ರೋಲ್ ರೂಂ ತಾಲೂಕು ಕಚೇರಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಲು ಅಥವಾ ಚುನಾವಣಾ ನೀತಿ ಮಾಹಿತಿ ಪಡೆಯಲು ಸಾರ್ವಜನಿಕರ ಅನುಕೂಲಕ್ಕಾಗಿ ನಿರಂತರ ಕಾರ್ಯನಿರ್ವಹಿಸಲು 24/7 ಕಂಟ್ರೋಲ್ ರೂಂ ತೆರೆದು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. 

ದೂರವಾಣಿ ಸಂಖ್ಯೆ: 08373-260449 ಗೆ ನೇರವಾಗಿ ಸಾರ್ವಜನಿಕರು ದೂರು ನೀಡಲು ಡಯಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಚುನಾವಣಾಧಿಕಾರಿ 7337817230 ಹಾಗೂ ಸಹಾಯಕ ಚುನಾವಣಾಧಿಕಾರಿ 9945436089 ಇವರನ್ನು ಸಂಪಕರ್ಿಸಬಹುದು ಎಂದರು.