ಹೊಳೆಯಾಗಿ ಹರಿದ ಕಾವ್ಯಝರಿ

ಹೊಳೆಯಾಗಿ ಹರಿದ ಕಾವ್ಯಝರಿ  

ಧಾರವಾಡ 06: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಬರೀ ಕವಿತೆಗಳದ್ದೇ ಸದ್ದು. 

ನಾಡಿನ ಬೇರೆ ಬೇರೆ ಜಿಲ್ಲೆಯನ್ನು ಪ್ರತಿನಿಧಿಸಿ ಸಮ್ಮೇಳನದಲ್ಲಿ ಕವಿತೆ ಓದಲು ಬಂದಿದ್ದ ಕವಿ ಹಾಗೂ ಕವಯಿತ್ರಿಯರು ಒಬ್ಬೊಬ್ಬರಾಗಿ ಕವಿತೆಗಳನ್ನು ಓದಿ ಕಾವ್ಯದ ಹೊಳೆಯನ್ನೇ ಹರಿಸಿದರು.

ಸಾಯೋದಕ್ಕೆ ಪ್ರಸಾದವೇ ಸಾಕು. ಸಾಯಲಿಕ್ಕೆ ವಿಷವನ್ನೇ ತಿನ್ನಬೇಕೆಂಬ ಪ್ರಮೆಯವೇನಿಲ್ಲ. ಗುಡಿಗಳಿಗೆ ಹೋದರೆ ಸಾಕು ಸಾಯುತ್ತೇವೆ. ಭಕ್ತಿಯ ಪ್ರಸಾದವೇ ವಿಷ ಎನ್ನುವ ಕವಿತೆ ಓದುವ ಮೂಲಕ ಕವಿ ದಾದಾಪೀರ್ ಗಮನ ಸೆಳೆದರು.

ರೈತ ದೇಶದ ಬೆನ್ನುಲುಬು. ಯಾವುದೇ ಭೇದ-ಭಾವ ಲೆಕ್ಕಿಸದೇ ನಾಡಿಗೆ ಅನ್ನ ನೀಡುವ ಅನ್ನದಾತನ ಶ್ರಮವನ್ನು ತಿಳಿಸುವ ಪದ್ಯವನ್ನು ಕವಿ ವಿರುಪಾಕ್ಷ ಎಂ. ಓದಿದರು. 

ಪೂರ್ಣ ಕುಂಭಹೊತ್ತ ಮಹಿಳೆಯರಿಗೆ ನನ್ನ ನಮನಗಳು. ಆ ಮಹಿಳೆಯರಿಗೆ ಈ ನನ್ನ ಕವನ ಸಮಪರ್ಿಸುತ್ತೇನೆ ಎಂದು ಪೂರ್ಣಕುಂಭ ಮೇಳದ ಬಗ್ಗೆ ದ್ರಾಕ್ಷಾಯಿಣಿ ಹುಡೇದ ಅವರು ಕವಿತೆ ವಾಚಿಸಿದರು.

ಇದೆ ವೇಳೆಯಲ್ಲಿ ವಸುಧಾ ಬಳ್ಳಾರಿ, ಜೀವರಾಜ್ ಹೆಚ್. ಛತ್ರದ, ರಾಮಚಂದ್ರ ಸಾಗರ, ವಿಭಾ ಪುರೋಹಿತರ, ಎಂ.ರಾಜು, ಕಾರಹಳ್ಳಿ ಶ್ರೀನಿವಾಸ, ಎನ್.ಆರ್.ಕುಲಕಣರ್ಿ, ವಿಶಾಲಕುಮಾರ ಸಿಂಧೆ, ಗಂಗಾಧರ ಬಿ.ಎಲ್.ನಿಟ್ಟೂರ, ಮೇಘ ಗಂಗಾಧರನಾಯ್ಕ, ಎ.ಬಿ.ಶಿವದೇವಿ, ವೈ.ಸುಧೀಂದ್ರ, ಭಾಗ್ಯಲಕ್ಷ್ಮಿ ಇನಾಮತಿ, ವಸಂತ ಸುರೇಂದ್ರನಾಥ, ಶಿವಕಾಂತ  ರೆಡ್ಡಿ, ಶಕುಂತಲಾ ಭಟ್ ಹಳೆಅಂಗಡಿ, ಮಹಾಂತೇಶ ಅಣ್ಣಿಗೇರಿ, ಮಹಾಂತಪ್ಪ ನಂದೂರ, ಶರಣಪ್ಪ ಬಾಚಲಾಪೂರ, ಚೈತ್ರಾ ಬೇವಿನಗಿಡದ, ರಜನಿ ಆರ್.ಜಿರಿಗ್ಯಾಳ, ಕೆ.ಪಿ.ನಟರಾಜ, ಅನುಪಮ ಪ್ರಸಾದ, ದೇವರಾಜ್ ಎಂ.ಆರ್., ರಾಮೇಶ್ವರ ಡಾಣಿ, ರಮೇಶ ಬಾಬು, ಶ್ರೀಕಾಂತ ಸೂಗಿ, ಕೆ.ಗಿರಿಮಲ್ಲ, ನಿರಂಜನ ದೇವರಮನೆ, ವೈ.ವಿ.ಯಶೋಧಾ, ರಾಜಶೇಖರ ಪಾಟೀಲ, ನಾಗರಾಜ್ ಹೆಚ್.ಎಸ್., ಗೋವಿಂದರಾಜು, ಸುಜಯಿಂದ್ರ ಹಂದೆ ಹೆಚ್., ಸುಬ್ರಾಯ ಮತ್ತಿಹಳ್ಳಿ, ರೇಣುಕಮ್ಮ ಜೆ, ಸಾ.ಮ.ಶಿವಮಲ್ಲಯ್ಯ, ಶ್ವೇತಾ ಜೈನ್, ಸಂಪಿಗೆ ನಾಗರಾಜ, ಶರಣಪ್ಪ ಬೇವಿನಕಟ್ಟಿ, ಜಿ.ಜಿ.ಬರಡೋಲ, ಚಿ.ಸಿ.ಲಿಂಗಣ್ಣ ಹಾಗೂ ರಾಜೇಶ ಗುಬ್ಬಿ ಕವಿತೆ ವಾಚಿಸಿದರು.

ಈ ವೇಳೆ ಕವಿಗೋಷ್ಠೀಯ ಅಧ್ಯಕ್ಷತೆ ವಹಿಸಿದ್ದ ಚಿಂತಕಿ, ವಿಮರ್ಶಕಿ ಪ್ರೊ.ಬಿ.ಸುಕನ್ಯಾ ಮಾತನಾಡಿ, ಭಾಷೆಯ ಬಗ್ಗೆ ಹಿಡಿತವಿದ್ದಾಗ, ಭಾಷಾ ಪ್ರಯೋಗದ ಪ್ರಜ್ಞೆ ಬಂದಾಗ ಹಾಗೂ ಶಬ್ದ ಸಂಪತ್ತು ಇದ್ದಾಗಲೇ ಕವಿತೆಗಳಿಗೆ ಜೀವ ತುಂಬಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ನಾನು ಸಹ ಕವಿತೆಗಳನ್ನು ಬರೆಯುವ ಆರಂಭದ ದಿನಗಳಲ್ಲಿ ಹೋರಾಟ ಮನೋಭಾವದ ಕವಿತೆಗಳನ್ನು ರಚಿಸಿದ್ದೇನೆ ಎಂದು ತಿಳಿಸಿದರು.

ಎಚ್.ಡುಂಡಿರಾಜ್ ಅವರು ಆಶಯ ನುಡಿಗಳನ್ನು ಹೇಳಿದರು. ಡಾ.ಮೈತ್ರೇಯಿಣಿ ಗದಿಗೆಪ್ಪಗೌಡ ನಿರೂಪಿಸಿದರು. ಡಾ.ಅಶೋಕ ನರೋಡೆ ಸ್ವಾಗತಿಸಿದರು. ಎ.ಜಿ.ರತ್ನಾಕಾಳೇಗೌಡ ವಂದಿಸಿದರು. ಊ.ರ.ನಾಗೇಶ ನಿರ್ವಹಿಸಿದರು.