ಭಕ್ತಿಭಾವದಿಂದ ನೆರವೇರಿದ ಸದ್ಗುರು ಸಿದ್ಧಾರೂಢರ ಪುರಾಣ ಮಂಗಲೋತ್ಸವ
The grand concluding ceremony of the Sadguru Siddharudha Purana, performed with deep devotion
ಲೋಕದರ್ಶನ ವರದಿ
ಗದಗ, ಸೆ. 11: ಅವಳಿ ನಗರದ ಬೆಟಗೇರಿಯ ರಂಗಾವಧೂತ ನಗರದಲ್ಲಿರುವ ಸಿದ್ಧೇಶ್ವರ ಮಠದಲ್ಲಿ 23ನೇ ಸದ್ಗುರು ಸಿದ್ಧಾರೂಢರ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಭಕ್ತಾದಿಗಳ ಸಮ್ಮುಖದಲ್ಲಿ ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಕ್ಕಣ್ಣೇಶ್ವರ ಮಠದ ಪೀಠಾಧಿಪತಿ ಸದ್ಗುರು ಶಂಕರಾನಂದ ಸ್ವಾಮೀಜಿ ಮಾತನಾಡಿ, ಸಿದ್ಧಾರೂಢರ ತತ್ವ ಹಾಗೂ ಬೋಧನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಮಾನವನು ಆಧ್ಯಾತ್ಮಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನೆಮ್ಮದಿ ಮತ್ತು ಶಾಂತಿ ಕಾಣಲು ಸಾಧ್ಯ ಎಂದರು.
ಇಂತಹ ಪುರಾಣ ಶ್ರವಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸತ್ಚಿಂತನೆ ಮತ್ತು ಭಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುತ್ತವೆ. ಪವಿತ್ರ ಶ್ರಾವಣ ಮಾಸವು ಭಕ್ತಿ, ತ್ಯಾಗ ಹಾಗೂ ಆತ್ಮಾವಲೋಕನದ ಸಂಕೇತವಾಗಿದೆ.
ಜೀವನದಲ್ಲಿ ಗುರುವಿನ ಮಹತ್ವ ಹಾಗೂ ಸಮಯದ ಮೌಲ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಗುರು ತೋರಿದ ಸನ್ಮಾರ್ಗದಲ್ಲಿ ನಡೆದಾಗ ಸಾರ್ಥಕ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇಂದಿನ ಯುವ ಪೀಳಿಗೆ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳ ಅಗತ್ಯವನ್ನು ಅರಿತುಕೊಂಡು, ಉತ್ತಮ ಚಿಂತನೆ ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹರಿಹರದ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಬಸಪ್ಪ ದೇವಾಂಗದ ಅವರು ವಿಶೇಷ ಉಪನ್ಯಾಸ ನೀಡಿದರು. ಶ್ರಾವಣ ಮಾಸದ ಮಹತ್ವ, ಗುರುವಿನ ಮಹತ್ವ ಹಾಗೂ ಸಮಯದ ಮೌಲ್ಯವನ್ನು ವಿವರಿಸಿದ ಅವರು, ಜೀವನದಲ್ಲಿ ಗುರುಗಳ ಮಾರ್ಗದರ್ಶನದ ಅಗತ್ಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಈರಣ್ಣ ಗಣಪ ಅವರು ಸದ್ಗುರು ಸಿದ್ಧಾರೂಢರ ಪುರಾಣ ಮಂಗಲ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನೀಲಕಂಠಪ್ಪ ಬುಟ್ಟ, ಅಣ್ಣಪ್ಪ ಪೂಜಾರ, ಬಸವರಾಜ ಭಂಡಾರಿ, ಹನುಮಂತ ಗೌಡ್ರ, ರಾಮಕೃಷ್ಣ ಕಲ್ಯಾಣಿ, ಸ್ನೇಹಾ ಅಶೋಕ ಏಕಬೋಟೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 