ಮೂಡಲಗಿ, 06: “ಯುವಕರಲ್ಲಿ ಶಿಸ್ತು, ಸಮಯಪ್ರಜ್ಞೆ, ನಾಯಕತ್ವದ ಗುಣ, ದೇಶಾಭಿಮಾನ ಮತ್ತು ಸೇವಾ ಮನೋಭಾವ ಮೂಡಿಸುವುದೇ ಎನ್.ಎಸ್.ಎಸ್.ನ ಧ್ಯೇಯವಾಗಿದೆ” ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೋಕಾಕನ ಪ್ರಾಧ್ಯಾಪಕರಾದ ಶ್ರೀ ಸಂತೋಷ ಬಿ. ಎಸ್. ರವರು ಹೇಳಿದರು.
ಅವರು ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿಯ ಎನ್.ಎಸ್.ಎಸ್. ಘಟಕ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ "ಹಳ್ಳಿಯ ಜನರಿಗೆ ಸರ್ಕಾರದ ಸೌಲಭ್ಯಗಳ ಸಂಪೂರ್ಣ ಮಾಹಿತಿ ನೀಡಿ, ಸ್ವಚ್ಛತೆಯ ಕಡೆ ಗಮನಹರಿಸಿ, ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ನಡೆಯುತ್ತಿರುವ ಎನ್.ಎಸ್.ಎಸ್ ಶಿಬಿರದಿಂದ ಗ್ರಾಮದ ಚಿತ್ರಣ ಬದಲಾಗಲಿ. ಈ ನಿಟ್ಟಿನಲ್ಲಿ ಗ್ರಾಮದ ಸವಾಂರ್ಗೀಣ ಅಭಿವೃದ್ಧಿಯೇ ನಮ್ಮ ಶಿಬಿರದ ಗುರಿಯಾಗಿರಲಿ. ಎಸ್.ಎಸ್.ಎಸ್. ಶಿಬಿರವು ಸೇವೆಯ ಅನುಭವದ ಜೊತೆಗೆ ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತದೆ. ಆದ್ದರಿಂದ ಶಿಬಿರಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ಸಮಾಜಕ್ಕೆ ಉತ್ತಮ ನಾಯಕರಾಗಿ” ಎಂದು ಕರೆ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಮಹೇಶ ವಾಯ್. ಕಂಬಾರರವರು ಮಾತನಾಡಿ, “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಗುರ್ಲಾಪುರ ಗ್ರಾಮದ ಗುರುಹಿರಿಯರ ಸಹಕಾರದಿಂದ ಶಿಬಿರವು ಯಶಸ್ವಿಯಾಗಲಿ” ಎಂದು ಹಾರೈಸಿದರು.
ದಿ.03-05-2025 ರಿಂದ 09-05-2025 ವರೆಗೆ ನಡೆಯುವ 7 ದಿನಗಳ ಶಿಬಿರವನ್ನು ಸಸಿಗೆ ನೀರು ಹನಿಸುವ ಮೂಲಕ ಮೂಡಲಗಿ ಪುರಸಭೆಯ ಅಧ್ಯಕ್ಷರಾದ ಖುರಸಾದ ಅನ್ವರ್ ನದಾಫ್, ಸದಸ್ಯರಾದ ಆನಂದ ಟಪಾಲ್ದಾರ ಮತ್ತು ಯಲ್ಲವ್ವ ಪರ್ಪ ಹಳ್ಳೂರರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಿ.ಸಿ. ಮುಗಳಖೋಡ, ಎಸ್. ಜಿ. ಹಂಚಿನಾಳ, ರುದ್ರಯ್ಯ ಹಿರೇಮಠ, ಈರಯ್ಯ ಹಿರೇಮಠ, ಮಹಾಲಿಂಗ ಮುಗಳಖೋಡ, ಅನ್ವರ್ ನದಾಫ್, ಈಶ್ವರ ಮುಗಳಖೋಡ, ಎ.ಡಿ. ಗಾಣಿಗೇರ, ಸಿದ್ದು ಗಡ್ಡೆಕರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಚಂದ್ರು ಗಾಣಿಗ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು ಭಾಗವಹಿಸಿದ್ದರು. ಶಿಬಿರಾರ್ಥಿಗಳಾದ ಸುಷ್ಮಾ ಪೂಜೇರಿ ಸ್ವಾಗತಿಸಿದರು. ಸಿದ್ರಾಮ ಪೂಜೇರಿ ವಂದಿಸಿದರು ಮತ್ತು ಸುಷ್ಮಿತಾ ಟಗರೆ ನಿರೂಪಿಸಿದರು.