ಕನ್ನಡದ ಉಳಿವು ಬೆಳವಣಿಗೆಗೆ ಸಾಹಿತ್ಯ ಸಂಘಟನೆಗಳ ಪಾತ್ರ ಮಹತ್ವದ್ದು: ಡಾ. ಸತೀಶ ಕುಲಕರ್ಣಿ
The role of literary organizations is crucial for the survival and growth of Kannada: Dr. Satish Kul
ಲೋಕದರ್ಶನ ವರದಿ
ಹಾವೇರಿ, ಜುಲೈ 20: ಕನ್ನಡೇತರರಿಗೆ ಕನ್ನಡವನ್ನು ಪರಿಚಯಿಸುವುದು, ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವುದು ಹಾಗೂ ಕನ್ನಡ ಸಾಹಿತ್ಯವನ್ನು ಉತ್ತೇಜಿಸುವುದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಪ್ರಮುಖ ಧ್ಯೇಯವಾಗಬೇಕು ಎಂದು ಡಾ. ಸತೀಶ ಕುಲಕರ್ಣಿ ಹೇಳಿದರು. ನಗರದ ಹೊಸಮಠದಲ್ಲಿ ಜಿಲ್ಲಾ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕನ್ನಡ ನಾಡು-ನುಡಿ ಕುರಿತು ಆತ್ಮಾಭಿಮಾನ ಹಾಗೂ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದು ಹೇಳಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸೋಮನಾಥ ಡಿ. ಮಾತನಾಡಿ, ಕವಿತೆಗಳು ನೇರವಾಗಿ ಹೃದಯವನ್ನು ಸ್ಪರ್ಶಿಸುವ ಶಕ್ತಿಯನ್ನು ಹೊಂದಿದ್ದು, ಭಾವನೆಗಳ ಕಲಾತ್ಮಕ ಅಭಿವ್ಯಕ್ತಿಗೆ ಕಾವ್ಯ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷ ಎಸ್.ಡಿ. ಮೂಡೆಣ್ಣ ಮಾತನಾಡಿ, ಹಾವೇರಿಯಲ್ಲಿ ನಡೆದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ಜಿಲ್ಲೆಯ ಜನತೆ, ಸಾಹಿತಿಗಳು, ಕಲಾವಿದರು ಹಾಗೂ ಮಾಧ್ಯಮಗಳ ಸಹಕಾರ ಕಾರಣವಾಗಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಚಂಪಾ ಹುಣಸಿಕಟ್ಟಿ, ಲತಾ ಹಳಕೊಪ್ಪ, ಹೇಮಾವತಿ ಮುದ್ದಿ, ಡಾ. ಎಚ್. ಇಮ್ರಾಪುರ, ಜಿ.ಎಂ. ಓಂಕಾರಣ್ಣ, ಡಾ. ಗೀತಾ ಸುತ್ತಕೋಟಿ, ಉಡಚಪ್ಪ ಮಾಳಗಿ, ಡಾ. ರಮೇಶ್ ಅಂಬಿಗೇರ, ನಾಗರಾಜ ಹುಡೇದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಶ್ರೀಕಾಂತ ದೊಡ್ಡಕುರುಬರ, ಜುಬೇದಾ ನಾಯ್ಕ, ರಂಜನಾ ಭಟ್, ಪ್ರಕಾಶಗೌಡ ಗಡಿಯಪ್ಪಗೌಡ್ರ, ನೇತ್ರಾವತಿ ಅಂಗಡಿ, ಹನುಮಂತಸಿಂಗ್ ರಜಪೂತ, ನೇಹಾ ಓಂಕಾರಣ್ಣ, ಶೋಭಾ ಹಡಗಲಿ, ಸಾವಿತ್ರಿ ಬಾಕಿ, ಫರ್ವೀನ್ಬಾನು ಎಲಿಗಾರ, ಶಕುಂತಲಾ ಕಂಬಾಳಿಮಠ ಹಾಗೂ ದಾನೇಶ್ವರಿ ಪೂಜಾರ ಅವರು ಕವನ ವಾಚನ ಮಾಡಿದರು. ಈ ಸಂದರ್ಭದಲ್ಲಿ ಪೂಜ್ಯ ಬಸವಶಾಂತಲಿಂಗ ಸ್ವಾಮೀಜಿಯವರನ್ನು ಸನ್ಮಾನಿಸಲಾಯಿತು. ಜಯಶ್ರೀ ಅಂಕಲಕೋಟಿ ಪ್ರಾರ್ಥನೆ ನೆರವೇರಿಸಿದರು. ಭಾರತಿ ಯಾವಗಲ್ ತಂಡದವರು ನಾಡಗೀತೆ ಹಾಡಿದರು. ರೇಣುಕಾ ಮಡಿವಾಳ ಸ್ವಾಗತಿಸಿದರು. ಪದ್ಮಾವತಿ ಕಲ್ಲು ಕಾರ್ಯಕ್ರಮ ನಿರೂಪಿಸಿದರು.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 