ಜಿಲ್ಲಾ ಪೊಲೀಸ್ ಇಲಾಖೆಯ ಅಧೀನದಲ್ಲಿರುವ ಜಮೀನನ್ನು ಕ್ರಿಡಾಂಗಣಕ್ಕೆ ನೀಡಲು ಸಿದ್ದರಿದ್ದೇವೆ: ಎಸ್ಪಿ ನಾರಾಯಣ
ಕಾರವಾರ, 04 : ಕಾರವಾರದ ಮಾಲಾದೇವಿ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಿತು. ಇದೇ ವೇಳೆ ಜಿಲ್ಲಾ ಪೊಲೀಸ್ ಇಲಾಖೆಯ ಅಧೀನದಲ್ಲಿರುವ ಜಮೀನನ್ನು ಕ್ರಿಡಾಂಗಣ ಮಾಡಲು ನೀಡಲು ಸಿದ್ದರಿದ್ದೇವೆ ಎಂದು ಎಸ್ಪಿ ನಾರಾಯಣ ತಿಳಿಸಿದರು. ಕಾರವಾರದಲ್ಲಿ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾಲಾದೇವಿ ಮೈದಾನದಲ್ಲಿ ಕ್ರಿಕೆಟ್ ಮೈದಾನ ಹಾಗೂ ಮ್ಯಾಟ್ ವ್ಯವಸ್ಥೆ ಇಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ಇಲಾಖೆಯ ಅಧೀನದಲ್ಲಿರುವ ಜಮೀನನ್ನು ಕ್ರಿಡಾಂಗಣ ಮಾಡಲು ನೀಡಲು ಸಿದ್ದರಿದ್ದೇವೆ. ಶಾಸಕ ಸತೀಶ ಸೈಲ್ ಅವರು ಸರಕಾರದ ಅನುದಾನದಿಂದ ಉತ್ತಮ ಕ್ರಿಡಾಂಗಣ ನಿರ್ಮಿಸಬೇಕು ಎಂದರು.ಕಬ್ಬಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಸತೀಶ ಸೈಲ್, ಕಾರವಾರದಲ್ಲಿ ಕ್ರಿಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಕರಾವಳಿ ಉತ್ಸವದಲ್ಲಿ ಅದ್ದೂರಿಯಾಗಿ ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡಲು ಯೋಚಿಸಲಾಗಿತ್ತು. ಆದರೆ ಕಾರಣಾಂತರದಿಂದ ಉತ್ಸವ ಮುಂದೂಡಲಾಗಿದೆ. ಆದರೆ ಕ್ರೀಡಾ ಪ್ರೇಮಿಗಳಿಗೆ ನಿರಾಸೆ ಮಾಡದೆ , ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದರು.
ಪಂದ್ಯಾವಳಿಗೆ ರಾಜ್ಯದ ವಿವಿಧೆಡೆಯಿಂದ ಒಟ್ಟೂ ಹತ್ತು ತಂಡಗಳು ಭಾಗವಹಿಸಿವೆ. ಎರಡು ದಿನಗ ಕಾಲ ನಡೆಯುವ ಈ ಪಂದ್ಯಾವಳಿಯಿಂದ ಕರಾವಳಿ ಭಾಗದಲ್ಲಿ ನಡೆಯುವ ದೇಸಿ ಕ್ರಿಡಾಕೂಟಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದರು.ವಕೀಲ ರವೀಂದ್ರ ನಾಯ್ಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಮುಖಂಡ ಗೋಪು ಅಡ್ಳೂರು, ಡಿವೈಎಸ್ಪಿ ಗರೀಶ, ಕಬ್ಬಡಿ ತಂಡಗಳ ಮಾಲೀಕರು ಹಾಗೂ ಕಾರವಾರ ಸ್ಪೋರ್ಟ್ಸ ಕ್ಲಬ್ನ ಪದಾಧಿಕಾರಿಗಳು ಇದ್ದರು.